ತುಮಕೂರು HAL ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

ತುಮಕೂರು: ಚುನಾವಣೆ ಹತ್ತಿರವಿರುವಾಗಲೇ ಪ್ರಧಾನಿ ಮೋದಿ ಇಂದು ತುಮಕೂರಿಗೆ ಆಗಮಿಸಲಿದ್ದಾರೆ. ಈಗಾಗಲೇ ಬೆಂಗಳೂರಿಗೆ ಬಂದಿಳಿದಿರುವ ಪ್ರಧಾನಿ ಮೋದಿ, ಮಾದಾವರ ಬಳಿ ಇರುವ ಅಂತರಾಷ್ಟ್ರೀಯ ವಸ್ತು ಕೇಂದ್ರಕ್ಕೆ ಭೇಟಿ ನೀಡಿ, ಸಪ್ತಾಹ ಉದ್ಘಾಟನೆ ಮಾಡಲಿದ್ದಾರೆ. ಅಲ್ಲಿ ಜಾಗತಿಕ ತೈಲದ ಬಗ್ಗೆ ಚರ್ಚೆ ನಡೆಯಲಿದೆ.

ಇಂದು ರ್ಯಾಲಿಗೂ ಚಾಲನೆ ನೀಡಲಿದ್ದಾರೆ. ಇಂಡಿಯನ್ ಆಯಿಲ್ ಅನ್ ಬಾಟೆಲ್ಡ್, ಮರದಿಂದ ತಯಾರಿಸಿದ ವಸ್ತುಗಳು, ಸೈನ್ಯಕ್ಕೆ ಬೇರೆ ಸಮಯದಲ್ಲಿ ಬೇಕಾಗುವಂತ ಉಡುಪುಗಳು ಹೀಗೆ ಅನೇಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಂದು ಸಪ್ತಾಹದಲ್ಲಿ ಚರ್ಚೆಯಾಗಲಿದೆ.

ಬಳಿಕ ಮಧ್ತಾಹ್ನ 3 ಗಂಟೆಯ ನಂತರ ತುಮಕೂರಿಗೆ ಭೇಟಿ ನೀಡಲಿದ್ದು, ಅಲ್ಲಿಯೂ ಹೆಚ್ಎಎಲ್ ಉದ್ಘಾಟನೆ ಮಾಡಲಿದ್ದಾರೆ. ಹಲವು ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಅಭಿವೃದ್ದಿ ಮಂತ್ರದ ಜೊತೆಗೆ ಚುನಾವಣಾ ಮಂತ್ರವನ್ನು ಫಾಲೋ ಮಾಡುತ್ತಿದೆ. ಇದೆ ಕಾರಣಕ್ಕೆ ಹಳೇ ಮೈಸೂರು ಭಾಗದಲ್ಲಿ ಜನರ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ತುಮಕೂರಿನಲ್ಲಿ ಹನ್ನೊಂದು ವಿಧಾನಸಭಾ ಕ್ಷೇತ್ರವಿದ್ದು, ಇಲ್ಲಿಯೂ ಮತಬೇಟೆ ಶುರು ಮಾಡಿದ್ದಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದಿದ್ದು, ಬಿಜೆಪಿ ನಾಯಕರಲ್ಲಿ ಮತ್ತಷ್ಟು ಹುಮ್ಮಸ್ಸು ಸಿಕ್ಕಿದೆ.

The post ತುಮಕೂರು HAL ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/1wuB53e
via IFTTT

Leave a Reply

Your email address will not be published. Required fields are marked *