
ಚೆನ್ನೈ: ಒಪ್ಪಿಗೆ ಇಲ್ಲದೆ ಮದುವೆಯಾದ ಮಗಳು ಮತ್ತು ಅಳಿಯನನ್ನು ದುರುಳ ತಂದೆಯೇ ಕೊಚ್ಚಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ನಡೆದಿದೆ. ಬಂದರು ಪಟ್ಟಣ ಟುಟಿಕಾರಿನ್ ನಿವಾಸಿಗಳಾಗಿದ್ದ ನವದಂಪತಿ, ಇತ್ತೀಚೆಗೆ ಪೋಷಕರಿಂದ ದೂರ ಹೋಗಿದ್ದರು, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ, ಮದುವೆಗೆ ಮನೆಯವರ ಒಪ್ಪಿಗೆ ಇರಲಿಲ್ಲ, ವಿಶೇಷವಾಗಿ ಹುಡುಗಿಯ ತಂದೆಗೆ ಈ ಮದುವೆ ಇಷ್ಟ ಇರಲಿಲ್ಲ. ಡಿಗ್ರಿ ಕಲಿತ ಮಗಳು ಶಾಲಾ ಮಟ್ಟದಲ್ಲಿ ಶಿಕ್ಷಣ ತೊರೆದು ವ್ಯಕ್ತಿಯನ್ನು ಮದುವೆಯಾಗುವುದು ಬೇಡ ಎಂದು ಹುಡುಗಿಯ ತಂದೆ ಹಠ ಹಿಡಿದಿದ್ದ. ಆದರೆ ಅವರ ಮಾತಿಗೆ ಮನ್ನಣೆ ನೀಡದೆ ಹುಡುಗ- ಹುಡುಗಿ ಮನೆಯಿಂದ ಹೊರಗೆ ಹೋಗಿ ಮದುವೆ ಆಗಿದ್ದರು. ಇದಾದ ಬಳಿಕ ಇನ್ನಷ್ಟು ಕುಪಿತಗೊಂಡ ತಂದೆ, ಅವರು ಇರುವ ನೆಲೆಯನ್ನು ಹುಡುಕಿ ರಾತ್ರಿ ವೇಳೆ ಮಲಗಿದ್ದಾಗ ಮಚ್ಚಿನಿಂದ ಕೊಚ್ಚಿ ಇಬ್ಬರನ್ನೂ ಕೊಂದು, ಸಮೀಪದ ಪೋಲೀಸ್ ಠಾಣೆಗೆ ಆರೋಪಿ ಶರಣಾಗಿದ್ದಾನೆಂದು ಎಂದು ಪೊಲೀಸರು ತಿಳಿಸಿದ್ದಾರೆ.
Views: 0