ಚಿತ್ರದುರ್ಗ: ಜ.13–14ರಂದು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‌ನ 26ನೇ ವರ್ಷದ ದೀಪೋತ್ಸವ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 11

ನಗರದ ಮೆದೇಹಳ್ಳಿ ರಸ್ತೆಯಲ್ಲಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್ (ರಿ.)ವತಿಯಿಂದ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮವೂ ಜ. 13ಮತ್ತು14 ರಂದು ನಡೆಯಲಿದೆ ಎಂದು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶರಣ್ ಕುಮಾರ್ ತಿಳಿಸಿದ್ದಾರೆ.

ಜ. 13ರ ಮಂಗಳವಾರ ಸಂಜೆ 6ಕ್ಕೆ ನಗರದ ಶ್ರೀ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಸ್ವಾಮಿಯ ಆಭರಣಗಳ ಮೆರವಣಿಗೆ ಹಾಗೂ ವಜ್ರಾಭರಣ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಜ. 14ರ ಸಂಜೆ 5 ಗಂಟೆಗೆ 26ನೇ ವರ್ಷದ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಮಾರಂಭವನ್ನು ಲೋಕಸಭಾ ಸದಸ್ಯರಾದ ಗೋವಿಂದಎಂ.ಕಾರಜೋಳ ಉದ್ಘಾಟಿಸಲಿದ್ದಾರೆ. ದೀಪೋತ್ಸವವನ್ನು ಶಾಸಕರಾದ ಕೆ.ಸಿ.ವಿರೇಂದ್ರ ಉದ್ಘಾಟನೆ ಮಾಡಲಿದ್ದಾರೆ.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಎಸ್.ಆರ್. ಎಸ್. ವಿದ್ಯಾಸಂಸ್ಥೆಯ ಲಿಂಗಾರೆಡ್ಡಿ, ಡಿ.ಸಿ.ಸಿ. ಬ್ಯಾಂಕ್‍ನ ನಿರ್ದೆಶಕರಾದ ಟಿ. ಮಹಂತೇಶ್, ಹೆಚ್.ಎಂ. ದ್ಯಾಮಣ್ಣ, ವರ್ತಕರಾದ ಉದಯ್ ಶೆಟ್ಟಿ, ಡಾ. ಸಿದ್ದಾರ್ಥ್, ಐಶ್ವರ್ಯ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕ ರಾದ ಅರುಣ್‍ಕುಮಾರ್, ಮೆದೇಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ನಿರಂಜನಮೂರ್ತಿ, ಟೀಚರ್ಸ್ ಕಾಲೋನಿಯ ಸುಭಾಷ್‍ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಟಿ. ಬದರೀ ನಾಥ್, ಶ್ರೀ ಕಂಠೇಶ್ವರ ಏಜೆನ್ಸಿಸ್‍ಯ ಸುರೇಶ್ ಬಾಬು ಭಾಗವಹಿಸಲಿದ್ದು, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್‍ನ ಅಧ್ಯಕ್ಷರಾದ ಶರಣ್ ಕುಮಾರ್ ಅಧ್ಯಕ್ಷತೆವಹಿಸಲಿದ್ದಾರೆ.

ಭಕ್ತಿ ಸಂಗೀತ ಕಾರ್ಯಕ್ರಮ

ಜ.14ರ ಸಂಜೆ 5.30ರಿಂದ, ಕೃಪಾ ಎಸ್. (ಬೆಂಗಳೂರು)

ಇವರಿಂದ ಸುರಸಾರ ಭಕ್ತಿಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಹಿನ್ನಲೆ ಗಾಯಕ ಯಶವಂತ್ (ಮಂಗಳೂರು),

ನಿತಿನ್ ರಾಜಾರಾಮ್ ಶಾಸ್ತ್ರಿ (ಮೈಸೂರು),

Leave a Reply

Your email address will not be published. Required fields are marked *