
ನವದೆಹಲಿ: ಅತಿ ಹೆಚ್ಚು ವೀಕ್ಷಣೆ ಮತ್ತು ಫಾಲೋವರ್ಸ್ ಗಳಿಸುವ ಭರವಸೆಯೊಂದಿಗೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಪ್ರತಿದಿನ ವಿಡಿಯೋಗಳನ್ನು ಯೂಟ್ಯೂಬ್ ಸೇರಿದಂತೆ ಎಲ್ಲ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಪೋಸ್ಟ್ ಮಾಡುತ್ತಾರೆ. ಅಲ್ಲದೆ, ಹೊಸ ಹೊಸ ಕಂಟೆಂಟ್ ಕ್ರಿಯೆಟ್ ಮಾಡುವುದರಿಂದ ಆದಾಯ ಸಹ ಗಳಿಕೆ ಮಾಡುತ್ತಾರೆ.
ಈ ಜಾಲತಾಣ ಅನೇಕರ ಜೀವನವನ್ನೇ ಬದಲಾಯಿಸಿದೆ. ಹಣ ಗಳಿಕೆ ಮಾಡುವ ವಿಚಾರದಲ್ಲಿ ಚೀನಾದ ಇನ್ಫ್ಲುಯೆನ್ಸರ್ ಝೆಂಗ್ ಕ್ಸಿಯಾಂಗ್ ಎಂಬಾಕೆ ಎಲ್ಲರ ಹುಬ್ಬೇರಿಸಿದ್ದಾಳೆ. ಕೇವಲ ಪ್ರಾಡಕ್ಟ್ ರಿವ್ಯೂವ್ ಮಾಡುವ ಮೂಲಕ ಉತ್ಪನ್ನಗಳನ್ನು ಪ್ರಚಾರ ಮಾಡುವ ಈಕೆಯ ಒಟ್ಟು ಆದಾಯದ ದಂಗಾಗಿಸುವಂತಿದೆ. ಟಿಕ್‌ಟಾಕ್‌ನ ಚೈನೀಸ್ ಆವೃತ್ತಿ ಡೌಯಿನ್ನಲ್ಲಿ 5 ಮಿಲಿಯನ್ ಫಾಲೋವರ್ಸ್ ಹೊಂದಿರುವ ಝೆಂಗ್ ಕ್ಸಿಯಾಂಗ್, ಕೇವಲ 3 ಸೆಕೆಂಡ್ ವಿಡಿಯೋ ಮೂಲಕ ಕೋಟ್ಯಂತರ ರೂಪಾಯಿ ಸಂಪಾದಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನವರು ತಾವು ಪ್ರಚಾರ ಮಾಡುವ ಉತ್ಪನ್ನಗಳ ಪ್ರತಿಯೊಂದು ವಿವರವನ್ನು ನಿಖರವಾಗಿ ತಿಳಿಸಲು ಬಯಸುತ್ತಾರೆ. ಆದರೆ, ಝೆಂಗ್ ಆ ರೀತಿ ಮಾಡಲ್ಲ. ಆಕೆ ಕನಿಷ್ಠ ವಿಧಾನವನ್ನು ಆರಿಸಿಕೊಂಡಿದ್ದಾರೆ. ಕೇವಲ ಮೂರೇ ಸೆಕೆಂಡುಗಳಲ್ಲಿ ಉತ್ಪನ್ನವನ್ನು ತೋರಿಸುತ್ತಾರೆ. ಆಕೆಯ ಲೈವ್ ಸ್ಟ್ರೀಮ್ ಸಮಯದಲ್ಲಿ, ಝೆಂಗ್‌ನ ಸಹಾಯಕಿಯು ವಿವಿಧ ವಸ್ತುಗಳನ್ನು ಹೊಂದಿರುವ ಕಿತ್ತಳೆ ಬಣ್ಣದ ಪೆಟ್ಟಿಗೆಗಳನ್ನು ಒಂದೊಂದಾಗಿ ಹಸ್ತಾಂತರಿಸುತ್ತಾಳೆ. ಮಿಲಿಸೆಕೆಂಡ್‌ಗಳಲ್ಲಿ, ಝೆಂಗ್, ಪ್ರತಿಯೊಂದು ಉತ್ಪನ್ನಗಳನ್ನು ಎತ್ತಿಕೊಂಡು, ಅದನ್ನು ಕ್ಯಾಮರಾಕ್ಕೆ ಪ್ರದರ್ಶಿಸಿ, ಅದರ ಬೆಲೆಯನ್ನು ಉಲ್ಲೇಖಿಸುತ್ತಾಳೆ ಮತ್ತು ತಕ್ಷಣವೇ ಅದನ್ನು ಪಕ್ಕಕ್ಕೆ ಇಡುತ್ತಾಳೆ. ಇದೆಲ್ಲವೂ ಕೇವಲ ಮೂರು ಸೆಕೆಂಡು (ಪ್ರತಿ ಉತ್ಪನ್ನಕ್ಕೆ)ಗಳಲ್ಲಿ ನಡೆಯುತ್ತದೆ.
ತನ್ನ ಪ್ರೇಕ್ಷಕರನ್ನು ಕೇವಲ ಸೆಕೆಂಡುಗಳಲ್ಲಿ ಸೆರೆಹಿಡಿಯುವ ಝೆಂಗ್ ಸಾಮರ್ಥ್ಯವು ಎಲ್ಲರ ಅಚ್ಚರಿಕೆ ಕಾರಣವಾಗಿದೆ. ಆಕೆಯ ಆದಾಯದ ವಿಚಾರಕ್ಕೆ ಬಂದರೆ, ಪ್ರತಿ ವಾರ ಆಕೆ 14 ಮಿಲಿಯನ್ ಡಾಲರ್ (ಸುಮಾರು 120 ಕೋಟಿ ರೂ.) ಗಳಿಸುತ್ತಾರೆ ಎಂದು ವರದಿಯಾಗಿದೆ. ಆಕೆಯ ವಿಶಿಷ್ಟ ತಂತ್ರವು ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ, ಕಡಿಮೆ ಪ್ರಚಾರದ ಹೊರತಾಗಿಯೂ ಅವಳು ಪ್ರದರ್ಶಿಸುವ ವಸ್ತುಗಳ ಮಾರಾಟವು ಗಗನಕ್ಕೇರಿದೆ. (ಏಜೆನ್ಸೀಸ್)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0