ಕೇಂದ್ರದ ವರದಿ: ಸುಮಾರು 4 ಕೋಟಿ ಜನ  ಸಿಂಗಲ್  ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲಿ.  

ನವದೆಹಲಿ: ಕೋರೊನಾ ಲಸಿಕೆಗೆ ಸಂಬಂಧಿಸಿದಂತೆ ಜುಲೈ 18 ರ ವರೆಗೆ ಸುಮಾರು 4 ಕೋಟಿ ಜನರು ಕೋವಿಡ್ -19ರ ಒಂದೇ ಒಂದು ಲಸಿಕೆಯನ್ನು ಪಡೆದಿಲ್ಲ, ಎಂದು ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.

ಸರ್ಕಾರಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ ಒಟ್ಟು 178,38,52,566 ಲಸಿಕೆ ಡೋಸ್ ಗಳನ್ನು ಅಂದರೆ ಶೇ 97.34 ರಷ್ಟು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾರತದ ಶೇ 98 ರಷ್ಟು ಹದಿ ಹರೆಯದವರಿಗೆ ಮೊದಲ ಕೋರೊನಾ ಲಸೊಕೆಯನ್ನು ನೀಡಲಾಗಿದೆ. ಶೇ 90 ರಷ್ಟು ಜನರು ಎರಡೂ ಡೋಸ್ ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಇಲ್ಲಿಯವರೆಗೆ, ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ದೇಶದಲ್ಲಿ 201.68 ಕೋಟಿ ಡೋಸ್ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

Leave a Reply

Your email address will not be published. Required fields are marked *