
ಹೊಸದಿಲ್ಲಿ: ಬುಲೆಟ್ ಪ್ರೂಫ್ ಜಾಕೆಟ್ ಗಳು, ಉಗ್ರ ನಿಗ್ರಹ ಕಾರ್ಯಚರಣೆಗೆ ಅಗತ್ಯ ಶಸ್ತ್ರಾಸ್ತ್ರಗಳು ಸೇರಿದಂತೆ ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಒಟ್ಟು 28, 732 ಕೋಟಿ ರೂ ಮೌಲ್ಯದ ರಕ್ಷಣಾ ಸಾಧನಗಳ ಖರೀದಿಗೆ ಸಚಿವಾಲಯವು ಒಪ್ಪಿಗೆ ನೀಡಿದೆ. ರಕ್ಷಣಾ ಸಚಿವ ರಾಮನಾಥ್ ಸಿಂಗ್ ಅವರ ನೇತೃತ್ವದಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಗಡಿಭಾಗದಲ್ಲಿ ಉಗ್ರ ನಿಗ್ರಹಕ್ಕೆ ನೆರವಾಗುವ ‘ಬ್ಯಾಟಲ್ ರೈಫಲ್’ ಗಳನ್ನು ಸುಮಾರು ನಾಲ್ಕು ಲಕ್ಷಗಳಷ್ಟು ಖರೀದಿಗೆ ಸಮ್ಮತಿಸಲಾಗಿದೆ. ಆಧುನಿಕ ಮಾದರಿಯ ಸಮರಕ್ಕೆ ಸಶಸ್ತ್ರ ಪಡೆಗಳು ಸಜ್ಜಾಗುತ್ತಿವೆ. ಹಾಗಾಗಿ ಡ್ರೋನ್ ಗಳು, ಮೆರಿನ್ ಗ್ಯಾಸ್ ಟರ್ಬೈನ್ ಜನರೇಟರ್ ಗಳನ್ನು ಕೂಡ ಪಡೆಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
Views: 0