
ಕನ್ನಡದ ಹೆಸರಾಂತ ಗಾಯಕ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ 2022ರ ಮಿಸಸ್ ಇಂಡಿಯಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ ಮಿಸೆಸ್ ಇಂಡಿಯಾ ಇಂಕ್ ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ಮಾತನಾಡಿದ ನಿವೇದಿತ ಗೌಡ ಮಿಸಸ್ ಇಂಡಿಯಾ ಆಗುವುದು ಸುಲಭದ ಮಾತಲ್ಲ .ಅದಕ್ಕೆ ಹಲವು ತಯಾರಿ ಅಗತ್ಯವಿದೆ. ಈಗ ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ.ಮಿಸಸ್ ಇಂಡಿಯಾ ಆಗಬೇಕು ಎನ್ನುವುದು ಪ್ರತಿಯೊಬ್ಬರ ಕನಸು, ಇದೀಗ ನನ್ನ ಕನಸು ನನಸಾಗಿದೆ. ಸ್ಪರ್ಧೆಗೆ ನಾನ್ ಸ್ಟಾಪ್ ತಯಾರಿ ಮಾಡಿಕೊಂಡಿದ್ದು, ಅಲ್ಲದೆ ನನ್ನ ರೋಲ್ ಮಾಡೆಲ್ ಬಾಲಿವುಡ್ ನಟಿ ಐಶ್ವರ್ಯ ರೈ ಎಂದು ಹೇಳಿಕೊಂಡಿದ್ದರು.ಈ ಬಾರಿಯ ಮಿಸಸ್ ಇಂಡಿಯಾಗೆ ಅವರು ಹೇಗೆಲ್ಲ ತಯಾರಿ ಮಾಡಿಕೊಳ್ಳುತ್ತಿದ್ದರು, ಅವರ ಡಯಟ್ ಏನು ಎಂಬ ಬಗ್ಗೆ ತಮ್ಮದೇ ಯೂಟ್ಯೂಬ್ ಚಾನೆಲ್ ನಲ್ಲಿ ಹೋಂ ಟೂರ್, ಬಟ್ಟೆ ಕಲೆಕ್ಷನ್ ಸೇರಿದಂತೆ ಹಲವಾರು ರೀತಿಯ ವಿಡಿಯೋ ಮಾಡಿ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದರು.