ಎನ್‌ಡಿಎ ಎಂದರೆ “ನೋ ಡೇಟಾ ಅವೈಲೇಬಲ್”. ರಾಹುಲ್ ಗಾಂಧಿ:

ಹೊಸದಲ್ಲಿ: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಡಳಿತರೂಢ ಎನ್‌ಡಿಎ ಸರ್ಕಾರವನ್ನು ನೋ ಡೇಟಾ ಅವೈಲೇಬಲ್ (ಯಾವುದೇ ಮಾಹಿತಿ ಲಭ್ಯವಿಲ್ಲದ ಸರ್ಕಾರ) ಎಂದು ವ್ಯಂಗ್ಯವಾಡಿದ್ದಾರೆ.
ಸಂಸತ್ ಅಧಿವೇಶನದ ಮೊದಲ ವಾರದುದ್ದಕ್ಕೂ ಸರ್ಕಾರದ ಜಿಎಸ್‌ಟಿ ಏರಿಕೆ ವಿರುದ್ಧ ಪ್ರತಿಭಟನೆ ಗದ್ದಲದ ಮೂಲಕ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದವು.
ರಾಹುಲ್ ಗಾಂಧಿ ಅವರೇ ಇದರ ನೇತೃತ್ವ ವಹಿಸಿದ್ದರು. ಇದರ ಬೆನ್ನಲ್ಲೇ ರಾಹುಲ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಅವರು “ಈ ಸರ್ಕಾರ ಯಾವುದಕ್ಕೂ ಉತ್ತರಸುವುದಿಲ್ಲ, ಇದೊಂದು ಹೊಣೆಗಾರಿಕೆ ಇಲ್ಲದ ಸರ್ಕಾರ ‘ನೋ ಡೇಟಾ ಅವೈಲೇಬಲ್’ ಸರ್ಕಾರವು ತಾನು ಏನೇ ಹೇಳಿದರು ಜನರು ನಂಬಬೇಕೆಂದು ಬಯಸುತ್ತದೆ ಎಂದಿದ್ದಾರೆ. ಕರೋನಾ ಸಮಯದಲ್ಲಿ ಯಾರೂ ಮೃತಪಟ್ಟಿಲ್ಲ, ಆಮ್ಲಜನಕ ಕೊರತೆಯಿಂದ ಯಾರು ಸಾಯಲಿಲ್ಲ, ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಯಾರು ಅಸುನೀಗಲಿಲ್ಲ, ಲಾಕ್ಡೌನ್ ಸಮಯದಲ್ಲಿ ಕಾಲ್ನಡಿಗೆಯಲ್ಲಿ ತಮ್ಮ ಊರಿಗೆ ಹೊರಟ ಯಾವ ವಲಸಿಗ ಕಾರ್ಮಿಕರು ದಾರಿ ಮಧ್ಯೆ ಕೊನೆ ಉಸಿರೆಳೆಯಲಿಲ್ಲ, ಈ ಸರ್ಕಾರದ ಅವಧಿಯಲ್ಲಿ ಯಾರ ಮೇರೆಯು ಗುಂಪು ಹಲ್ಲೆ ನಡೆದಿಲ್ಲ. ಯಾವುದೇ ಪತ್ರಕರ್ತರನ್ನು ಬಂಧಿಸಿಲ್ಲ ಯಾವ ಮಾಹಿತಿಯು ಇಲ್ಲ ಯಾವ ಉತ್ತರವೂ ಇಲ್ಲ, ಯಾವ ಉತ್ತರದಾಯಿತ್ವವ ಇಲ್ಲ, ಎಂದು ವ್ಯಂಗ್ಯವಾಡಿದ್ದಾರೆ.

Views: 0

Leave a Reply

Your email address will not be published. Required fields are marked *