ಮಾವಿನ ಹಣ್ಣು ಸೇವನೆಯಿಂದ ಆರೋಗ್ಯಕ್ಕಿರುವ 5  ಪ್ರಯೋಜನಗಳು.

  • ಮಾವಿನ ಹಣ್ಣಿನಲ್ಲಿ ಹಲವು ಪೋಷಕಾಂಶಗಳು ಕಂಡು ಬರುತ್ತವೆ.
  • ಮಾವಿನ ಹಣ್ಣು ರುಚಿಕರವಷ್ಟೇ ಅಲ್ಲ, ಆಯುರ್ವೇದದ ಪ್ರಕಾರ ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ
  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಗಿದ ಮಾವಿನ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ.

Mango Health Benefits: ಹಣ್ಣುಗಳ ರಾಜ ಎಂತಲೇ ಖ್ಯಾತಿ ಪಡೆದಿರುವ ಮಾವಿನ ಹಣ್ಣು ಬಹುತೇಕ ಎಲ್ಲರ ಪ್ರಿಯವಾದ ಹಣ್ಣು ಎಂತಲೇ ಹೇಳಬಹುದು. ಮಾವಿನಹಣ್ಣುಗಳು ವಿಟಮಿನ್ ಎ, ಸಿ ಮತ್ತು ಇ ಮತ್ತು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳ ಸಮೃದ್ಧ ಮೂಲವಾಗಿದೆ. ಮಾವಿನ ಹಣ್ಣು ತಿನ್ನಲು ತಿನ್ನಲು ರುಚಿಕರವಷ್ಟೇ ಅಲ್ಲ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭ್ಯವಾಗುತ್ತದೆ. 

ಮಾವಿನ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕಿರುವ 5 ಪ್ರಮುಖ ಪ್ರಯೋಜನಗಳೆಂದರೆ… 
*ಹೃದಯದ ಆರೋಗ್ಯ: 

ಮಾವಿನ ಹಣ್ಣಿನಲ್ಲಿ  (Mango) ಫೈಬರ್, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳು ಕಂಡು ಬರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. 

ಕಣ್ಣಿನ ಆರೋಗ್ಯ: 
ಮಾವಿನ ಹಣ್ಣಿನಲ್ಲಿ ವಿಟಮಿನ್ ಎ  (Vitamin C) ಸಮೃದ್ಧವಾಗಿದ್ದು ಇದರ ನಿಯಮಿತ ಸೇವನೆಯು ದೃಷ್ಟಿಯನ್ನು ಸುಧಾರಿಸುತ್ತದೆ. 

ತೂಕ ನಷ್ಟ: 
ಮಾವಿನಹಣ್ಣಿನಲ್ಲಿರುವ ಫೈಬರ್ ಅಂಶವು ಪೂರ್ಣತೆಯ ಭಾವನೆಗಳನ್ನು ಉತ್ತೇಜಿಸಲು ಹಾಗೂ ಅತಿಯಾಗಿ ತಿನ್ನುವುದನ್ನು ತಡೆಯಲು ಸಹಕಾರಿ ಆಗಿದೆ. ಹಾಗಾಗಿ, ಹಿತಮಿತವಾದ ಮಾವಿನ ಹಣ್ಣಿನ ಸೇವನೆಯು ತೂಕ ನಷ್ಟವನ್ನು ಸಹ ಪ್ರಚೋದಿಸುತ್ತದೆ. 

ಮೆದುಳಿನ ಆರೋಗ್ಯ: 
ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಬಿ6 ಸಿರೊಟೋನಿನ್ ಮತ್ತು ಡೋಪಮೈನ್‌ನಂತಹ ನ್ಯೂರೋಟ್ರಾನ್ಸ್‌ಮಿಟರ್‌ಗಳ ಉತ್ಪಾದನೆಗೆ ಸಹಾಯ ಮಾಡುವ ಮೂಲಕ, ಮೆದುಳಿನ ಆರೋಗ್ಯವನ್ನು ಸುಧಾರಿಸುತ್ತದೆ.

ಚರ್ಮದ ಆರೋಗ್ಯ: 
ಮಾವಿನ ಹಣ್ಣಿನಲ್ಲಿ ಕಂಡು ಬರುವ ವಿಟಮಿನ್ ಇ ಮತ್ತು ಬೀಟಾ-ಕ್ಯಾರೋಟಿನ್ ಅಂಶವೂ ಚರ್ಮವನ್ನು ಒಳಗಿನಿಂದ ಪೋಷಿಸುತ್ತದೆ. ಜೊತೆಗೆ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಕಾರಿ ಆಗಿದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.

Source : https://zeenews.india.com/kannada/health/amazing-health-benefits-of-eating-mango-217959

Leave a Reply

Your email address will not be published. Required fields are marked *