
ಮದುವೆ ಆದ ಖುಷಿಯಲ್ಲಿ ಆಯೋಜಿಸಿದ್ದ ಡ್ಯಾನ್ಸ್ ಪಾರ್ಟಿ ವೇಳೆ ವೇದಿಕೆ ಕುಸಿದುಬಿದ್ದ ಪರಿಣಾಮ ನವ ದಂಪತಿ ಸೇರಿದಂತೆ 35 ಮಂದಿ 25 ಅಡಿ ಆಳಕ್ಕೆ ಬಿದ್ದ ಘಟನೆ ಇಟಲಿಯಲ್ಲಿ ಮಂಗಳವಾರ ಸಂಭವಿಸಿದೆ.
26 ವರ್ಷದ ವರ ಪೌಲೊ ಮುಗಿನಿನಿ ಮತ್ತು ಇಟಲಿಯನ್ ಮೂಲದ ಅಮೆರಿಕನ್ ನಿವಾಸಿ ವಧು ವಲೆರಿಯಾ ಯೆಬ್ರಾ ಮದುವೆ ಕಾರ್ಯಕ್ರಮ ಎಡವಟ್ಟಿನಿಂದ ಆಸ್ಪತ್ರೆ ಸೇರಿದ್ದಾರೆ.
ಇಟಲಿಯ ಪಿಸ್ತೊಟಿಯಾದ ಗಿಯಾಚೆರೆನೊದಲ್ಲಿ ದಂಪತಿ ಮದುವೆ ಖುಷಿಯಲ್ಲಿ ಡ್ಯಾನ್ಸ್ ಪಾರ್ಟಿ ಆಯೋಜಿಸಿದ್ದು, 150ಕ್ಕೂ ಹೆಚ್ಚು ಗಣ್ಯರನ್ನು ಆಹ್ವಾನಿಸಿದ್ದರು.
ಎಲ್ಲರೂ ಡ್ಯಾನ್ಸ್ ಮಾಡುತ್ತಾ ಪಾರ್ಟಿ ಆನಂದಿಸುತ್ತಿರುವಾಗ ದಿಢೀರನೆ ವೇದಿಕೆ ಮಧ್ಯ ಭಾಗದಲ್ಲಿ ದೊಡ್ಡ ತೂತು ಕಾಣಿಸಿಕೊಂಡಿತು. ಸುಮಾರು 25 ಅಡಿ ಆಳದಲ್ಲಿ ಮರದ ಪೀಸು ಸೇರಿದಂತೆ ಹಲವಾರು ವಸ್ತುಗಳು ಇದ್ದು ಅದರ ಮೇಲೆ ಮದುವೆ ಬಂದಿದ್ದ ಗಣ್ಯರು ಬಿದ್ದಿದ್ದು, ಗಾಯಗೊಂಡಿರುವ 30ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡ್ಯಾನ್ಸ್ ಪಾರ್ಟಿ ವೇಳೆ ಇದ್ದಕ್ಕಿದ್ದಂತೆ ನಾನು ಮತ್ತೊಂದು ದಿಕ್ಕಿನತ್ತ ಹೋಗಿದ್ದೆ. ನನ್ನ ಮೇಲೆ ಜನರು ಬೀಳುತ್ತಿದ್ದರು. ಕತ್ತಲು ಆಗಿದ್ದರಿಂದ ಸರಿಯಾಗಿ ಏನೂ ಕಾಣಿಸುತ್ತಿರಲಿಲ್ಲ. ಧೂಳು ಆವರಿಸಿಕೊಂಡಿತ್ತು ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವರ ಮುನಿನಿನಿ ಘಟನೆಯನ್ನು ವಿವರಿಸಿದ್ದಾರೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1