ಬೆಂಗಳೂರು: ಜರ್ಮನಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದ ಬಳಿಕ ಕೆಲವು ಸಮಯ ವಿಶ್ರಾಂತಿ ಪಡೆದು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಮರಳಿರುವ ಟೀಮ್ ಇಂಡಿಯಾ ಆಟಗಾರ ಕೆ. ಎಲ್ ರಾಹುಲ್ ಪ್ರಸ್ತುತ ಬೆಂಗಳೂರಿನ ಎನ್‌ಸಿಎ ನಲ್ಲಿ ಕಠಿಣ ಬ್ಯಾಲೆನ್ಸ್ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಜುಲೈ 29ರಂದು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಗೆ ಸಜ್ಜಾಗುವುದು ಅವರ ಮುಖ್ಯ ಉದ್ದೇಶ. ಎನ್ ಸಿಎ ನೆಟ್ಸ್ ನಲ್ಲಿ ರಾಹುಲ್ ಗೆ ಭಾರತದ ಮಹಿಳೆಯರ ತಂಡದ ಹಿರಿಯ ಬೌಲರ್ ಜೂಲನ್ ಗೋಸ್ವಾಮಿ ಬೌಲಿಂಗ್ ಮಾಡಿದ್ದಾರೆ. ಈ ಕುರಿತು ವಿಡಿಯೋ ಸಾಮಾಜಿಕ ತಾಳಗಳಲ್ಲಿ ವೈರಲ್ ಆಗಿದೆ. ಕಳೆದ ತಿಂಗಳು ತವರಿನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ನಾಯಕನಾಗಿ ಕೆ ಎಲ್ ರಾಹುಲ್ ಸ್ಪೋರ್ಟ್ಸ್ ಹರ್ನಿಯಾದಿಂದಾಗಿ ಸರಣಿಯಿಂದ ದೂರ ಉಳಿದಿದ್ದರು.
Views: 0