
ಹೈದರಾಬಾದ್ : ತೆಲಂಗಾಣ ಪ್ರವಾಸದಲ್ಲಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ತೆಲುಗು ನಟ ಜೂನಿಯರ್ ಎನ್ ಟಿಆರ್ ಭೇಟಿಯಾಗಿರುವುದು ರಾಜಕೀಯ ವಲಯದಲ್ಲಿ ಬುಧವಾರ ಮೂಡಿಸಿದೆ. ಭಾನುವಾರ ರಾತ್ರಿ ಮಾಜಿ ಸಿಎಂ ಏನ್. ಟಿ. ರಾಮರಾವ್ ಮೊಮ್ಮಗ ಜೂನಿಯರ್ ಎನ್ ಟಿಆರ್ ಭೇಟಿಯಾದ ಅಮಿತ್ ಶಾ ಸುಧೀರ್ಘ ಮಾತುಕತೆ ನಡೆಸಿದ್ದಾರೆ. ಆದರೆ, ಇಬ್ಬರ ನಡುವೆ ನಡೆದ ಮಾತುಕತೆ ಬಗ್ಗೆ ಯಾವುದೇ ಮಾಹಿತಿ ಹೊರ ಬಿದ್ಇದಿಲ್ಲ.
ಜೂನಿಯರ್ ಎನ್ ಟಿಆರ್ ಭೇಟಿ ಬಗ್ಗೆ ಟ್ವೀಟ್ ಮಾಡಿರುವ ಶಾ “ಒಬ್ಬ ಪ್ರತಿಭಾವಂತ ನಟ, ತೆಲುಗು ಚಿತ್ರರಂಗದ ರತ್ನ ಜೂನಿಯರ್ ಎನ್ ಟಿಆರ್ ಭೇಟಿಯಾಗಿ ಮಾತನಾಡಿದ್ದೇನೆ. ಇದೊಂದು ಅತ್ಯುತ್ತಮ ಸಂವಾದ” ಎಂದು ಹೇಳಿದ್ದಾರೆ.
ಭೇಟಿ ವೇಳೆ ರಾಜ ಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಲ್ಲಿನ ಜೂನಿಯರ್ ಎನ್ ಟಿರ್ ನಟನೆ ಬಗ್ಗೆ ಅಮಿತ್ ಶಾ ಮೆಚ್ಚುಗೆ ಮಾತನಾಡಿದರು ಎಂದು ತಿಳಿದು ಬಂದಿದೆ. ಮುಂಬರುವ ಆಂಧ್ರಪ್ರದೇಶ ಹಾಗೂ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಎನ್ ಟಿಆರ್ ಅಭಿಮಾನಿಗಳನ್ನು ಸೆಳೆಯಲು ಅಮಿತ್ ಶಾಪ್ ಅವರು ಜೂನಿಯರ್ ಎನ್ ಟಿಆರ್ ಭೇಟಿಯಾಗಿದ್ದಾರೆ ಎಂದು ಹೇಳಲಾಗಿದೆ.