ಫೇಸ್ ಬುಕ್ ನಿಂದ ಮಹಿಳೆಯರು ದೂರ!!

ಹೊಸದಿಲ್ಲಿ

ಹೊಸದಿಲ್ಲಿ: ಫೇಸ್ಬುಕ್ ಮಾಲೀಕತ್ವದ ಕಂಪನಿ ‘ಮೇಟಾ’ ನಡೆಸಿರುವ ಆಂತರಿಕ ವರದಿಯಲ್ಲಿ ಪುರುಷ ಪ್ರಧಾನ
ಸಾಮಾಜಿಕ ಜಾಲತಾಣ ವೇದಿಕೆ ಎನಿಸಿರುವ ಫೇಸ್ಬುಕ್ನಿಂದ ಹಲವು ಮಹಿಳಾ ಬಳಕೆದಾರರು ದೂರವಾಗುತ್ತಿರುವುದು ತಿಳಿದು ಬಂದಿದೆ. ಮೇಟಾ ಸಂಶೋಧನೆ ಪ್ರಕಾರ ಮಹಿಳೆಯರಿಗೆ ಫೇಸ್ಬುಕ್ನಲ್ಲಿ ತಮ್ಮ ಖಾತೆಯ ಖಾಸಗಿತನ ಮತ್ತು ಸುರಕ್ಷತೆ ಬಗ್ಗೆ ಭಾರಿ ಆತಂಕವಿದೆ.
ಅಶ್ಲೀಲತೆಯ ಬರಹಗಳು, ಫೋಟೋಗಳು, ವಿಡಿಯೋಗಳು ಹೆಚ್ಚು ಹರಿದಾಡುವ ಬಗ್ಗೆಯೂ ಫೇಸ್ಬುಕ್ ನ ಮಹಿಳಾ ಬಳಕೆದಾರರು ಆತಂಕ ಹೊರ ಹಾಕಿದ್ದಾರೆ. 2021ರ ಅಂತ್ಯದವರೆಗೆ ಒಟ್ಟು ಎರಡು ವರ್ಷಗಳವರೆಗೆ ಆಂತರಿಕ ಸಂಶೋಧನೆಯನ್ನು ಕಂಪನಿ ನಡೆಸಿದೆ. ಮುಖ್ಯವಾಗಿ ವಿದೇಶಗಳಿಗಿಂತ ಭಾರತದಲ್ಲಿನ ಫೇಸ್ಬುಕ್ ಬಳಕೆದಾರರ ವೇದಿಕೆಯಲ್ಲಿ ಅತ್ಯಂತ ಹೆಚ್ಚು ನಕಾರಾತ್ಮಕ ಅಂಶಗಳು, ಅಶ್ಲೀಲತೆ ತುಂಬಿಕೊಂಡಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
ಭಾರತೀಯ ಮಹಿಳೆಯರಿಗೆ ಫೇಸ್ಬುಕ್ ಬಳಕೆ ಕುರಿತು ಇರುವ ಮತ್ತೊಂದು ಆತಂಕವೆಂದರೆ, ತಮ್ಮ ಮಾಹಿತಿಗಳ ಸೋರಿಕೆ ಮತ್ತು ಅಪರಿಚಿತರ ಪರಿಚಯದ ಕುರಿತು ಎನಲಾಗಿದೆ. ಕಳೆದ ಫೆಬ್ರವರಿ 2ರಂದು ತನ್ನ ತ್ರೈಮಾಸಿಕ ವರದಿಯಲ್ಲಿ ಬಳಕೆದಾರರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿರುವುದನ್ನು ಗುರುತಿಸಿತ್ತು. ಮೇಟಾದ ಪ್ರಧಾನ ಹಣಕಾಸು ಅಧಿಕಾರ ಡೇಟ್ ವೆಹ್ನರ್ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ವಿಶ್ವದಲ್ಲಿ ಅತಿ ಹೆಚ್ಚು ಫೇಸ್ಬುಕ್ ಬಳಕೆದಾರರನ್ನು ಭಾರತ ಹೊಂದಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಭಾರತದಲ್ಲಿನ ಫೇಸ್ಬುಕ್ ಬಳಕೆದಾರರ ಸಂಖ್ಯೆ 45 ಕೋಟಿಗೂ ಹೆಚ್ಚಿತ್ತು.

Leave a Reply

Your email address will not be published. Required fields are marked *