WHAT IS NORMAL SUGAR LEVEL AGE 45 : 45-50 ವರ್ಷ ವಯಸ್ಸಿನಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೇಗಿರಬೇಕು ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಡಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಜಗತ್ತಿನಾದ್ಯಂತ ಅಸಂಖ್ಯಾತ ಜನರು ಮಧುಮೇಹದಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಧುಮೇಹವು ನಿಮ್ಮ ಜೀವನದುದ್ದಕ್ಕೂ ನಿಮ್ಮೊಂದಿಗೆ ಇರುವ ಒಂದು ಕಾಯಿಲೆಯಾಗಿದೆ. ಇದನ್ನು ಗುಣಪಡಿಸಲಾಗದ ಕಾಯಿಲೆ ಎಂದೂ ಕರೆಯಬಹುದು. ಆದರೆ, ನಿಮ್ಮ ಆಹಾರ ಮತ್ತು ಜೀವನಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಮಧುಮೇಹವನ್ನು ನಿಯಂತ್ರಣದಲ್ಲಿಡುವುದು ಕಷ್ಟವೇನೂ ಅಲ್ಲ ಬಿಡಿ. ಮಧುಮೇಹದ ಲಕ್ಷಣಗಳನ್ನು ಗುರುತಿಸಲು ಮತ್ತು ನಿರ್ವಹಿಸಲು ರಕ್ತದಲ್ಲಿನ ಸಕ್ಕರೆ ಮಟ್ಟ ಪ್ರಮುಖ ಅಂಶವಾಗಿದೆ.
ವಾಸ್ತವವಾಗಿ, ನಿಮ್ಮ ದೇಹಕ್ಕೆ ಶಕ್ತಿ ಒದಗಿಸಲು ರಕ್ತದಲ್ಲಿ ಸಕ್ಕರೆ ಅಂಶ ಇರುವುದು ಅಗತ್ಯವಿರುತ್ತದೆ. ಆದರೆ, ರಕ್ತದಲ್ಲಿನ ಸಕ್ಕರೆಯ ಮಟ್ಟವು ತುಂಬಾ ಹೆಚ್ಚಿದ್ದರೆ (ಹೈಪರ್ಗ್ಲೈಸೀಮಿಯಾ) ಅಥವಾ ತುಂಬಾ ಕಡಿಮೆ ಇದ್ದರೆ ಇಲ್ಲವೇ ಅನಿಯಂತ್ರಿತವಾಗಿದ್ದರೆ, ಇದು ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. 45-50 ವರ್ಷ ವಯಸ್ಸಿನವರಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೇಗಿರಬೇಕು ಮತ್ತು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಏನು ಮಾಡಬೇಕು ಎಂಬುದನ್ನು ನಾವೀಗ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.
medlineplus.gov ಪ್ರಕಾರ 45 ರಿಂದ 50 ವರ್ಷ ವಯಸ್ಸಿನಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವು ಪ್ರತಿ ಡೆಸಿಲೀಟರ್‌ಗೆ 90 ರಿಂದ 130 ಮಿಲಿಗ್ರಾಂಗಳ ನಡುವೆಯೇ ಇರಬೇಕು (mg/dL). ಅದೇ ಸಮಯದಲ್ಲಿ ಊಟದ ನಂತರ ಸಕ್ಕರೆಯ ಮಟ್ಟವು 140 mg / dL ಗಿಂತ ಕಡಿಮೆಯಿರಬೇಕು. ರಾತ್ರಿ ಊಟದ ನಂತರ 150 ಮಿಗ್ರಾಂ/ಡಿಎಲ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಸಕ್ಕರೆ ಪ್ರಮಾಣ 300 ದಾಟಿದರೆ ಸಮಸ್ಯೆಯಾಗಬಹುದು. ಅಂತಹ ಪರಿಸ್ಥಿತಿಯಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಮತ್ತು ಸಲಹೆ ಪಡೆದುಕೊಳ್ಳುವುದು ಉತ್ತಮ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿಡಲು ಏನು ಮಾಡಬೇಕು?
ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಪ್ರಕಾರ (CDC (.gov), ನಿಮ್ಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಧಾನಗಳು ಹೀಗಿವೆ
- ಆರೋಗ್ಯಕರ ಆಹಾರ, ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಮತ್ತು ನಿಯಮಿತ ದೈಹಿಕ ಚಟುವಟಿಕೆಗಳನ್ನ ಮಾಡುತ್ತಿರಬೇಕು.
- ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಲು ಅಥವಾ ಕಡಿಮೆಯಾಗಲು ಕಾರಣವೇನು ಎಂಬುದನ್ನು ನೋಡಲು ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡಿರಬೇಕು.
- ನಿಯಮಿತ ಸಮಯದಲ್ಲಿ ಏನಾದರೂ ತಿನ್ನಿ, ಮತ್ತು ಊಟವನ್ನು ಬಿಡಬೇಡಿ.
- ಕಡಿಮೆ ಕ್ಯಾಲೋರಿಗಳು, ಸ್ಯಾಚುರೇಟೆಡ್ ಕೊಬ್ಬು, ಸಕ್ಕರೆ ಮತ್ತು ಉಪ್ಪು ಇರುವ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಿ
- ನಿಮ್ಮ ಆಹಾರ, ಪಾನೀಯ ಮತ್ತು ದೈಹಿಕ ಚಟುವಟಿಕೆಯ ಮೇಲೆ ಸದಾ ನಿಗಾ ಇರಿಸಿ.
- ಜ್ಯೂಸ್ ಅಥವಾ ಸೋಡಾ ಬದಲಿಗೆ ನೀರು ಕುಡಿಯಿರಿ.
- ಆಲ್ಕೋಹಾಲ್ ಸೇವನೆಯನ್ನು ಮಿತಿಗೊಳಿಸಿ ಅಥವಾ ತಪ್ಪಿಸಿ (ಪುರುಷರಿಗೆ ದಿನಕ್ಕೆ 2 ಪಾನೀಯಗಳು ಅಥವಾ ಕಡಿಮೆ, ಮಹಿಳೆಯರಿಗೆ 1 ಪಾನೀಯ ಅಥವಾ ಕಡಿಮೆ).
- ಸಿಹಿತಿಂಡಿಗಳಿಗಾಗಿ ಹಣ್ಣುಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ
- ಆಹಾರದಲ್ಲಿನ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೇಗೆ ಪರಿಣಾಮ ಬೀರುತ್ತವೆ?; ನೀವು ಮಧುಮೇಹ ಹೊಂದಿದ್ದರೆ, ನೀವು ಇನ್ನೂ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸಬಹುದು. ನೀವು ಸೇವಿಸಬಹುದಾದ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ನಿಮ್ಮ ವಯಸ್ಸು, ತೂಕ, ಚಟುವಟಿಕೆಯ ಮಟ್ಟ ಮತ್ತು ಇತರ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
(ವಿಶೇಷ ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬಂಧಿತ ಮಾಹಿತಿ ಮತ್ತು ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರವೇ ನೀಡಲಾಗಿದೆ. ನಾವು ಈ ಮಾಹಿತಿಯನ್ನು ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯ ಆಧಾರದ ಮೇಲೆ ಒದಗಿಸುತ್ತಿದ್ದೇವೆ. ನೀವು ಈ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಮತ್ತು ಈ ವಿಧಾನ ಅಥವಾ ಕಾರ್ಯವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದಾದಲ್ಲಿ ನುರಿತ ಪರಿಣತ ವೈದ್ಯರನ್ನು ಸಂಪರ್ಕಿಸಿ.)