
ಮೂಡಬಿದ್ರೆ ದಕ್ಷಿಣ ಕನ್ನಡ :ಆಳ್ವಾಸ್ ಕಾಲೇಜಿನ ಆವರಣದಲ್ಲಿ ಡಿಸೆಂಬರ್ 21ರಿಂದ 27ರವರೆಗೆ ನಡೆಯಲಿರುವ ಸ್ಕೌಟ್ಸ್ , ಗೈಡ್ಸ್ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯ ಅಂಗವಾಗಿ ನಡೆದ ಕಲಾಮೇಳದಲ್ಲಿ ಬುಧವಾರ ಶಿಲ್ಪಕಲಾ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಹಿರಿಯ ಶಿಲ್ಪ ಕಲಾವಿದ ಬೆಂಗಳೂರಿನ ಎಂ ರಾಮಮೂರ್ತಿ ಶಿಲ್ಪಕಲಾ ಶಿಬಿರ ಉದ್ಘಾಟಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, “ಅಂತರಾಷ್ಟ್ರೀಯ ಮಟ್ಟದ ಸಾಂಸ್ಕೃತಿಕ ಜಾಂಬೂರಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಕಲೆಯ ಕುರಿತಾದ ಪ್ರಜ್ಞೆಯನ್ನು ಜನರಿಗೆ ಬಿತ್ತರಿಸುವ ಸಲುವಾಗಿ ಕಲಾ ಮೇಳ ಆಯೋಜಿಸಲಾಗಿದೆ. ಪ್ರತಿನಿತ್ಯ ಪ್ರತಿನಿತ್ಯ ಪಾಠ ಪ್ರವಚನಗಳಲ್ಲಿ ಮಗ್ನರಾಗಿರುವ ವಿದ್ಯಾರ್ಥಿಗಳಿಗೆ ಕಲಾವಿದರ ಕೈಚಳಕದಿಂದ ಮೂಡಿದ ವಿವಿಧ ಕಲಾಕೃತಿಗಳು ಮನಸ್ಸಿಗೆ ಮುದ ನೀಡುವುದರ ಜೊತೆಗೆ ಮಾಹಿತಿಯನ್ನು ನೀಡುತ್ತದೆ ಎಂದರು.
ಚಿತ್ರಕಲೆ ಕಲಾವಿದ ಹಾಗೂ ಫೈಬರ್ ಕ್ಲೇ ಮಾಡೆಲ್ ಕಲಾವಿದ ಪುರುಷೋತ್ತಮ್ ಅಡ್ವೆ, ಪ್ರಸಾದ್ ಆರ್ಟ್ ಗ್ಯಾಲರಿಯ ಸಂಸ್ಥಾಪಕ ಕೋಟಿ ಪ್ರಸಾದ ಆಳ್ವ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.