ಹೋದಲ್ಲೆಲ್ಲಾ ಅಭ್ಯರ್ಥಿ ಘೋಷಣೆ ಸರಿಯಲ್ಲ : ಸಿದ್ದರಾಮಯ್ಯ ವಿರುದ್ಧ ಗುಡುಗಿದ ಸ್ನೇಹಿತ..!

ಕೊಪ್ಪಳ: 2023ರ ವಿಧಾನಸಭಾ ಚುನಾವಣೆ ಹತ್ತಿರ ಸಂಭವಿಸುತ್ತಿದ್ದಂತೆ, ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಸಿದ್ದರಾಮಯ್ಯ ಅವರು ಕೂಡ ಕೆಲವೊಂದು ಜಿಲ್ಲೆಗಳಿಗೆ ಹೋದಾಗ ಇವರಿಗೆ ವೋಟ್ ನೀಡಿ, ಇವರಿಗೆ ನಿಮ್ಮ ಬೆಂಬಲವಿರಲಿ ಎಂದು ಹೇಳುತ್ತಾ ಇರುತ್ತಾರೆ. ಈ ಹೇಳಿಕೆ ಸಂಬಂಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಈ ನಡೆ ಬಗ್ಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಹೋದ ಕಡೆಯಲ್ಲೆಲ್ಲಾ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಸರಿಯಲ್ಲ. ಅರ್ಜಿ ಹಾಕಿದವರಿಗೆಲ್ಲಾ ನಮಗೂ ಟಿಕೆಟ್ ಸಿಗಬಹುದು ಎಂಬ ಆಸೆಗಳಿರುತ್ತವೆ. ಇದರಿಂದ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ. ಇನ್ನು ಕೂಡ ಅರ್ಜಿ ಹಾಕಿದವರ ಬಗ್ಗೆ ಇತ್ಯರ್ಥವಾಗಿಲ್ಲ ಎಂದಿದ್ದಾರೆ.

ಗಡಿ ವಿವಾದ ಬಗೆಹರಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಆಗಾಗ ಮರಾಠಿಗರು ಕನ್ನಡಿಗರ ಮೇಲೆ ಕ್ಯಾತೆ ತೆಗೆಯುತ್ತಲೆ ಇರುತ್ತಾರೆ. ಈ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಇದೊಂಥರ ಮಳೆ ಇದ್ದ ಹಾಗೆ. ವರ್ಷಕ್ಕೊಮ್ಮೆ ಮಳೆ ಬಂದ ಹಾಗೆ ಬರುತ್ತಾ ಇರುತ್ತದೆ. ಹಾಗೇ ಚುನಾವಣೆ ಬಂದಾಗೆಲ್ಲಾ ಗಡಿ ವಿವಾದ ಬರುತ್ತಲೇ ಇರುತ್ತದೆ ಎಂದಿದ್ದಾರೆ.

The post ಹೋದಲ್ಲೆಲ್ಲಾ ಅಭ್ಯರ್ಥಿ ಘೋಷಣೆ ಸರಿಯಲ್ಲ : ಸಿದ್ದರಾಮಯ್ಯ ವಿರುದ್ಧ ಗುಡುಗಿದ ಸ್ನೇಹಿತ..! first appeared on Kannada News | suddione.

from ರಾಜ್ಯ ಸುದ್ದಿ – Kannada News | suddione https://ift.tt/LxTGdB5
via IFTTT

Leave a Reply

Your email address will not be published. Required fields are marked *