
ಲಂಡನ್ : ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜಿನಾಮೆ ಹಿನ್ನೆಲೆಯಲ್ಲಿ ಅವರ ಉತ್ತರಾಧಿಕಾರಿ ಪ್ರಧಾನಿ ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಾಕ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಇತ್ತೀಚಿನ ನಾಲ್ಕನೇ ಸುತ್ತಿನ ಚುನಾವಣೆಯಲ್ಲೂ ಅವರು ಅಗ್ರ ಸ್ಥಾನ ಕಾಯ್ದುಕೊಂಡಿದ್ದು, ಗೆಲುವಿನ ಸನಿಹ ತಲುಪಿದ್ದಾರೆ. ಸಂಸದೆ ಕೆಮಿ ಬಡೆನೋಜ್ ಸ್ಪರ್ಧೆಯಿಂದ ಹೊರ ಬಿದ್ದಿದ್ದಾರೆ. ಬ್ರಿಟನ್ ಮಾಜಿ ಹಣಕಾಸು ಸಚಿವರೂ ಆಗಿರುವ ರಿಷಿ, ಅವರು ಮಂಗಳವಾರ ನಡೆದ ಮೂರನೇ ಸುತ್ತಿನ ಮತದಾನದಲ್ಲಿ 118 ಮತಗಳನ್ನು ಪಡೆದು ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಮತ್ತು ಬ್ರಿಟನ್ ಪಿಎಂ ಸ್ಪರ್ಧೆ ಸ್ಥಾನದಿಂದ ಮೇಲಿನ ಹಿಡಿತವನ್ನು ಬಿಗಿಗೊಳಿಸಿದ್ದಾರೆ. ರಿಷಿ ಅವರ ಬಳಿಕ ವಾಣಿಜ್ಯ ಸಚಿವೆ ಪೆನ್ನಿ ಮೋರ್ಡಾಂಟ್ ಅವರು 92, ವಿದೇಶಾಂಗ ಸಚಿವ ಲಿಜ್ ಟ್ರಸ್ ಅವರು 86 ಮತಗಳನ್ನು ಪಡೆದು ರೇಸ್ ನಲ್ಲಿದ್ದಾರೆ. ಅಂತಿಮ ರೇಸ್ನಲ್ಲಿ ಇಬ್ಬರು ಅಭ್ಯರ್ಥಿಗಳು ಮಾತ್ರ ಉಳಿಯುವವರಿಗೆ ಸಂಸದರು ಮತ ಚಲಾಯಿಸುತ್ತಾರೆ. ಪಕ್ಷದೊಳಗಿನವರಿಂದಲೇ ವಿರೋಧ ಕಟ್ಟಿಕೊಂಡು ಬೋರಿಸ ಜಾನ್ಸನ್ ಜುಲೈ 7ರಂದು ಕನ್ಸ್ ರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದರು. ಸೆಪ್ಟೆಂಬರ್ 5 ರಂದು ಹೊಸ ನಾಯಕನ ಆಯ್ಕೆ ಯಾಗುವವರೆಗೂ ಅವರು ಪ್ರಧಾನಿಯಾಗಿ ಮುಂದುವರಿಯುತ್ತಾರೆ.