ಶಾಲೆಯಲ್ಲಿ ಹೊಡೆದಾಟ: ಎರಡನೇ ತರಗತಿಯ ಬಾಲಕ ಬಲಿ

ಫಿರೋಜಾಬಾದ್, ಉತ್ತರ ಪ್ರದೇಶ: ಜಿಲ್ಲೆಯ ಕಿಶನ್ ಪುರ ಗ್ರಾಮದ ಪ್ರಾಥಮಿಕ ಶಾಲೆ ಒಂದರಲ್ಲಿ ಸಹಪಾಠಿಗಳೊಂದಿಗೆ ಒಡದಾಡಿಕೊಂಡಿದ್ದ ಎರಡನೇ ತರಗತಿಯ ಬಾಲಕ ಶಿವಂ 7 ವರ್ಷ ಎಂಬಾತ ಮಂಗಳವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಕೊಹಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಶಾಲೆಯಲ್ಲಿ ಹೊಡೆದಾಟ ನಡೆದಿದೆ. ಈ ವೇಳೆ ಒಬ್ಬ ಬಾಲಕ ಶಿವಂ ಎದೆಯ ಮೇಲೆ ಹಾರಿದ್ದಾನೆ ಎಂದು ಶಿಕೋಹಾಬಾದ್ ಠಾಣೆ ಅಧಿಕಾರಿ ಹರ್ವಿಂದ್ರ ಮಿಶ್ರಾ ತಿಳಿಸಿದ್ದಾರೆ.

ತಕ್ಷಣವೇ ಶಿವಂನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಆತ ಮಂಗಳವಾರ ಮೃತಪಟ್ಟ. ಮೃದು ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಯುತ್ತಿದೆ. ಶಾಲಾ ಆಡಳಿತ ಮಂಡಳಿಯನ್ನು ಈ ಬಗ್ಗೆ ಪ್ರಶ್ನಿಸಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *