ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿರುವ ಗಂಗಾ ವಿಲಾಸ್ ನಲ್ಲಿ ಪ್ರಯಾಣಿಸಲು 13 ಲಕ್ಷ ಬೇಕೆ ಬೇಕು..!

ಜಲಮಾರ್ಗದ ಮೂಲಕ ಭಾರತ ಮತ್ತು ಬಾಂಗ್ಲಾದೇಶದ ಸುಂದರ ತಾಣಗಳನ್ನು ಪರಿಚಯಿಸಲು ಗಂಗಾ ವಿಲಾಸ್ ಸಿದ್ಧವಾಗಿದೆ. ಇಂದು ಪ್ರಧಾನಿ ಮೋದಿ ಕ್ರೂಸರ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಲಿದ್ದಾರೆ. ರಿವರ್ ಕ್ರೂಸ್ ಪ್ರವಾಸೋದ್ಯಮ ಬಹಳ ವರ್ಷದ ಕನಸಾಗಿದೆ. ಇಂದು ಪ್ರಧಾನಿ ಮೋದಿ ಚಾಲನೆಯ ಬಳಿಕ ಗಂಗಾ ವಿಲಾಸ್ ತನ್ನ ಪ್ರಯಾಣವನ್ನು ಆರಂಭಿಸಲಿದೆ.

ಉತ್ತರ ಪ್ರದೇಶದ ವಾರಾಣಾಸಿಯಿಂದ ತನ್ನ ಪ್ರಯಾಣವನ್ನು ಆರಂಭಿಸುವ ಗಂಗಾ ವಿಲಾಸ್, ಸುಮಾರು 3,200 ಕಿಲೋ ಮೀಟರ್ ಪ್ರಯಾಣಿಸಿ, ಬಾಂಗ್ಲಾದೇಶದ ಅದ್ಭುತ ಜಾಗಗಳನ್ನು ತೋರಿಸಲಾಗುತ್ತದೆ. ಇದು ಸುಮಾರು 51 ದಿನಗಳ ಪ್ರಯಾಣವಾಗಿರಲಿದೆ. ಭಾರತ ಮತ್ತು ಬಾಂಗ್ಲಾದೇಶದ 27 ನದಿಗಳ ಮೂಲಕ ಗಂಗಾ ವಿಲಾಸ್ ಸಾಗಲಿದೆ.

ನದಿ ಕ್ರೂಸರ್ ನಲ್ಲಿ 3 ಡೆಕ್ ಗಳನ್ನು ಹೊಂದಿದೆ. ಫುಲ್ ಐಷರಾಮಿ ಸೌಲಭ್ಯವನ್ನು , ಮೊದಲ ಪ್ರಯಾಣಕ್ಕೆ ಸ್ವಿರ್ಜಲೆಂಡ್ 32 ಪ್ರವಾಸಿಗರು ಸಂಪೂರ್ಣ ಪ್ರಯಾಣಕ್ಕೆ ಹಣ ನೀಡಿ ಮುಂಗಡ ಬುಕ್ಕಿಂಗ್ ಮಾಡಿದ್ದಾರೆ. 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಮೂಲಕ 51 ದಿನಗಳ ವಿಹಾರವನ್ನು ಯೋಜಿಸಲಾಗಿದೆ. ಈ ಹಡಗಿನಲ್ಲಿ ಕ್ರಮಿಸಲು ಸುಮಾರು 13 ಲಕ್ಷ ವೆಚ್ಚ ಖರ್ಚಾಗಲಿದೆ.

The post ಇಂದು ಪ್ರಧಾನಿ ಮೋದಿ ಉದ್ಘಾಟಿಸಲಿರುವ ಗಂಗಾ ವಿಲಾಸ್ ನಲ್ಲಿ ಪ್ರಯಾಣಿಸಲು 13 ಲಕ್ಷ ಬೇಕೆ ಬೇಕು..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/CRX5hJa
via IFTTT

Leave a Reply

Your email address will not be published. Required fields are marked *