
ನವದೆಹಲಿ: ಟೀಮ್ ಇಂಡಿಯಾದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಗೆ ಕೋವಿಡ್ 19 ಸೋಂಕು ತಗಲಿದೆ. ಹೀಗಾಗಿ ಅವರು ಏಷ್ಯಾಕಪ್ ಗಾಗಿ ರೋಹಿತ್ ಶರ್ಮ ಸಾರಥ್ಯದ ಭಾರತ ತಂಡದೊಂದಿಗೆ ದುಬೈಗೆ ತರಲಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಂಗಳವಾರ ಹೇಳಿದ್ದಾರೆ. ಯುಎಇ ನಲ್ಲಿ ಆಗಸ್ಟ್ 27ರಂದು ಏಷ್ಯಾ ಕಪ್ ಟಿ20 ಮಾದರಿ ಆರಂಭಗೊಳ್ಳಲಿದೆ.
“ದ್ರಾವಿಡ್ ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ನಿಗಾದಲ್ಲಿದ್ದಾರೆ. ಅವರಲ್ಲಿ ಸಣ್ಣ ಪ್ರಮಾಣದ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ. ಕೋವಿಡ್ 19 ವರದಿಯಲ್ಲಿ ನೆಗೆಟಿವ್ ಬಂದ ಬಳಿಕ ಅವರು ಯು ಎ ಇ ನಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಶಾ ತಿಳಿಸಿದ್ದಾರೆ.
ತಂಡದ ಹೆಚ್ಚಿನಲ್ಲ ಸದಸ್ಯರು ಮಂಗಳವಾರ ಬೆಳಗ್ಗೆ ದುಬೈಗೆ ತೆರಳಿದ್ದಾರೆ. ಉಪನಾಯಕ ಕೆ ಎಲ್ ರಾಹುಲ್, ದೀಪಕ್ ಹೂಡ ಮೀಸಲು ಆಟಗಾರ ಅಕ್ಷರ ಪಟೇಲ್ ಹರಾರೆಯಿಂದ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಇವರೆಲ್ಲ ಇಲ್ಲಿಯ ತನಕ ಜಿಂಬಾಂಬೆ ವಿರುದ್ಧದ ಏಕದಿನ ಸರಣಿಗಾಗಿ ಹರಾರಿಯಲ್ಲಿದ್ದರು.