ಚಿತ್ರದುರ್ಗ ಸೆ. 18
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಸೆ. 22 ರಿಂದ ರಾಜ್ಯದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆÉಯಲ್ಲಿ ಗಣತಿದಾರರು ಬಂದಾಗ ಸಮಾಜದ ಕುಲಭಾಂದವರು ಜಾರಿ ಕಲಂ-9ರಲ್ಲಿ ಸರ್ಕಾರದ ಗೆಜೆಟ್ ನಂ ಎ-903 ಮಡಿವಾಳ ಎಂದು ನಮೂದಿಸುವಂತೆ ಸಮಾಜದ ಭಾಂದವರಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘ ಮನವಿ ಮಾಡಿದೆ.

ಚಿತ್ರದುರ್ಗ ನಗರದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷರಾದ ಸಿ.ನಂಜಪ್ಪ ಮಡಿವಾಳ ಸಮಾಜವನ್ನು ನಾನಾ ಹೆಸರುಗಳಾದ ಅಗಸ, ಪರಿಟಿ, ಚಾಲಕ, ದೋಭಿ ರಜಕ ಸೇರಿದಂತೆ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತಿದೆ ಇವುಗಳನ್ನು ಬಿಟ್ಟು ಎಲ್ಲರು ಸಹಾ ಮಡಿವಾಳ ಎಂದು ನಮೂದಿಸಬೇಕಿದೆ. ಇದ್ದಲ್ಲದೆ 60 ಕಲಂಗಳಲ್ಲಿ 9ನೇ ಕಾಲಂನಲ್ಲಿ ಜಾತಿ ಮಡಿವಾಳ ಎಂದ ಬರೆಸುವಂತೆ ಮನವಿ ಮಾಡಿದರು.
ಈ ಸಮೀಕ್ಷೆಯಲ್ಲಿ ಮಡಿವಾಳ ಎಂದು ಬರೆಸುವುದರ ಮೂಲಕ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಆಯೋಗದಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆÉಯಲ್ಲಿ ಗಣತಿದಾರರು ಬಂದಾಗ ತಪ್ಪದೆ ನಮ್ಮ ಸಮುದಾಯದವರು ಮಡಿವಾಳ ಎಂದು ಬರೆಸುವುದರ ಮೂಲಕ ನಮ್ಮ ಸಮುದಾಯದ ಕೈಯನ್ನು ಬಲಪಡಿಸುವಂತೆ ಮನವಿ ಮಾಡಿದ್ದಾರೆ.
ಈ ಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್, ಗೌರವಾಧ್ಯಕ್ಷರಾದ ಈರಣ್ಣ ಮಡಿವಾಳ, ಉಪಾಧ್ಯಕ್ಷರಾದ ಆರ,ವಿ.ರಾಜಣ್ಣ, ಕಾರ್ಯಾಧ್ಯಕ್ಷರಾದ ಸಿದ್ದಗಂಗಯ್ಯ ಹೆಚ್.ಖಂಜಾಚಿ ಮಂಜುನಾಥ್ ಆರ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಟಿ.ರಮೇಶ್, ಕಾರ್ಯಾಧ್ಯಕ್ಷರಾದ ಭವ್ಯ ನಿರ್ದೇಶಕರಾದ ವೆಂಕಟರಾಮ್, ಶಾಂತಕುಮಾರ್, ಮಧು, ಸಾಗರ್, ನಗರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತ ರಮೇಶ್, ಸಮಾಜದ ಮುಖಂಡರಾದ ವಿ.ಎಲ್.ಪ್ರಶಾಂತ್ ಮಹಿಳಾ ಅಧ್ಯಕ್ಷರಾದ ವೀಣಾ ಬೋರಣ್ಣ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Views: 6