ಶತಕ ವಂಚಿತ ಶಿಖರ್ ಧವನ್ ನಿರಾಸೆ:


ಪೋರ್ಟ್ ಆಫ್ ಸ್ಪೇನ್ : ವೆಸ್ಟ್ ಇಂಡೀಸ್ ತಂಡದ ವಿರುದ್ಧ ಶುಕ್ರವಾರ ತಡರಾತ್ರಿ ಮುಕ್ತಾಯಗೊಂಡ ಏಕದಿನ ಪಂದ್ಯದಲ್ಲಿ ಕೇವಲ 3 ರನ್ ಗಳಿಂದ ಶತಕ ವಂಚಿತನಾದದ್ದು ಭಾರತ ತಂಡದ ನಾಯಕ ಶಿಖರ್ ಧವನ್ ಗೆ ಸ್ವಲ್ಪಮಟ್ಟಿಗೆ ನಿರಾಸೆ ಉಂಟು ಮಾಡಿದೆ. ಏನೇ ಆದರೂ ಅವರ ಜವಾಬ್ದಾರಿಯುತ ಅರ್ಧ ಶತಕ ಹಾಗೂ ಶುಭ ಶುಬ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರ ಅರ್ಧ ಶತಕಗಳ ನೆರವಿನಿಂದ ಟೀಮ್ ಇಂಡಿಯ ಭರ್ಜರಿ ಮೊತ್ತವನ್ನು ಕಲೆಹಾಕಿತು. ಅಂತಿಮವಾಗಿ ಮಹಮ್ಮದ್ ಸಿರಾಜ್ ಸಾರಥ್ಯದ ಬೌಲಿಂಗ್ ಪಡೆಯ ಕರಾರುವ ದಾಳಿಯ ನೆರವಿನಿಂದ ಟೀಮ್ ಇಂಡಿಯಾ 3 ರನ್ ಗಳ ಅಂತರದಿಂದ ಅತಿಥೇಯ ತಂಡವನ್ನು ಸೋಲಿಸಿತು. ದವನ್ ಗೆ ಅರ್ಹವಾಗಿ ಪಂದ್ಯ ಶ್ರೇಷ್ಠ ಪುರಸ್ಕಾರವು ದೊರೆಯಿತು.
ಪಂದ್ಯ ಮುಗಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಧವನ್ ‘100 ರನ್ ಗಳಿಸಲು ಸಾಧ್ಯವಾಗದಿರುವುದಕ್ಕೆ ನಿರಾಸೆಯಾಯಿತು. ಏನೇ ಆದರೂ ಗೆಲುವಿಗಾಗಿ ತಂಡ ಶ್ರಮಿಸಿತು. ಕೊನೆಯಲ್ಲಿ ಉತ್ತಮ ಸ್ಕೋರ್ ಗಳಿಸಿದೆವು. ಪಂದ್ಯದ ಅಂತಿಮ ಘಟ್ಟದಲ್ಲಿ ಸ್ವಲ್ಪ ಒತ್ತಡ ಉಂಟಾಯಿತು. ಅದನ್ನು ನಾವು ನಿರೀಕ್ಷಿಸಿರಲಿಲ್ಲ, ಆದರೂ ತಾಳ್ಮೆಯಿಂದಲೇ ಮುಂದುವರೆದವು. ನಮ್ಮ ರಣತಂತ್ರ ಫಲಿಸಿತು. ಇದರಿಂದ ಪಾಠ ಕಲಿತೆವು. ಉಳಿದ ಪಂದ್ಯಗಳಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯತ್ತ ಗಮನ ಹರಿಸಬೇಕು ಎಂದರು.

Views: 0

Leave a Reply

Your email address will not be published. Required fields are marked *