ಟಿಇಟಿ ಫಲಿತಾಂಶ ಪ್ರಕಟ: 61 ಸಾವಿರ ಮಂದಿ ಉತ್ತೀರ್ಣ

ಬೆಂಗಳೂರು ನವೆಂಬರ್ ನಲ್ಲಿ ನಡೆದಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿ ಇ ಟಿ) ಫಲಿತಾಂಶ ಬುಧವಾರ ಪ್ರಕಟವಾಗಿದ್ದು. ಪತ್ರಿಕೆ-1 ಮತ್ತು ಪತ್ರಿಕೆ-2 ಸೇರಿ ಒಟ್ಟಾರೆ 61,927 ಅಭ್ಯರ್ಥಿಗಳು ಅರ್ಹತೆ ಹೊಂದಿದ್ದಾರೆ. 1 ರಿಂದ 5ನೇ ತರಗತಿಯ ಪತ್ರಿಕೆ-1ರ ಪರಿಕ್ಷೆಯಲ್ಲಿ 1,40,790ರಲ್ಲಿ 20,070 ಅಭ್ಯರ್ಥಿಗಳು, 6ರಿಂದ 8ನೇ ತರಗತಿಯ ಪತ್ರಿಕೆ-2ರಲ್ಲಿ 1,92,066 ರಲ್ಲಿ 41,857 ಮಂದಿ ಅರ್ಹರಾಗಿದ್ದಾರೆ. ಒಟ್ಟಾರೆ 3,32,856 ಅಭ್ಯರ್ಥಿಗಳಲ್ಲಿ 61,927 ಮಂದಿ ಅರ್ಹತೆ ಹೊಂದಿದ್ದಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಕ್ಯೂಆರ್ ಕೋಡ್ ಅಂಕಪಟ್ಟಿ:ಕೇಂದ್ರೀಕೃತ ದಾಖಲಾತಿ ಘಟಕವು ಮುದ್ರಿತ ಅಂಕಪಟ್ಟಿಯನ್ನು ವಿತರಿಸುವುದಿಲ್ಲ. ಕನಿಷ್ಠ ಅರ್ಹತೆ ಅಂಕ ಪಡೆದವರು ಕ್ಯು ಆರ್ ಕೋಡ್ ಬಳಸಿ ವೆಬ್ ಸೈಟ್ ನಲ್ಲಿ ನೀಡಲಾದ ಲಿಂಕ್ ಮೂಲಕ ಗಣಕೀಕೃತ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *