ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯೂ ನೂತನವಾದ ಟ್ರೈನ್ ಅನ್ನು ಪರಿಚಯ ಮಾಡಿಕೊಡುತ್ತಿದೆ. ಅದುವೆ ಮಹಾರಾಜ ಟ್ರೈನ್. ಈಗಾಗಲೇ ಸಾಕಷ್ಟು ಟ್ರೈನ್ ಗಳನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಅದರಲ್ಲಿ ಎಸಿ, ಹೈಸ್ಪೀಡ್, ವಂದೇ ಭಾರತ್ ಹೀಗೆ ಹಲವು ವಿಶೇಷ ಟ್ರೈನುಗಳನ್ನು ಬಿಟ್ಟಿದ್ದಾರೆ. ಈಗ ಹೊಸದಾಗಿ ಮಹಾರಾಜ ಟ್ರೈನ್ ಬಿಟ್ಟಿದ್ದಾರೆ.
ಮಹಾರಾಜ ಟ್ರೈನಿನಲ್ಲಿ ಹಲವು ವಿಶೇಷತೆಗಳನ್ನು ಹೊಂದಿದೆ. ಆದರೆ ಇದರ ಟಿಕೆಟ್ ದರ ಕೇಳಿದರೆ ಶಾಕ್ ಆಗುವುದು ಗ್ಯಾರಂಟಿ. ಮಹಾರಾಜ ಟ್ರೈನ್ ಐಷಾರಾಮಿ ಅನುಭವವನ್ನು ನೀಡುತ್ತದೆ. ಈ ಟ್ರೈನಿನಲ್ಲಿ ಅತಿಥಿಗಳಿಗೆ ಸ್ವರ್ಗ ಲೋಕವನ್ನೇ ಸೃಷ್ಟಿಸುತ್ತದೆ. ದಿ ಇಂಡಿಯನ್ ಪನೋರೋಮಾ, ಟ್ರೆಷರ್ಸ್ ಆಫ್ ಇಂಡಿಯಾ, ದಿ ಇಂಡಿಯನ್ ಸ್ಪ್ಲೆಂಡರ್ ಮತ್ತು ದಿ ಹೆರಿಟೇಜ್ ಆಫ್ ಇಂಡಿಯಾ ಎಂಬ ನಾಲ್ಕು ಭಾಗಗಳಲ್ಲಿ ಮಾಡಲಾಗಿದೆ.
ಇನ್ನು ಪ್ರಯಾಣಿಕರು ಯಾವುದಾದರು ಒಂದು ಆಯ್ಕೆ ಮಾಡಬಹುದು. ಏಳು ದಿನಗಳ ಕಾಲ ಪ್ರವಾಸ ಮಾಡಬಹುದು. ಒಂದು ಕೋಚ್‌ನಲ್ಲಿ ಡೈನಿಂಗ್ ಹಾಲ್, ಸ್ನಾನಗೃಹ ಹಾಗೂ ಎರಡು ಐಷಾರಾಮಿ ಬೆಡ್‌ರೂಮ್‌ಗಳು, ಎರಡು ದೊಡ್ಡ ಕಿಟಕಿಗಳು ಇರಲಿವೆ. ಪ್ರತಿ ಪ್ಯಾಸೆಂಜರ್‌ಗೂ ಪ್ರತ್ಯೇಕ ಬಟ್ಲರ್‌ಗಳ ಸೇವೆಗೆ ಮೀಸಲಾಗಿರುತ್ತದೆ. ಮಿನಿ ಬಾರ್, ಎಸಿ ಹಾಗೂ ವೈ-ಫೈ ಸೌಲಭ್ಯ, ಇಂಟರ್‌ನೆಟ್, ಟಿವಿ ಹಾಗೂ ತಮ್ಮಿಷ್ಟದ ಸಿನಿಮಾಗಳನ್ನು ನೋಡಲು ಡಿವಿಡಿ ಪ್ಲೇಯರ್‌ಗಳ ಅತ್ಯಾಧುನಿಕ ಸೌಲಭ್ಯಗಳು ಇರುತ್ತವೆ. ಇನ್ನು ಟಿಕೆಟ್ ಗೆ 19 ಲಕ್ಷ ಬೆಲೆ ಇರಲಿದೆ. ಜಿಎಸ್ಟಿ ಸೇರಿ, 19,90,800 ಆಗಲಿದೆ. ಈ ಟ್ರೈನಿನ ಒಳಗಿನ ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ.
The post ಮಹಾರಾಜ ಎಕ್ಸ್‌ಪ್ರೆಸ್ ಟ್ರೈನ್ ಗೆ ಟಿಕೆಟ್ ದುಡ್ಡಲ್ಲಿ ಆಸ್ತಿಯನ್ನೇ ಕೊಳ್ಳಬಹುದು..! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/6u3XK7Y
via IFTTT