📰 ದಿನಾಂಕ: ಜುಲೈ 26 | ಸ್ಥಳ: ಚಿತ್ರದುರ್ಗ
📸Suresh Pattan News & Photos
ಚಿತ್ರದುರ್ಗ:
“ನಿಜವಾದ ನಿಸ್ವಾರ್ಥಿಯೇ ಸೈನಿಕನಾಗಲು ಸಾಧ್ಯ. ಸೈನಿಕ ನಿಜವಾದ ಸರ್ವಸಂಗಪರಿತ್ಯಾಗಿ. ದೇಶಪ್ರೇಮದ ಪರಮೋಚ್ಚ ಸ್ಥಾನವೇ ಸೈನಿಕ,” ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಜುಲೈ 26 ರಂದು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಮಾತನಾಡಿದರು.
🪖 ಎಸ್ ಜೆ ಎಸ್ ಸಮೂಹ ವಿದ್ಯಾಸಂಸ್ಥೆ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳು ಪಾಲ್ಗೊಂಡು ವೀರ ಯೋಧರ ಶೌರ್ಯ ಮತ್ತು ಬಲಿದಾನವನ್ನು ಸ್ಮರಿಸಿದರು.

“ಯೋಧರು ವ್ಯಾಕ್ತಿಗೆ, ವಸ್ತುವಿಗೆ, ಮನೆಗೆ ಬದಲಿ ದೇಶಕ್ಕೆ ಬದ್ದರಾಗಿರುವವರೇ. ಪ್ರಾಣಾರ್ಪಣೆಗೂ ಸಿದ್ಧರಾಗಿರುವ ಈ ಯೋಧರೇ ನಿಜವಾದ ದೇವರು” ಎಂದು ಸ್ವಾಮೀಜಿ ಪ್ರಭಾವೀ ಭಾಷಣ ನೀಡಿದರು.
✨ ಪ್ರಧಾನ ಮಾತುಗಳು:
ಯೋಧನ ಜೀವನವು ಅಪಾಯಗಳಿಂದ ತುಂಬಿರುತ್ತದೆ.
ತಮ್ಮ ಕುಟುಂಬಗಳಿಂದ ದೂರವಿದ್ದು ದೇಶದ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಎಲ್ಲರೂ ಗೌರವ ತೋರಬೇಕು.
ದೇಶದ ಶಾಂತಿಯು ಸೈನಿಕರ ಬಲಿದಾನದ ಫಲ.
ವಿದ್ಯಾರ್ಥಿಗಳು ಸೈನಿಕರ ವೇಷಧರಿಸಿ ದೇಶಭಕ್ತಿ ನಾಟಕ, ಆಶುಭಾಷಣ ಮತ್ತು ಕಾರ್ಯಕ್ರಮಗಳನ್ನು ನಡೆಸಿದರು.
🎭 ಕಾರ್ಯಕ್ರಮದ ಹೈಲೈಟ್ಸ್:
ವಿದ್ಯಾರ್ಥಿಗಳಿಂದ ಕಿರು ನಾಟಕಗಳು, ದೇಶಭಕ್ತಿ ಗೀತೆಗಳು.
ಪೋಷಕರು ಮತ್ತು ಶಿಕ್ಷಕರ ಉಪಸ್ಥಿತಿ.
ಪ್ರೇರಣಾದಾಯಕ ವಕ್ತೃತ್ವ.