ಹಿಂದೂ ವಿರೋಧಿ ಕಿಡಿಯನ್ನು ಆರಿಸೋ ಕೆಲಸ ಮಾಡಿದರಾ ಅಮಿರ್ ಖಾನ್..?

ಅಮಿರ್ ಖಾನ್ ಗೆ ಸಂಬಂಧಿಸಿದ ಇತ್ತಿಚಿನ ಫೋಟೋಗಳನ್ನು ನೋಡಿದಾಗ ಈ ಪ್ರಶ್ನೆ ಕಾಡುವುದಕ್ಕೆ ಶುರುವಾಗುತ್ತದೆ. ಅಮಿರ್ ಖಾನ್ ಸಿನಿಮಾ ಪ್ರೊಡಕ್ಷನ್ ಕಂಪನಿ ಶುರು ಮಾಡುತ್ತಿದ್ದಾರೆ. ಕಂಪನಿಯ ಉದ್ಘಾಟನಾ ಪೂಜೆಗೆ ಕಳಸವಿಟ್ಟು, ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ್ದಾರೆ. ಈ ಪೂಜೆಯಲ್ಲಿ ಮಾಜಿ ಪತ್ನಿ ಕಿರಣ್ ಕೂಡ ಭಾಗಿಯಾಗಿದ್ದಾರೆ. ಹಣೆಗೆ ತಿಲಕವಿಟ್ಟು, ಕಳಸವನ್ನಿಟ್ಟು ಪೂಜೆ ಮಾಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಕೆಲವರು ಈಗ ಬುದ್ದಿ ಬಂದಿರಬೇಕು ಅಲ್ಲವಾ ಎಂದು ವ್ಯಂಗ್ಯವಾಡುತ್ತಿದ್ದಾರೆ.

ಅಮಿರ್ ಖಾನ್ 2015ರಲ್ಲಿ ಭಾರತದ ಬಗ್ಗೆ ಒಂದು ಹೇಳಿಕೆಯನ್ನು ನೀಡಿದ್ದರು. ಭಾರತದಲ್ಲಿ ಅಸಹಿಷ್ಣುತೆ ಇದೆ. ಹೀಗಾಗಿ ನನ್ನ ಪತ್ನಿ ದೇಶ ತೊರೆಯುವ ಮಾತನಾಡಿದ್ಲು ಎಂದಿದ್ದರು. ಈ ಹೇಳಿಕೆ ಭಾರತೀಯರನ್ನು ಕೆರಳಿಸಿತ್ತು. ಬಳಿಕ ನಿಮಗೆಲ್ಲಾ ಭಾರತ ದೇಶ ಭಾರವಾಗಿದ್ದರೆ ದಯವಿಟ್ಟು ಪಾಕಿಸ್ತಾನಕ್ಕೆ ಹೋಗಿ ಎಂದು ವಾಗ್ದಾಳಿ ನಡೆಸಿದ್ದರು. ಬಳಿಮ ಅಮಿರ್ ಖಾನ್ ಗೆ ಆಗಿದ್ದೆಲ್ಲವೂ ಸೋಲುಗಳ ಅನುಭವ.

ಅಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಇದ್ದಂತ ಸಿನಿಮಾ. ಆದ್ರೆ ನಿರೀಕ್ಷೆಗೂ ಮೀರಿ ಮಕಾಡೆ ಮಲಗಿತ್ತು. ಈ ಸಿನಿಮಾ ಆಸ್ಕರ್ ಅವಾರ್ಡ್ ವಿನ್ನಿಂಗ್ ಸಿನಿಮಾವಾದ ಹಿಂದಿಯ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿತ್ತು. ಇದರ ರಿಮೇಕ್ ಹಕ್ಕನ್ನು ಪಡೆಯುವುದಕ್ಕೆ ಅಮಿರ್ ಖಾನ್ ಪಟ್ಟ ಪಾಡು ಅಷ್ಟಿಷ್ಟಲ್ಲ. ರಿಮೇಕ್ ಹಕ್ಕನ್ನು ಪಡೆದರು, ಅದಕ್ಕಾಗಿ ನಾಲ್ಕು ವರ್ಷಗಳ ಕಾಲ ಸಾಕಷ್ಟು ಕಷ್ಟಪಟ್ಟರು. ಸಿನಿಮಾ ರೆಡಿ ಆಯ್ತು, ಥಿಯೇಟರ್ ಗಳಲ್ಲೂ ರಿಲೀಸ್ ಆಯ್ತು. ಆದ್ರೆ ಹಿಂದೂ ವಿರೋದಿ ಹೇಳಿಕೆ ನೀಡಿ, ವಿವಾದಕ್ಕೆ ಸಿಲುಕಿದ್ದ ಅಮಿರ್ ಖಾನ್ ಸಿನಿಮಾಗಳು ಬಾಯ್ಕಾಟ್ ಸಂಪ್ರದಾಯಕ್ಕೆ ಬಲಿಯಾಯ್ತು. ಲಾಲ್ ಸಿಂಗ್ ಚಡ್ಡಾ ಕೂ ಸೋಲು ಅನುಭವಿಸಿತು.

ಇದೀಗ ಅಮಿರ್ ಖಾನ್ ಹಿಂದೂ ಸಂಪ್ರದಾಯದಂತೆ ಪೂಜೆ ಪುನಸ್ಕಾರ ಮಾಡಿದ್ದು ನೋಡಿದರೆ ಹಿಂದೂ ವಿರೋಧಿ ಹೇಳಿಕೆ ನೀಡಿ ಕೋಪದ ಅಲೆಯನ್ನು ಎಬ್ಬಿಸಿದ್ದ ಅಮಿರ್ ಖಾನ್ ಇದೀಗ ಅದೆಲ್ಲವನ್ನು ತಣ್ಣಗಾಗಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

The post ಹಿಂದೂ ವಿರೋಧಿ ಕಿಡಿಯನ್ನು ಆರಿಸೋ ಕೆಲಸ ಮಾಡಿದರಾ ಅಮಿರ್ ಖಾನ್..? first appeared on Kannada News | suddione.

source https://suddione.com/did-aamir-khan-choose-the-anti-hindu-spark/

Leave a Reply

Your email address will not be published. Required fields are marked *