ಭಾರತದ ಪ್ರತಿ ಮಗುವೂ ತಪ್ಪದೇ ಓದಬೇಕಾದ 10 ಪುಸ್ತಕಗಳಿವು; ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಜೊತೆಯಾಗಲಿ ಈ ಪುಸ್ತಕಗಳು.

ಆದರೆ ಮನೆಯಲ್ಲೂ ಮಕ್ಕಳಿಗೆ ಕೆಲವು ಉತ್ತಮ ಅಭ್ಯಾಸಗಳನ್ನು ರೂಢಿಸುವ ಮೂಲಕ ಬೇಸಿಗೆ ರಜೆಯನ್ನು ಅರ್ಥಪೂರ್ಣವಾಗಿ ಕಳೆಯುವಂತೆ ಮಾಡಬಹುದು. ಅಂತಹ ಅಭ್ಯಾಸಗಳಲ್ಲಿ ಪುಸ್ತಕ ಓದುವ ಹವ್ಯಾಸವೂ ಒಂದು. ಪುಸ್ತಕ ಓದುವುದರಿಂದ ಮಕ್ಕಳಲ್ಲಿ ತಿಳುವಳಿಕೆ, ಜ್ಞಾನ ಹೆಚ್ಚುವ ಜೊತೆಗೆ ನಮ್ಮ ಪುರಾತನ ಸಂಸ್ಕೃತಿಯ ಬಗ್ಗೆಯೂ ತಿಳಿದುಕೊಳ್ಳುವಂತೆ ಮಾಡಬಹುದು. ಭಾರತದಲ್ಲಿ ಹಲವು ಮಹಾಗ್ರಂಥಗಳಿದ್ದು, ಇದರಲ್ಲಿನ ಕಥೆಗಳು ಮಕ್ಕಳುಗಳಿಂದ ಮಕ್ಕಳು ಕಲಿಯುವುದು ಸಾಕಷ್ಟಿರುತ್ತದೆ. ಪ್ರತಿ ಭಾರತೀಯ ಮಗುವು ಓದಲೇಬೇಕಾದ 10 ಪುಸ್ತಕಗಳ ಮಾಹಿತಿ ಇಲ್ಲಿದೆ. ಈ ಬಾರಿ ಬೇಸಿಗೆ ರಜೆಯಲ್ಲಿ ಈ ಪುಸ್ತಕಗಳನ್ನು ನಿಮ್ಮ ಮಗುವಿಗೆ ನೀಡಿ.

ಸಿ. ರಾಜಗೋಪಾಲಾಚಾರಿ ಅವರ ರಾಮಾಯಣ, ಮಹಾಭಾರತ

ಭಾರತದ ಕೊನೆಯ ಗರ್ವನರ್‌ ಜನರಲ್‌ ಆಗಿದ್ದ ಸಿ. ರಾಜಗೋಪಾಲಾಚಾರಿ ಅವರು ಪ್ರಸಿದ್ಧ ಇತಿಹಾಸಕಾರರಾಗಿದ್ದರು. ಇವರು ಭಾರತದ ಪ್ರಸಿದ್ಧ ಮಹಾಗ್ರಂಥಗಳಾದ ರಾಮಾಯಣ ಹಾಗೂ ಮಹಾಭಾರತವನ್ನು ವಿಶಿಷ್ಠ ರೀತಿಯಲ್ಲಿ ಬರೆದು ಪ್ರಕಟಿಸಿದ್ದಾರೆ. ಈ ಎರಡೂ ಮಹಾಕಾವ್ಯಗಳಲ್ಲಿ ಬರುವ ವೀರ ಪುರುಷರು ಹಾಗೂ ಮಹಿಳೆಯರ ಪಾತ್ರಗಳನ್ನು ಭಿನ್ನವಾಗಿ ವ್ಯಕ್ತಪಡಿಸಿರುವ ರೀತಿಯ ಮಕ್ಕಳು ಅವರಿಂದ ಸ್ಫೂರ್ತಿ ಪಡೆಯುವಂತಿದೆ.

ಅಮರ ಚಿತ್ರಕಥಾ

ಭಾರತದ ಇತಿಹಾಸ, ಸಂಸ್ಕೃತಿ, ಪುರಾಣ ಮತ್ತು ಧರ್ಮದ ಬಗ್ಗೆ ಮಾಹಿತಿ ನೀಡುವ ಪುಸ್ತಕ ಇದಾಗಿದ್ದರೂ, ಇದನ್ನು ಮಕ್ಕಳು ಇಷ್ಟಪಡುವ ರೀತಿ ಕಥೆಗಳ ರೂಪದಲ್ಲಿ ಪ್ರಕಟ ಮಾಡಲಾಗಿದೆ. ಈ ಪುಸ್ತಕವು ಒಟ್ಟು 20 ಭಾಷೆಗಳಲ್ಲಿದೆ. ಪುರಾಣಗಳು, ಮಹಾಕಾವ್ಯಗಳು, ನೀತಿಕಥೆಗಳು ಮತ್ತು ಜಾನಪದ ಕಥೆಗಳು ಮತ್ತು ಪ್ರಸಿದ್ಧ ಭಾರತೀಯ ವ್ಯಕ್ತಿಗಳ ಜೀವನಚರಿತ್ರೆಗಳು ಸೇರಿದಂತೆ ಹಲವು ಭಿನ್ನ ಅಂಶಗಳನ್ನು ಈ ಪುಸ್ತಕ ಹೊಂದಿದೆ. ಮಕ್ಕಳು ಇದನ್ನು ಇಷ್ಟಪಟ್ಟು ಓದುವುದರಲ್ಲಿ ಅನುಮಾನವಿಲ್ಲ.

ಆರ್‌ಕೆ ನಾರಾಯಣ್‌ ಅವರ ಮಾಲ್ಗುಡಿ ಡೇಸ್‌

ವಿಶ್ವದಾದ್ಯಂತ ಖ್ಯಾತಿ ಪಡೆದ ಆರ್‌ಕೆ ನಾರಾಯಣ್‌ ಅವರ ಮಾಲ್ಗುಡಿ ಡೇಸ್‌ ಪುಸ್ತಕವು ಸಣ್ಣಕಥೆಗಳ ಸಂಗ್ರಹವಾಗಿದೆ. ಇದರ ಮೊದಲ ಪ್ರತಿ 1943ರಲ್ಲಿ ಪ್ರಕಟವಾಯಿತು. ಗ್ರಾಮೀಣ ಬದುಕನ್ನು ಕಟ್ಟಿಕೊಡುವ 32 ಸಣ್ಣಕಥೆಗಳು ಈ ಪುಸ್ತಕದಲ್ಲಿದೆ. ಮಾಲ್ಗುಡಿ ಎಂಬ ಕಾಲ್ಪನಿಕ ಹಳ್ಳಿ ಹಾಗೂ ಆ ಹಳ್ಳಿಯಲ್ಲಿ ನಡೆಯುವ ಘಟನೆಗಳೇ ಕಥಾರೂಪದಲ್ಲಿ ಪುಸ್ತಕದಲ್ಲಿ ವ್ಯಕ್ತವಾಗಿದೆ. ಮಾಲ್ಗುಡಿ ಡೇಸ್‌ ಸಿನಿಮಾ ಕೂಡ ಇದೆ. ಅದನ್ನೂ ಮಕ್ಕಳಿಗೆ ತೋರಿಸಬಹುದು.

ವಿಷ್ಣುಶರ್ಮಾ ಅವರ ಪಂಚತಂತ್ರ

ಪಂಚತಂತ್ರ ಮಾನವರ ಬುದ್ಧಿವಂತಿಕೆ ಹಾಗೂ ವ್ಯಕ್ತಿತ್ವವನ್ನು ಹೊಂದಿರುವ ಪ್ರಾಣಿಗಳನ್ನು ಒಳಗೊಂಡು ಹಲವು ನೈತಿಕ ಕಥೆಗಳ ಸಂಗ್ರಹವಾಗಿದೆ. ಇದರಲ್ಲಿನ ನೀತಿಕಥೆಗಳು ಮಕ್ಕಳ ಬದುಕಿಗೆ ಪಾಠದಂತಿರುವುದು ಸುಳ್ಳಲ್ಲ.

ಸುಧಾಮೂರ್ತಿ ಅವರ ವೈಸ್‌ ಅಂಡ್‌ ಅದರ್‌ವೈಸ್‌, ಎ ಸೆಲ್ಯೂಟ್ ಟು ಲೈಫ್

ಇದೊಂದು ಸಣ್ಣ ಕಥಾಸಂಕಲವಾಗಿದೆ. ಇದರಲ್ಲಿ ಸುಧಾಮೂರ್ತಿ ಅವರು ಬರೆದ 51 ಸ್ಫೂರ್ತಿದಾಯಕ ಸಣ್ಣಕಥೆಗಳಿವೆ. ಅವರ ಎಲ್ಲಾ ಕಥೆಗಳಂತೆ, ಈ ಕಥೆಗಳು ಮಕ್ಕಳಿಗೆ ಜೀವನದ ಪ್ರಮುಖ ಮೌಲ್ಯಗಳನ್ನು ಕಲಿಸಲು ನೆರವಾಗಲಿವೆ.

ರೂಪಾ ಪೈ ಅವರ ವೇದ ಅಂಡ್‌ ಉಪನಿಷತ್‌ ಫಾರ್‌ ಚಿಲ್ಡ್ರನ್‌

ಇದು ಕಥೆ ಪುಸ್ತಕವಲ್ಲ, ಆದರೆ ಇದರಲ್ಲಿ ವೇದ ಹಾಗೂ ಉಪನಿಷತ್ತುಗಳ ಆಧರಿಸಿದ ಬರಹವಿದೆ. ಮಕ್ಕಳಿಗೆ ವೈದಿಕ ಚಿಂತನೆಯ ಪರಿಚಯ ಮಾಡಲು ಈ ಪುಸ್ತಕ ನೆರವಾಗುತ್ತದೆ.

ಹಿತೋಪದೇಶ

ಇದು 12ನೇ ಶತಮಾನದಲ್ಲಿ ಬರೆಯಲಾದ ಕಥೆಗಳ ಸಂಗ್ರಹವಾಗಿದೆ. ಕಾಲ್ಪನಿಕ ಕಥೆಗಳಾದರೂ ಅರ್ಥಪೂರ್ಣವಾಗಿದೆ. ಇದರಲ್ಲಿ ಪ್ರಾಣಿ ಹಾಗೂ ಮನುಷ್ಯರ ಪಾತ್ರಗಳಿವೆ. ಇದರಲ್ಲಿರುವ ದಂತಕಥೆಗಳು ನೈತಿಕ ಅಂಶಗಳನ್ನು ಹೊಂದಿವೆ. ಈ ಕಥೆಗಳಿಂದ ಮಕ್ಕಳು ಬದುಕಿನ ಪಾಠ ಕಲಿಯಬಹುದು.

ದಿ ಹಿಸ್ಟರಿ ಆಫ್‌ ಇಂಡಿಯಾ ಫಾರ್‌ ಚಿಲ್ಡ್ರನ್‌

ಎರಡು ಸಂಪುಟಗಳಿರುವ ಪುಸ್ತಕ ಇದಾಗಿದೆ. ಭಾರತದ ಇತಿಹಾಸವನ್ನು ಚಿತ್ರಿಸಿರುವ ಪುಸ್ತಕವಿದು. ಇದು ಭಾರತದ ಶ್ರೀಮಂತ ಪರಂಪರೆಯ ಬಗ್ಗೆ ಮಕ್ಕಳಿಗೆ ಕಲಿಸುತ್ತದೆ.

ಸುನಿತಾ ಪಂತ್ ಬನ್ಸಾಲ್ ಅವರ ಕೃಷ್ಣ

ಕೃಷ್ಣನ ಕಥೆಗಳು ಮಕ್ಕಳಿಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಕೃಷ್ಣ ಬಾಲಲೀಲೆಯ ತುಂಟಾಟಗಳಿಂದ ದೈವಿಕ ಶಕ್ತಿವರೆಗೆ ಮಕ್ಕಳಿಗೆ ತಿಳಿಸಲು ಈ ಪುಸ್ತಕವನ್ನು ಓದಲು ಕೊಡಬಹುದು. ಇದರಲ್ಲಿ ಹಲವು ಬದುಕಿನ ಪಾಠಗಳೂ ಇವೆ.

ರಸ್ಕಿನ್ ಬಾಂಡ್ ಅವರ ರಸ್ಟಿಸರಣಿ

ಪ್ರಸಿದ್ಧ ಬರಹಗಾರ ರಸ್ಕಿನ್‌ ಬಾಂಡ್‌ ಅವರ ಪುಸ್ತಕಗಳು ಸಾಮಾನ್ಯವಾಗಿ ಸಣ್ಣಕಥೆಗಳ ಸಂಕಲನವಾಗಿರುತ್ತದೆ. ಇವರ ಕಥೆಗಳು ಮಕ್ಕಳನ್ನು ರಂಜಿಸುವುದರಲ್ಲಿ ಅನುಮಾನವಿಲ್ಲ. ವಿವಿಧ ಸರಣಿಯ ಪುಸ್ತಕಗಳು ದೀರ್ಘಕಾಲದವರೆಗೆ ನಿಮ್ಮ ಮಗುವನ್ನು ರಂಜಿಸುತ್ತದೆ. ಸ್ವಾತಂತ್ರ್ಯ ಭಾರತ ಹೇಗಿತ್ತು ಎಂಬುದರ ಒಳನೋಟವನ್ನು ನೀಡುತ್ತದೆ ಈ ಪುಸ್ತಕ.

Source : https://m.dailyhunt.in/news/india/kannada/htkannada-epaper-htkanada/summer+holidays+bhaaratadha+prati+maguvu+tappade+odabekaadha+10+pustakagalivu+besige+rajeyalli+makkalige+joteyaagali+ee+pustakagalu-newsid-n595963618?listname=topicsList&index=32&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *