556 ಸಿಕ್ಸರ್ಸ್! ವಿಶ್ವ ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ ಹೊಸ ಮೈಲುಗಲ್ಲು, ಕ್ರಿಸ್​ಗೇಲ್​ ವಿಶ್ವದಾಖಲೆ ದಾಖಲೆ ಪುಡಿ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ಸ್​ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದರು.

ನವದೆಹಲಿ: ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್​​ನಲ್ಲಿ ವಿಶ್ವದಾಖಲೆ ಬರೆದರು. ಕ್ರಿಕೆಟ್​ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಸಿಕ್ಸರ್​ ಬಾರಿಸಿದ ಮೊದಲ ಆಟಗಾರರಾಗಿ ಹೊರಹೊಮ್ಮಿದರು.

ಈ ಮೂಲಕ ವೆಸ್ಟ್​ ಇಂಡೀಸ್ ದೈತ್ಯ ಬ್ಯಾಟರ್ ಕ್ರಿಸ್​ಗೇಲ್​ ಹೆಸರಲ್ಲಿದ್ದ ರೆಕಾರ್ಡ್​ ಪುಡಿ ಮಾಡಿದರು. ಇದರ ಜೊತೆಗೆ ವಿಶ್ವಕಪ್​ನಲ್ಲಿ ಅತಿ ವೇಗದ 1 ಸಾವಿರ ರನ್​ ಪೂರೈಸಿದ ಜಂಟಿ ಅಗ್ರ ಆಟಗಾರ ಖ್ಯಾತಿಗೂ ಪಾತ್ರರಾದರು.

https://twitter.com/cricketworldcup/status/1712106395166756979/photo/1

ರೋಹಿತ್​ ಬ್ಯಾಟ್​ನಿಂದ ಮೂರು ಪ್ರಕಾರದ ಕ್ರಿಕೆಟ್​ನಲ್ಲಿ (ಟೆಸ್ಟ್​, ಏಕದಿನ, ಟಿ20) ಈವರೆಗೂ 556 ಸಿಕ್ಸರ್​ ಸಿಡಿದಿವೆ. ಕ್ರಿಸ್​ಗೇಲ್​ 553 ಸಿಕ್ಸರ್​ ಬಾರಿಸಿದ್ದರು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಸಿಕ್ಸರ್​ಗಳನ್ನು ಬಾರಿಸುವ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಸೃಷ್ಟಿಸಿದರು.

ರೋಹಿತ್ ಶರ್ಮಾ 473 ಇನ್ನಿಂಗ್ಸ್‌ ಮೂಲಕ 556 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗವಾಗಿ 550 ಸಿಕ್ಸರ್‌ಗಳನ್ನು ಬಾರಿಸಿದ ಖ್ಯಾತಿಗೂ ರೋಹಿತ್​ ಒಳಗಾದರು. ಇದಕ್ಕೂ ಮೊದಲು 200, 400 ಮತ್ತು 500 ಸಿಕ್ಸರ್‌ಗಳನ್ನು ಬಾರಿಸಿದ ವೇಗದ ಬ್ಯಾಟರ್ ಆಗಿದ್ದರು. 300 ಸಿಕ್ಸರ್‌ಗಳನ್ನು ಬಾರಿಸಿದ ಎರಡನೇ ವೇಗದ ಬ್ಯಾಟರ್ ಕೂಡ ರೋಹಿತ್​ ಆಗಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 295 ಇನ್ನಿಂಗ್ಸ್‌ಗಳಲ್ಲಿ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ 476 ಸಿಕ್ಸರ್​ ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಇವರ ಬಳಿಕ ನ್ಯೂಜಿಲ್ಯಾಂಡ್​ ಬ್ಯಾಟರ್​ಗಳಾದ ಬ್ರೆಂಡನ್​ ಮೆಕಲಂ 398, ಮಾರ್ಟಿನ್​ ಗಪ್ಟಿಲ್​ 383 ಸಿಕ್ಸರ್​ ಸಿಡಿಸಿದ್ದಾರೆ.

Source : https://m.dailyhunt.in/news/india/kannada/etvbhar9348944527258-epaper-etvbhkn/556+siksars+vishva+kriket+nalli+rohit+sharma+hosa+mailugallu+kris+gel+vishvadaakhale+daakhale+pudi-newsid-n546337234?listname=newspaperLanding&topic=homenews&index=3&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

 WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *