ಕಸಾಪದ 108ನೇ ಸಂಸ್ಥಾಪನಾ ದಿನಾಚರಣೆ.

ಚಿತ್ರದುರ್ಗ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಸಾಪದ 108ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀ ಹೆಚ್.ಮಂಜುನಾಥ್‌.ಕನ್ನಡ ಕೇವಲ ಒಂದು ಭಾಷೆಯಾಗಿರದೇ ಜೀವನ ವಿಧಾನವಾಗಬೇಕು ಎಂದು ನಾವು ಕನ್ನಡವನ್ನು ಕೇವಲ ಭಾಷೆಯಾಗಿ ನೋಡದೆ ಜೀವನದ ಅವಿಭಾಜ್ಯ ಅಂಗವಾಗಿ ನೋಡಬೇಕಿದೆ ಎಂದು ಅಭಿಪ್ರಾಯಪಟ್ಟರು.ಯಾವುದೇ ಭಾಷೆಯ ಉಳಿವು ಅಳಿವು  ಆ ಭಾಷೆಯನ್ನು ಪ್ರೀತಿಸುವ ಜನಸಂಖ್ಯೆಯನ್ನು ಆಧರಿಸಿರುತ್ತದೆ ಎಂದರು.  ಕನ್ನಡವನ್ನು ಉಳಿಸಿ ಎಂದು ಹೇಳುವ ಬದಲು, ತಾಯಿಭಾಷೆಯನ್ನು ಎಲ್ಲರೂ ಪ್ರೀತಿಸಿ ಉಳಿಸುವ ಜವಾಬ್ದಾರಿ ಹೊರಬೇಕಾಗಿದೆ ಎಂದರು.

        ಸಾಹಿತಿ ಶ್ರೀಮತಿ ಗೀತಾ ಭರಮಸಾಗರ ಅವರು ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ನಾಲ್ವಡಿ ಕೃಷ್ಣರಾಜ ಒಡೆಯರ್‌, ಸರ್‌ ಎಂ.ವಿಶ್ವೇಶ್ವರಯ್ಯ ಹಾಗೂ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಕೊಡುಗೆಯನ್ನು ಸ್ಮರಿಸಿದರು. ಕನ್ನಡ ಸಾಹಿತ್ಯ ಪರಿಷತ್ತು 1915 ರಲ್ಲಿ ಸ್ಥಾಪಿತವಾಗಿದ್ದರಿಂದಲೇ ಇಂದಿಗೂ ಕನ್ನಡ ಭಾಷೆಯ ಮತ್ತು ಭಾಷಿಕರ ಅಸ್ಮಿತೆಯನ್ನು ಕಾಪಾಡುವ ಅಧಿಕೃತ ಸಂಸ್ಥೆಯಾಗಿ ಬೆಳೆದಿದೆ. ಕನ್ನಡಿಗರ ಮನೋಬಲ ವೃದ್ಧಿಗೊಳಿಸುವ, ಕನ್ನಡತನವನ್ನು ಉಳಿಸುವ ಸರ್ವ ಪ್ರಯತ್ನವನ್ನು ಮಾಡುತ್ತಿದೆ. ಸಮ್ಮೇಳನಗಳು, ಕವಿಗೋಷ‍್ಠಿಗಳ ಆಯೋಜನೆ, ಪುಸ್ತಕಗಳ ಅಭಿವೃದ್ಧಿ ಮತ್ತು ಮಾರಾಟ, ಕರ್ನಾಟಕ ಸಂಸ್ಕೃತಿಯ ಪುನರ್‌ ಸ್ಥಾಪನೆಗೆ ಒತ್ತಾಸೆಯಾಗಿ ನಿಂತಿದೆ ಎಂದರು.

        ಡಯಟ್‌ನ ಉಪನ್ಯಾಸಕ ಆರ್.ನಾಗರಾಜ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಎಲ್ಲ ಭಾಷೆಯನ್ನು ಕಲಿಯಿರಿ ಆದರೆ ಕನ್ನಡವನ್ನು ಪ್ರೀತಿಸಿ ಆರಾದಿಸಿ ಎಂದರು. ಸರ್ಕಾರ ಕನ್ನಡ ಭಾಷೆಯ ಉಳಿವಿಗಾಗಿ ಹೊಸ ಯೋಜನೆಗಳ ಜೊತೆಗೆ ಕನ್ನಡ ಸಂಸ್ಥೆಗಳ ಸಹಕಾರ ಪಡೆದು ಕನ್ನಡಿಗರ ಮನಸ್ಸು ಗೆಲ್ಲಬೇಕು. ಆಡಳಿತ ಭಾಷೆಯಾಗಿ  ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂದು ಅಭಿಪ್ರಾಯಪಟ್ಟರು.

        ಕಾರ್ಯಕ್ರಮದಲ್ಲಿ ಕಸಾಪ ತಾಲ್ಲೂಕು ಅಧ್ಯಕ್ಷ ಶ್ರೀ ರಾಮಲಿಂಗಶೆಟ್ಟಿ, ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರಾದ ಶ್ರೀಮತಿ ಟಿ.ಜಿ.ಲೀಲಾವತಿ, ಶ್ರೀನಿವಾಸರೆಡ್ಡಿ , ಕಸಾಪ ತಾಲ್ಲೂಕಿನ ಶ್ರೀ ರೇವಣಸಿದ್ದಪ್ಪ, ಗೌರವ ಕಾರ್ಯದರ್ಶಿ ನವೀನ್‌.ಪಿ  ಉಪಸ್ಥಿತರಿದ್ದರು. ಶ್ರೀ ಗಿರೀಶ್‌ ಸ್ವಾಗತಿಸಿ, ವೆಂಕಟೇಶ್‌ ಮೂರ್ತಿ ನಿರೂಪಿಸಿದರು.

Leave a Reply

Your email address will not be published. Required fields are marked *