ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಡಿ. 25
ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವುದು ಸಮುದಾಯ, ಪೋಷಕರ ಸಂಘ ಸಂಸ್ಥೆಗಳ ಹಾಗೂ ಶಿಕ್ಷಕರ ಕರ್ತವ್ಯವಾದಾಗ ಆ ಮಕ್ಕಳು ಜೀವನದಲ್ಲಿ ಪ್ರಗತಿಯನ್ನು ಹೊಂದಲು ಸಾಧ್ಯವಿದೆ ಎಂದು ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘದ ಉಪಾಧ್ಯಕ್ಷರಾದ ಎಂ.ಕೆ.ಆನಂತರೆಡ್ಡಿ ತಿಳಿಸಿದರು.

ಚಿತ್ರದುರ್ಗ ನಗರದ ಕಮ್ಮರೆಡ್ಡಿ ಸಭಾಂಗಣದಲ್ಲಿ ಗುರುವಾರ ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘದವತಿ ಯಿಂದ ಹಮ್ಮಿಕೊಂಡಿದ್ದ 2024-25ನೇ ಸಾಲಿನಲ್ಲಿ ಉತ್ತೀರ್ಣರಾದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯು ವಿದ್ಯಾಥಿಗಳಿಗೆ ಪ್ರತಿಭಾ ಪುರಸ್ಕಾರ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಸಮಯದಾಯದ ಗೌರವಾನ್ವಿತರಿಗೆ ಸಾರ್ಥಕ ಸೇವಾ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಎಲ್ಲಾ ಮಕ್ಕಳಲ್ಲಿ ಪ್ರತಿಭೆ ಎನ್ನುವುದು ಇರುತ್ತದೆ, ಅದರೆ ಅದನ್ನು ಪತ್ತೇ ಮಾಡುವ ಕೆಲಸವಾಗಬಾಗಬೇಕಿದೆ ಅದು ಆದಾಗ ಮಾತ್ರ ಮಕ್ಕಳ ಪ್ರತಿಭೆಗೆ ಮನ್ನಣೆ ಸಿಗುತ್ತದೆ. ಇದೇ ರೀತಿ ಮಕ್ಕಳ ಪ್ರತೀಬೆಯನ್ನು ಗುರುತಿಸಿ ಅದಕ್ಕೆ ತಕ್ಕನಾದ ರೀತಿಯ ಪ್ರೋತ್ಸಾಹ ದೂರಕುವಂತಾಗಬೇಕಿದೆ ಎಂದರು.

ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘದ ಕಾರ್ಯದರ್ಶಿ ಶ್ರೀಮತಿ ಡಿ.ಕೆ.ಶೀಲಾ ಮಾತನಾಡಿ, ನಮ್ಮ ಸಂಘದವ ತಿಯಿಂದ ಸಮುದಾಯ ಮಕ್ಕಳಿಗೆ ವಸತಿ ನಿಲಯ ಸ್ಥಾಪನೆಯಾಗುವುದಕ್ಕಿಂತ ಮುಂಚೆ ಶಿಕ್ಷಣವನ್ನು ಪಡೆಯುವುದು ತುಂಬಾ ಕಷ್ಟವಾಗಿತ್ತು ಗ್ರಾಮಾಂತರ ಪ್ರದೇಶದಿಂದ ಬರುವಂತ ಸಮುದಾಯದ ಮಕ್ಕಳಿಗೆ ಇರಲು ಜಾಗ ಇಲ್ಲದೆ ಶಿಕ್ಷಣವನ್ನೆ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು ಇದನ್ನು ಮನಗಂಡ ನಮ್ಮ ಹಿರಿಯರು 1916ರಲ್ಲಿ ಚಿತ್ರದುರ್ಗದಲ್ಲಿ ನಮ್ಮ ಸಮುದಾಯದ ಸಂಘವನ್ನು ಸ್ಥಾಪನೆ ಮಾಡಲು ನಿರ್ಧಾರ ಮಾಡಿ ಜನತೆಯಿಂದ ಹಣವನ್ನು ಸಂಗ್ರಹ ಮಾಡಿ 1932ರಲ್ಲಿ ಸಂಘವನ್ನು ಸ್ಥಾಪನೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ ವಸತಿ ನಿಯಗಳನ್ನು ಸ್ಥಾಪನೆ ಮಾಡುವುದರ ಮೂಲಕ ನಿರ್ಮಾಣ ಮಾಡಲಾಯಿತು, ತದ ನಂತರ ಸರ್ಕಾರಗಳು ವಸತಿ ನಿಲಯಗಳನ್ನು ಸ್ಥಾಪನೆ ಮಾಡಿದ್ದರಿಂದ ನಮ್ಮ ಸಮುದಾಯದ ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದರಿಂದ ಈಗ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡುವಮತ ಕಾರ್ಯವನ್ನು ಸಂಘದವತಿಯಿಂದ ಮಾಡಲಾಗುತ್ತಿದೆ 2023-24ನೇ ವರ್ಷದಲ್ಲಿ 273 ಮಕ್ಕಳಿಗೆ 57 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದರು.
ಇಂದು ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಿಮ್ಮ ಪೋಷಕರಿಗೆ ಸಮತೋಷವನ್ನು ತರುತ್ತದೆ ನಮ್ಮ ಮಕ್ಕಳು ಉತ್ತಮವಾಧ ಸಾಧನೆಯನ್ನು ಮಾಡಿದ್ದಾರೆ ಶಿಕ್ಷಣವನ್ನು ಕೊಡಿಸಿದ್ದಕ್ಕೂ ಸಹಾ ಸಾರ್ಥಕವಾಯಿ ಎನ್ನುತ್ತಾರೆ ಇದೇ ರೀತಿ ಮಕ್ಕಳು ಸಮಾಜದಲ್ಲಿ ತಲೆಯನ್ನು ತಗ್ಗಿಸುವಂತ ಕಾರ್ಯವನ್ನು ಮಾಡದೇ ತಲೆಯನ್ನು ಎತ್ತುವಂತ ಕಾರ್ಯವನ್ನು ಮಾಡವುದರ ಮೂಲಕ ಸಮುದಾಯಕ್ಕೂ ಪೋಷಕರಿಗೆ ಗೌರವವನ್ನು ತರುವಂತೆ ಕರೆ ನೀಡಿ ನಿಮ್ಮಲ್ಲಿನ ಪ್ರತಿಭೆಯನ್ನು ನಿಮ್ಮ ಪ್ರಗತಿಗೆ ಉಪಯೋಗವನ್ನು ಮಾಡಿಕೊಳ್ಳಿ ಇದನ್ನು ಬೇರೆದಕ್ಕೆ ಉಪಯೋಗವನ್ನು ಮಾಡುವುದನ್ನು ಕಡಿಮೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ 58 ಮತ್ತು ದ್ವಿತೀಯ ಪಿಯು ಉತ್ತೀರ್ಣರಾದ 106 ವಿದ್ಯಾಥಿಗಳನ್ನು ಗೌರವಿಸಲಾಯಿತು, ಇದೇ ರೀತಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸೇವೆ ಸಲ್ಲಿಸಿ ನಿವೃತ್ತರಾದ ಮತ್ತು ಸಮಯದಾಯದ 26 ಜನ ಗೌರವಾನ್ವಿತರಿಗೆ ಸಾರ್ಥಕ ಸೇವಾ ಅಭಿನಂದನೆಯನ್ನು ಸಲ್ಲಿಸಲಾಯಿತು.
ಸಮಾರಂಭದಲ್ಲಿ ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘದ ಕಾರ್ಯದರ್ಶಿ ಪರಶುರಾಮ್ ಜೆ. ಖಂಜಾಚಿ ಸುರೇಶ್ ಕುಮಾರ್ ಜಿ.ವೈ. ಡಾ.ಸಿದ್ದಾರ್ಥ ಗುಡಾರ್ಪಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಕಂಠೀರವ ಬಾಲ ಸರಸ್ವತಿ, ಡಾ.ಎಸ್.ಸದಾಶಿವರೆಡ್ಡಿ, ಕೆ.ವಿ.ರಾಮಕೃಷ್ಣ, ವಿ.ಆರ್.ಮಂಜುನಾಥ್, ಕೆ.ಹೆಚ್.ಸುದರ್ಶನರೆಡ್ಡಿ, ಪಿ.ಚಂದ್ರರೆಡ್ಡಿ ಡಾ.ಪಿ.ಟಿ ಚಂದ್ರಹಾಸ್, ಡಾ,ಕೆ.ಜಿ.ರಾಘವರೆಡ್ಡಿ, ಎಸ್,ನಾಗರಾಜ್, ಡಾ.ಜಿ.ಟಿ.ತಿಪ್ಪಾರೆಡ್ಡಿ, ಜಿ.ಟಿ.ತಿಪ್ಪೇಶ್, ಆರ್.ಎಸ್.ವೇಣುಗೋಪಾಲ್, ಆರ್.ವಿ. ಮಾರುತೇಶರೆಡ್ಡಿ, ಡಾ.ಎಸ್.ಎನ್. ಹರೀಶ್, ಶ್ರೀಮತಿ ಸುಜಾತ ಡಾ.ಜೀವಿತೇಶ್, ಶ್ರೀಮತಿ ರೂಪ ಮುಕುಂದರೆಡ್ಡಿ, ಶ್ರೀಮತಿ ಸುಮನ ತಿಮ್ಮಾರೆಡ್ಡಿ, ಶ್ರೀಮತಿ ರೇಖಾ ಪ್ರತಾಪ್ ರೆಡ್ಡಿ, ಇಂದಿರಮ್ಮ ಗೋವಿಂದಸ್ವಾಮಿ ಹಾಗೂ ಶ್ರೀಮತಿ ಶೀಲಾ ಸುರೇಶ್ ರೆಡ್ಡಿ ಸೇರಿದಂತೆ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕು.ಭೂಮಿಕಾ ಪ್ರಾರ್ಥಿಸಿದರೆ, ಪರಶುರಾಮ್ ಸ್ವಾಗತಿಸಿದರೆ, ಹರೀಶ್ ವಂದಿಸಿದರೆ ಕೆ.ಟಿ. ತಿಮ್ಮಾರೆಡ್ಡಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರು ಮಹಾಸಭೆಯನ್ನು ನಡೆಸಲಾಯಿತು.
Views: 87