🎯 ಇಂದು ಈ ರಾಶಿಯವರು ರೋಗವನ್ನು ನಿರ್ಲಕ್ಷಿಸದೇ ವೈದ್ಯರನ್ನು ಭೇಟಿಯಾಗುವರು
🗓️ ನಿತ್ಯ ಪಂಚಾಂಗ:
ಶಾಲಿವಾಹನ ಶಕೆ: ೧೯೪೮
ಸಂವತ್ಸರ: ವಿಶ್ವಾವಸು
ದಕ್ಷಿಣಾಯನ | ಋತು: ವರ್ಷ
ಚಾಂದ್ರ ಮಾಸ: ಶ್ರಾವಣ
ಸೌರ ಮಾಸ: ಕರ್ಕಾಟಕ
ಮಹಾನಕ್ಷತ್ರ: ಪುಷ್ಯಾ
ವಾರ: ಬುಧ
ತಿಥಿ: ಷಷ್ಠೀ
ನಿತ್ಯನಕ್ಷತ್ರ: ಹಸ್ತಾ
ಯೋಗ: ಪರಿಘ
ಕರಣ: ಬವ
ಸೂರ್ಯೋದಯ: 🌅 06:16 am
ಸೂರ್ಯಾಸ್ತ: 🌇 07:01 pm
🕒 ಇಂದಿನ ಶುಭಾಶುಭ ಕಾಲ:
🔴 ರಾಹು ಕಾಲ: 12:33 – 02:12
🟡 ಗುಳಿಕ ಕಾಲ: 10:54 – 12:33
⚫ ಯಮಗಂಡ ಕಾಲ: 07:37 – 09:16
🔮 ರಾಶಿಫಲಗಳು:
♈ ಮೇಷ ರಾಶಿ:
ಅವಕಾಶಗಳು ನಿಮ್ಮ ದಾರಿಗೇ ಬರಬಹುದು. ಅವುಗಳನ್ನು ಪಡೆದುಕೊಳ್ಳಲು ಇದು ಸರಿಯಾದ ಸಮಯ. ಯಾರ ಬೆಂಬಲಕ್ಕೂ ನೀವು ಸುಮ್ಮನೇ ಇರಲಾರಿರಿ. ಭೂಮಿಯ ಉತ್ಪನ್ನವನ್ನು ತಯಾರಿಸುತ್ತಿದ್ದರೆ ಉತ್ತಮ ಲಾಭವಿದೆ. ಸಾಲಬಾಧೆಯಿಂದ ಕೆಟ್ಟ ಕೆಲಸವನ್ನು ಮಾಡಲು ಪ್ರೇರಣೆಯಾಗಬಹುದು. ಇದರಿಂದ ಇನ್ನಷ್ಟು ಇಂದು ಹೊಸ ಕೆಲಸಕ್ಕಾಗಿ ಮಾಡಲಾಗುತ್ತಿರುವ ಪ್ರಯತ್ನಗಳು ಶುಭವಾಗಲಿದೆ. ಇಲ್ಲವಾದರೆ ನಷ್ಟವಾಗಬಹುದು. ಕೆಲಸ ಮತ್ತು ಖರ್ಚಿನ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳುವುದು ನಿಮಗೆ ಮುಖ್ಯ. ಹೇಳಿದ್ದನ್ನು ಪಾಲಿಸುವುದು ಅನಿವಾರ್ಯ ಹಾಗೂ ಕಷ್ಟ. ಮಾನಸಿಕ ಚಂಚಲತೆ ವಿಪರೀತವಾಗುವುದರಿಂದ ಅದನ್ನು ಹತೋಟಿಯಲ್ಲಿಡುವಿರಿ. ನೆರೆಹೊರೆಯವರ ಜೊತೆ ಸೌಹಾರ್ದವಿರಲಿ ಬಾಂಧವ್ಯವಿರಲಿ. ಯಾರದೋ ಉಪಕಾರಕ್ಕಾಗಿ ನೀವು ವೃಥಾ ತಿರುಗಾಡುವಿರಿ. ಬೇಡವೆನಿಸಿದ್ದನ್ನು ಯಾವ ಕಾಲಕ್ಕೂ ಪಡೆಯಲಾರಿರಿ. ಕಾರ್ಯಗಳನ್ನು ಹಂಚಿ ನೀವು ನಿಶ್ಚಿಂತರಾಗುವಿರಿ.
♉ ವೃಷಭ ರಾಶಿ:
ಆಕರ್ಷಕ ವ್ಯಕ್ತಿತ್ವವು ಇತರರ ಮೇಲೆ ಪರಿಣಾಮ ಬೀರುತ್ತದೆ. ಅಪರಿಚಿತ ವ್ಯಕ್ತಿಗಳು ನಿಮಗೆ ಬಹಳ ಆಪ್ತರಾಗುವರು. ಇಂದು ನಂಬಿಕೆಯ ವಿಚಾರದಲ್ಲಿ ಮನಸ್ಸು ಮುರಿದುಹೋಗುವುದು. ಹಣಕಾಸನ್ನು ಭದ್ರವಾಗಿ ಇಟ್ಟುಕೊಳ್ಳಿ. ಮೋಸ ಹೋಗುವ ಸಾಧ್ಯತೆ ಇದೆ. ಇಂದು ವ್ಯವಹಾರದಲ್ಲಿ ಲಾಭ ಪಡೆಯುತ್ತಾರೆ. ಹಳೆಯ ಸ್ನೇಹಿತರಿಂದ ನಿಮಗೆ ಸಹಾಯ ಸಿಗಲಿದೆ. ಹಿರಿಯರ ಜೊತೆ ನಿಷ್ಠುರ ಏರ್ಪಡಬಹುದು. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೆಗೆದುಕೊಳ್ಳವುದು ಬೇಡ. ಸರ್ಕಾರಿ ನೌಕರರಿಗೆ ಅದರಲ್ಲೂ ಉನ್ನತಾಧಿಕಾರಿಗಳಿಗೆ ಪದೋನ್ನತಿ ಆಗಬಹುದುದು. ಸಮಕಾಲೀನವಾಗಿ ನೀವು ಬಹಳ ಹಿಂದಿರುವಿರಿ ಎಂದು ಗೊತ್ತಾಗುತ್ತದೆ. ನಿಮ್ಮ ಕೆಲವು ಹೊಸ ಪ್ರಯತ್ನಗಳು ಫಲ ನೀಡುತ್ತವೆ. ನಿಮ್ಮ ವೈಯಕ್ತಿಕ ಕಾರ್ಯಗಳು ಹಲವು ಹಾಗಯೇ ಉಳಿದುಕೊಂಡಿರುವುದು. ಸಾಲದ ಬಾಧೆಯು ನಿಮ್ಮ ಮನಸ್ಸನ್ನು ಚುಚ್ಚುವುದು. ನಿಮ್ಮನ್ನು ನೀವೇ ನೋಡಿಕೊಳ್ಳುವಿರಿ.
♊ ಮಿಥುನ ರಾಶಿ:
ಹಿರಿಯರ ಜೊತೆ ವಾದದಲ್ಲಿ ಭಾಗಿಯಾಗುವುದನ್ನು ತಪ್ಪಿಸಲಾಗದು. ಸಂಗಾತಿಯ ಜೊತೆ ಕಲಹದ ಕಾರಣ ಎಲ್ಲವೂ ಅಸ್ತವ್ಯಸ್ತ ಆಗಬಹುದು. ಇಂದು ನಿಮಗೆ ಕುಟುಂಬ ಜೊತೆ ಸಲುಗೆಯಿಂದ ಕಾಲವನ್ನು ಕಳೆಯುವ ಮನಸ್ಸಿರುವುದು. ಕಾರ್ಯದ ಒತ್ತಡದಿಂದ ಪೂರ್ತಿಯಾಗಿ ಆಗದೇ ಹೋಗಬಹುದು. ಈ ಮೊದಲೇ ನೀವು ನಿಲ್ಲಿಸಿದ ಯಾ ಕೆಲಸವು ಇಂದು ಪೂರ್ಣವಾಗುವುದು. ಕಚೇರಿಯಲ್ಲಿ ನೀವು ಅಧೀನ ಕಾರ್ಮಿಕರಿಂದ ಒತ್ತಡವನ್ನು ಅನುಭವಿಸುವಿರಿ. ಸಣ್ಣ ಸಣ್ಣ ವಿಷಯಗಳನ್ನು ತಪ್ಪಿಸುವುದು ಒಳ್ಳೆಯದು. ಹಿತಶತ್ರುಗಳ ಮಾತನ್ನು ನಂಬಬೇಕಾದೀತು. ಸಾಧ್ಯವಾದಲ್ಲಿ ಪಾಲುದಾರಿಕೆಯ ಒಪ್ಪಂದವನ್ನು ರದ್ದು ಪಡಿಸಿಕೊಳ್ಳಿ. ಮುಂದೆ ನಿಮ್ಮ ಹಣಕ್ಕೆ ತೊಂದರೆ ಬರಲಿದೆ. ಭೂ ವ್ಯವಹಾರದಲ್ಲಿ ಕೈ ಹಾಕಲು ಹೋಗಲೇಬೇಡಿ. ಹಣವನ್ನು ಹೊಂದಿಸುವುದು ಇಂದು ಸುಲಭದ ಕೆಲಸವಲ್ಲ. ಅನ್ಯರ ಕಾರಣದಿಂದ ತಾಳ್ಮೆಯ ಕಟ್ಟೆ ಒಡೆಯಬಹುದು. ಉದ್ಯಮದ ಕಾರಣಕ್ಕೆ ಅಧಿಕ ಸುತ್ತಾಟವು ಇರುವುದು. ದುಃಖಿಗಳಿಗೆ ನಿಮ್ಮಿಂದಾದ ಸಾಂತ್ವನ ಹೇಳಿ.
♋ ಕರ್ಕಾಟಕ ರಾಶಿ:
ಇಂದು ಬೆಳವಣಿಗೆಯ ನಿರೀಕ್ಷೆಗಳನ್ನು ಯೋಜಿಸುತ್ತಿದ್ದರೆ ಸಮಯ ಕಳೆಯುವುದು. ನೀವು ಹಣವನ್ನು ಖರ್ಚು ಮಾಡದೇ ಜಿಪುಣರಂತೆ ತೋರುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಇಂದು ನಿಮ್ಮ ಮಾತಿನ ಮೃದುತ್ವವು ನಿಮ್ಮ ಗೌರವವನ್ನು ಹೆಚ್ಚಿಸುವುದು. ದುರಭ್ಯಾಸದಿಂದ ಗೊತ್ತಾಗದಂತೆ ಹಣವು ಖರ್ಚಾಗುವುದು. ಇಂದು ನಿಮ್ಮ ಸಹನೆಯ ಪರೀಕ್ಷೆಯೂ ಆಗಬಹುದು. ಉತ್ತಮ ಫಲಿತಾಂಶ ಇದರಿಂದ ಹೊರಬರಲಿದೆ. ಸ್ನೇಹವನ್ನು ಬಲವಂತವಾಗಿ ಪಡೆದುಕೊಳ್ಳುವುದು ಬೇಡ. ಇನ್ನೊಬ್ಬರಿಗೆ ಕೊಟ್ಟ ಹಣವು ಸಕಾಲಕ್ಕೆ ಬಾದೆ ನೀವೇ ಸಾಲಗಾರರಾಗುವ ಪ್ರಸಂಗವು ಬಂದರೂ ಬಂದೀತು. ಸುಮ್ಮನೇ ಎಲ್ಲದಕ್ಕೂ ಒಪ್ಪಿಗೆಯನ್ನು ಸೂಚಿಸುವುದು ಬೇಡ. ಬೇಕಾದವರನ್ನು ಮಾತಿನಿಂದ ದೂರ ಮಾಡಿಕೊಳ್ಳುವಿರಿ. ನಿಮ್ಮ ಅತಿಯಾದ ಮಾತು ಕಿರಿಕಿರಿ ಮಾಡೀತು. ಕಛೇರಿಯಲ್ಲಿ ನಿಮ್ಮ ಅಭಿಪ್ರಾಯವೂ ಮುಖ್ಯವಾಗಬಹುದು.
♌ ಸಿಂಹ ರಾಶಿ:
ಕೀಲು ನೋವುಗಳು ದಿನವಿಡೀ ನಿಮ್ಮನ್ನು ತೊಂದರೆಗೊಳಿಸಬಹುದು. ವಿದ್ಯಾಭ್ಯಾಸದಲ್ಲಿ ಪ್ರಗತಿಯ ಜೊತೆ ಶತ್ರುಗಳೂ ಉಂಟಾಗುವರು. ನಿಮ್ಮ ಮುಂಗೋಪವು ಸಂಗಾತಿಗೆ ಮುಜುಗರ ಆಗುವುದು. ಉದ್ಯೋಗದಿಂದ ಹೊರನಡೆಯುವ ಸಾಧ್ಯತೆ ಇದೆ. ಇಂದು ನೀವು ಜೀವನೋಪಾಯಕ್ಕೆ ತೋಚಿದ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ವಿಳಂಬದಿಂದ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಹಿಡಿದ ಕಾರ್ಯವನ್ನು ಮುಗಿಸುವಂತಹ ಛಲಗಾರಿಕೆ ನಿಮಗೆ ಅವಶ್ಯಕ. ಇದು ನಿಮ್ಮ ಯಶಸ್ಸಿನ ಗುಟ್ಟೂ ಆಗಿದೆ. ಮಾತನಾಡುವ ಪೂರ್ವದಲ್ಲಿ ಅದರಿಂದ ಉಂಟಾಗುವ ಪರಿಣಾಮದ ಬಗ್ಗೆಯೂ ಗಮನವಿರಲಿ. ಧನ ಮತ್ತು ಮಾನಗಳನ್ನು ಕಳೆದುಕೊಳ್ಳಬೇಕಾಗುವುದು. ಸ್ಥಾನವು ಕೈ ತಪ್ಪುವುದು ಎಂಬ ಭೀತಿ ಇರಲಿದೆ. ಪ್ರಾಮಾಣಿಕತೆಯು ಇಂದು ನಿಮಗೆ ವರದಾನವಾಗುವುದು. ಅಪರಿಚಿತ ಸ್ಥಳದಿಂದ ಭೀತಿಯಾಗಬಹುದು. ಮಕ್ಕಳನ್ನು ನಯವಾಗಿ ಪರಿವರ್ತನೆ ಮಾಡುವುದು ಸೂಕ್ತ.
♍ ಕನ್ಯಾ ರಾಶಿ:
ಇಂದು ಪ್ರೇಮ ಜೀವನವು ಕೆಲವು ತೊಡಕುಗಳನ್ನು ಆಹ್ವಾನಿಸಬಹುದು. ಸ್ನೇಹಿತರ ಒತ್ತಾಯಕ್ಕೆ ಮೋಜಿಗಾಗಿ ಹಣವನ್ನು ಹಾಕಿ ಕಳೆದುಕೊಳ್ಳುವಿರಿ. ಮನೆಯ ಬಗ್ಗೆ ನಿಮಗೆ ಒಲವು ಕಡಮೆಯಾದೀತು. ಸಮಯಕ್ಕೆ ಸರಿಯಾಗಿ ನಿಮ್ಮ ಜವಾಬ್ದಾರಿಯನ್ನು ಮುಗಿಸುವಿರಿ. ನಿಮ್ಮ ಶತ್ರುಗಳ ಸಂಖ್ಯೆಯು ಇಂದು ಹೆಚ್ಚಾಗಬಹುದು. ರಾಜಕೀಯದಲ್ಲಿ ತೊಡಗಿರುವ ಜನರಿಗೆ ಒಳ್ಳೆಯ ಅನುಕೂಲವಿರಲಿದೆ. ಆಹಾರ ಮರೆತು ನಿಮ್ಮನ್ನು ನೀವು ಶಿಕ್ಷಿಸಿಕೊಳ್ಳಬೇಡಿ. ಹಣವಿಲ್ಲದಿದ್ದರೂ ಕೊರಗು ಇರದು. ಅದನ್ನು ನಿಯಂತ್ರಣ ಮಾಡುವ ಜಾಣ್ಮೆಯೂ ಇದೆ. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅಗತ್ಯವಾಗಿರಲಿದೆ. ಹಣದ ಅಪವ್ಯಯವು ಆಗದಂತೆ ನೋಡಿಕೊಳ್ಳಿ. ಮಾತಿನಲ್ಲಿ ಹಿಡಿತವಿದ್ದರೆ ನಿಮಗೆ ಇಂದು ಕ್ಷೇಮ. ಸಣ್ಣದಕ್ಕೂ ಸಂಗಾತಿಯ ಬೆಂಬಲವನ್ನು ಅಪೇಕ್ಷಿಸುವಿರಿ. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡಿ. ಹಳೆಯ ತಪ್ಪಿನಿಂದ ಪಾಠ ಕಲಿಯಬೇಕು. ಬೇಡದ ಜವಾಬ್ದಾರಿಯನ್ನು ಮೈಮೇಲೆ ಹಾಕಿಕೊಳ್ಳುವಿರಿ.
♎ ತುಲಾ ರಾಶಿ:
ಹೊಸ ಯೋಜನೆಯು ಬಿಕ್ಕಟ್ಟಿನಿಂದ ಹೊರಬರಲು ನಿಮಗೆ ಸಹಾಯ ಮಾಡುತ್ತದೆ. ಅನಾರೋಗ್ಯದಿಂದ ಕಿರುಕುಳವನ್ನು ಸಹಿಸುವುದು ಕಷ್ಟವಾಗುವುದು. ಇಂದು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಏನಾದರೂ ಬಾಲಿಶವಾದದ್ದನ್ನು ಮಾಡುವ ಮೊದಲು ನಿಮ್ಮ ವರ್ತನೆಯ ಪರಿಣಾಮದ ಬಗ್ಗೆ ಆಲೋಚಿಸಿ. ಇಂದು ಹಣದ ವಿಷಯದಲ್ಲಿ ಅನುಕೂಲವಿದೆ. ಮಕ್ಕಳಿಗೆ ಸಂಬಂಧಿಸಿದ ಶುಭ ಸುದ್ದಿಯು ಬರಲಿದೆ. ವ್ಯಾಪಾರದ ಲಾಭಕ್ಕೆ ಅಡ್ಡದಾರಿ ಹಿಡಿಯುವ ಸಂದರ್ಭ ಬರಲಿದೆ. ನೀವು ಸಾಕಷ್ಟು ವಿರೋಧಿಗಳನ್ನು ಹೊಂದಿದ್ದರೂ ನಿಮ್ಮನ್ನು ಗೆಲ್ಲಲು ಸಾಧ್ಯವಾಗುವುದಿಲ್ಲ. ನಿಮ್ಮನ್ನು ವಿರೋಧಿಸುವವರನ್ನು ನೀವು ಇಷ್ಟಪಡಲಾರಿರಿ. ಸ್ನೇಹಿತನ ಭೇಟಿಯಿಂದ ಮನಸ್ಸು ತುಂಬಾ ಸಂತೋಷವಾಗುವುದು. ಅವರ ಎಲ್ಲಾ ಸಹಕಾರಗಳನ್ನು ತೆಗೆದುಕೊಳ್ಳಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಬಹುದು. ನಿಮ್ಮ ಅಧ್ಯಯನವು ಕಡಿಮೆಯಾಗಲಿದೆ. ಯಾರಾದರೂ ಮಾನಸಿಕವಾದ ಒತ್ತಡವನ್ನು ತರಿಸಬಹುದು. ನಿಮ್ಮ ನಿರ್ಧಾರವನ್ನು ಮತ್ತೊಬ್ಬರಿಗೆ ಹೇರಿ ಖುಷಿಪಡುವಿರಿ.
♏ ವೃಶ್ಚಿಕ ರಾಶಿ:
ಸಾಮಾಜಿಕ ಕಾರ್ಯದಲ್ಲಿ ಸಕ್ರಿಯರಾಗುವುದನ್ನು ತಪ್ಪಿಸಿ. ಜೀವನದಲ್ಲಿ ಸ್ವಲ್ಪ ನೆಮ್ಮದಿ ಸಿಗುತ್ತದೆ. ಆದಾಯ ಕಡಿಮೆ ಇದ್ದರೂ ನೆಮ್ಮದಿ ಇರಲಿದೆ. ಇಂದು ನಿಮ್ಮ ಮಾತು ಕಡಿಮೆ ಇದ್ದಷ್ಟೂ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು. ಅವಿವಾಹಿತರಿಗೆ ಮಾಂಗಲ್ಯ ಭಾಗ್ಯ ಕೂಡಿಬರಲಿದೆ. ಕ್ರೀಡೆಯಲ್ಲಿ ಜಯಗಳಿಸುವ ಸಾಧ್ಯತೆ ಇದೆ. ನಿಮ್ಮ ಹೂಡಿಕೆಯಿಂದ ವ್ಯರ್ಥ ಓಡಾಟವಾಗಬಹುದು. ಪುಣ್ಯ ಸ್ಥಳಗಳ ಭೇಟಿಯ ಭಾಗ್ಯ ಸಿಗುವುದು. ಆಸ್ತಿ ಖರೀದಿಗೆ ಕಾಲವು ಉತ್ತವವಾಗಿದ್ದರೂ ನಿಮಗೆ ಧೈರ್ಯವು ಸಾಲದೇ ಹೋದೀತು. ನಿಮಗೆ ಹಣದ ಸಹಾಯವು ತಾನಾಗಿಯೇ ಬರುವುದರಿಂದ ಇದ್ದ ಚಿಂತೆಯು ದೂರಾಗುವುದು. ಇದು ನಿಮ್ಮ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸುತ್ತದೆ. ಯಾರನ್ನೋ ಅವಲಂಬಿಸಿ ನೀವು ಕೆಲಸ ಮಾಡುವುದು ಬೇಡ. ಯಾವುದೇ ಕೆಲಸಕ್ಕೆ ಬೇರೆಯವರ ಮೇಲೆ ಅವಲಂಬಿತರಾಗಬೇಡಿ. ಉದ್ಯಮವು ದಿಕ್ಕು ತಪ್ಪದಂತೆ ನೋಡಿಕೊಳ್ಳಿ. ಹೊರದೇಶಕ್ಕೆ ನೀವು ಹೋಗಬೇಕಾದ ಸ್ಥಿತಿಯು ಬರಬಹುದು. ಸ್ವ ಉದ್ಯೋಗ ನಿಮಗೆ ಹಿತವೆನಿಸುವುದು.
♐ ಧನು ರಾಶಿ:
ಕಷ್ಟದ ಕಾಲದಲ್ಲಿ ಸಂಗಾತಿ ನಿಮ್ಮ ಪಕ್ಕದಲ್ಲಿ ಇರುವುದರಿಂದ ನೀವು ಅದೃಷ್ಟಶಾಲಿ. ದ್ವೇಷ ಬರುವಂತಹ ಕೆಲಸವನ್ನು ಮಾಡುವುದು ಬೇಡ. ಇಂದು ಅನಿರೀಕ್ಷಿತವಾಗಿ ವೈವಾಹಿಕ ಸಂಬಂಧವು ಕೂಡಿ ಬರಬಹುದು. ಬಂದ ಯೋಗವನ್ನು ಬಿಡುವುದು ಬೇಡ. ಇಂದು ಏನನ್ನೂ ಸಾಲವಾಗಿ ಕೊಡುವುದು ಬೇಡ. ಅಧಿಕ ಖರ್ಚೇ ನಿಮ್ಮ ಅಶಾಂತಿಗೆ ಕಾರಣವಾಗುವುದು. ಮನೆ ಸದಸ್ಯರ ಮಧ್ಯೆ ಮೂಡಿದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಸೌಹಾರ್ದತೆ ಮೂಡಲಿದೆ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಂಡು ಹೋಗಿ. ದೂರ ಪ್ರಯಾಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವ ಸಂಭವವಿದೆ. ಮತ್ತೊಬ್ಬರ ಜೊತೆ ವಿನಾಕಾರಣ ವಾಗ್ವಾದ ಬೇಡ. ಕೆಲಸದಲ್ಲಿ ಗಮನವಿರಲಿ. ನೀವು ಹಳೆಯ ಸ್ನೇಹಿತರನ್ನು ಭೇಟಿ ಮಾಡಲು ಹೋಗಬಹುದು. ಸ್ವಂತ ಬುದ್ಧಿಯಿಂದ ನಿಮ್ಮ ಕಾರ್ಯವನ್ನು ಮಾಡಿಕೊಳ್ಳಿ. ವ್ಯಾಪಾರಕ್ಕೆ ಯೋಗ್ಯವಾದ ಮಾತು ಇರಲಿ. ನಿಮ್ಮ ಇಂದಿನ ಮಾತು ಕೇಳುಗರಿಗೆ ಹೃದ್ಯವಾಗುವುದು.
♑ ಮಕರ ರಾಶಿ:
ನಿಮ್ಮ ಮಕ್ಕಳೊಂದಿಗೆ ನೀವು ಖರ್ಚು ಮಾಡಲು ಬಯಸುತ್ತೀರಿ. ಇದರಿಂದ ಅವರು ನಿಮ್ಮ ಹೆಚ್ಚಿನದನ್ನು ಕಾಣುತ್ತಾರೆ. ಇಂದು ದೇವರ ಮೇಲೆ ಸಂಪೂರ್ಣ ಭಾರ ಹಾಕಿ ನಿಮ್ಮ ಕಾರ್ಯವನ್ನು ಆರಂಭಿಸುವಿರಿ. ನಿಮ್ಮ ಅತ್ಯುತ್ಸಾಹಕ್ಕೆ ದೇಹವು ಸಹಕರಿಸದೇ ಇರಬಹುದು. ಮಕ್ಕಳ ತುಂಟಾಟಕ್ಕೆ ಅವರಿಗೆ ಬೈದು ಅವರ ದ್ವೇಷಕ್ಕೆ ಕಾರಣರಾಗುವಿರಿ. ಇಂದು ಕಲೆಗೆ ಸಂಬಂಧಿಸಿ ಮಾಡುತ್ತಿರುವ ಸುಖಾಂತ್ಯವಾಗುವುದು. ಪಾಲುದಾರರ ಜೊತೆಗಿನ ಒಪ್ಪಂದವು ಅಂತ್ಯವಾಗಬಹುದು. ಧನಾಗಮನ ನಿರೀಕ್ಷೆಯಿಂದ ನೀವು ಸಾಲವನ್ನು ಪಡೆಯುವಿರಿ. ಕಛೇರಿಯಲ್ಲಿ ಸಹೋದ್ಯೋಗಿಯು ಕೊಡುವ ಎಲ್ಲ ಸಹಕಾರವನ್ನೂ ತೆಗೆದುಕೊಳ್ಳಿ. ನಿಮ್ಮ ತಾಯಿಯ ಕಡೆಯಿಂದ ಆರ್ಥಿಕ ಲಾಭವನ್ನು ಪಡೆಯುತ್ತಿರುವಿರಿ. ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ನಿಮಗೆ ಶುಭ ಸುದ್ದಿಯು ಬರುವುದು. ಉದ್ಯಮದಲ್ಲಿ ನಿಮಗೆ ಪ್ರಗತಿ ಕಾಣಿಸುವುದು. ಉಚಿತವಾದ ಸ್ಥಾನವು ಇಂದು ನಿಮಗೆ ಸಿಗಬಹುದು. ವಿಶ್ವಾಸ ಘಾತದಿಂದ ನಿಮಗೆ ಬೇಸರವಾಗುವುದು.
♒ ಕುಂಭ ರಾಶಿ:
ಇಂದು ಸಾಂಸ್ಕೃತಿಕ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಗಮನ ನೀಡಬೇಕು. ವಿವಾಹಕ್ಕೆ ಎದುರಾಗುವ ದೈವಿಕ ಸಮಸ್ಯೆಯನ್ನು ಧಾರ್ಮಿಕ ಆಚರಣೆಗಳ ಮೂಲಕ ಸರಿ ಮಾಡಿಕೊಳ್ಳಬಹುದು. ಸಾಮಾಜಿಕ ಜಾಲತಾಣದಲ್ಲಿ ಸಮಯವನ್ನು ಹೆಚ್ಚು ಕಳೆಯಬಹುದು. ಇಂದು ಹಣಕಾಸಿನ ವಿಚಾರದಲ್ಲಿ ಮಾಡಿದ ಪ್ರಯತ್ನಗಳು ಸಫಲವಾಗುವುವು. ಕಲೆಗೆ ಸಂಬಂಧಿಸಿದವರಾಗಿದ್ದರೆ ದೂರದ ಊರಿಗೆ ಪ್ರಯಾಣ ಮಾಡುವಿರಿ. ಮರ್ಯಾದೆಯನ್ನು ಮೀರಿ ನೀವು ವರ್ತಿಸುವುದು ಕಷ್ಟವಾಗುವುದು. ಕಠಿಣ ಪರಿಶ್ರಮ ಮತ್ತು ದೃಢ ನಿರ್ಧಾರದಿಂದ ಸೃಜನಶೀಲವಾದ ಯಾವುದೋ ಒಂದು ನಿಮ್ಮ ಕೆಲಸದ ಸ್ಥಳದಲ್ಲಿ ಪ್ರತಿಫಲಿಸುತ್ತದೆ. ಅನವಶ್ಯಕ ವಸ್ತುಗಳನ್ನು ಖರೀದಿಸಿ ದಂಡ ಮಾಡುವಿರಿ. ನೀವು ನಿಮ್ಮ ಹಿರಿಯರ ಸಲಹೆಯನ್ನು ಅನುಸರಿಸಿದರೆ ಉತ್ತಮವಾದುದನ್ನು ಪಡೆಯುವಿರಿ. ದೇಹಕ್ಕೆ ಆಯುಧದಿಂದ ಘಾಸಿಯಾಗಬಹುದು. ಆತುರದಲ್ಲಿ ಯಾವುದೇ ಕೆಲಸ ಮಾಡುವುದನ್ನು ಮುಖ್ಯ ಕಾರ್ಯಗಳೇ ಮರೆತುಹೋಗಬಹುದು. ನಿಮ್ಮ ವಿರೋಧಿಗಳಲ್ಲಿ ಒಬ್ಬರು ನಿಮಗೆ ಕಿರುಕುಳ ನೀಡಲು ಪ್ರಯತ್ನಿಸಬಹುದು.
♓ ಮೀನ ರಾಶಿ:
ಉದ್ಯಮದ ಯಶಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ನೀವು ಏಕಾಂತವಾಗಿ ಇರಲು ಯಾರೂ ಬಿಡರು. ಯಾರದೋ ದ್ವೇಷಕ್ಕೆ ನೀವು ಬಲಿಯಾಗಬೇಕಾದೀತು. ಏನಾದರೂ ಅಡಚಣೆ ಇರುವುದು. ನಿಮ್ಮೊಳಗೆ ಅತೃಪ್ತಭಾವವು ಇರಲಿದೆ. ಇಂದು ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳಬಹುದು. ಇದು ನಿಮಗೆ ಬಹಳ ದಿನಗಳ ಅನಂತರದ ಸಂತೋಷ ನೀಡುವ ಸಂಗತಿಯಾಗಲಿದೆ. ಇಂದು ಮಾಡುವ ಸ್ವಯಂ ಸೇವೆಯ ಕೆಲಸ ಹೆಮ್ಮೆಯಾಗುವುದು. ಸಾಮರಸ್ಯವನ್ನು ಉಂಟುಮಾಡುವುದು ಸುಲಭದ ಕಾರ್ಯವಲ್ಲ. ನೀವು ಇಂದು ನಿಮ್ಮದೇ ಹೊಸ ಉದ್ಯೋಗವನ್ನು ಪ್ರಾರಂಭಿಸುವ ಯೋಚನೆ ಹುಟ್ಟಿಕೊಳ್ಳುವುದು. ಹಿರಿಯರಿಂದ ನಿಮಗೆ ಬರಬೇಕಾದ ಆಸ್ತಿಯು ಬರಬಹುದು. ದುಡುಕುತನ, ಮುಂಗೋಪಗಳೆಲ್ಲ ಕಡಿಮೆಯಾಗಲಿದೆ. ಸಹೋದರರು ನಿಮ್ಮ ಕಷ್ಟದಲ್ಲಿ ಭಾಗಿಯಾಗುವರು. ಯಾವದನ್ನೂ ಕ್ಷಣದಲ್ಲಿ ಬದಲಿಸಲಾಗದು. ಯಾವುದೇ ಹೂಡಿಕೆ ಸಂಬಂಧಿತ ಯೋಜನೆಯ ಬಗ್ಗೆ ನಿಮಗೆ ಮಾಹಿತಿ ಬಂದರೆ, ಅದರಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ.