ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇಂದು ಭಾರತ ಸಿಡಿಸಿದ 247ರನ್ ಸ್ಕೋರ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲಾದ ತಂಡವೊಂದರ ಗರಿಷ್ಟ ಸ್ಕೋರ್ ಆಗಿದೆ.
ಮುಂಬೈ: ಇಂಗ್ಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಭರ್ಜರಿ ಸ್ಕೋರ್ ದಾಖಲಿಸಿದ ಭಾರತ ಒಂದೇ ಪಂದ್ಯದಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 5ನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಸಿಡಿಸಿತು. ಭಾರತದ ಪರ ಅಭಿಷೇಕ್ ಶರ್ಮಾ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದರು. ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 13 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ 135 ರನ್ ಸಿಡಿಸಿದರು.
ಹಲವು ದಾಖಲೆ ಬರೆದ ಭಾರತ!
ಇನ್ನು ಈ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇಂದು ಭಾರತ ಸಿಡಿಸಿದ 247ರನ್ ಸ್ಕೋರ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲಾದ ತಂಡವೊಂದರ ಗರಿಷ್ಟ ಸ್ಕೋರ್ ಆಗಿದೆ.
ಭಾರತದ 4ನೇ ಗರಿಷ್ಠ ಮೊತ್ತ
ಇನ್ನು ಇಂದು ಭಾರತ ಗಳಿಸಿದ 247 ರನ್ ಸ್ಕೋರ್ ಟಿ20ಯಲ್ಲಿ ಭಾರತದ ಪರ ದಾಖಲಾದ 4ನೇ ಗರಿಷ್ಠ ಸ್ಕೋರ್ ಆಗಿದೆ. ಈ ಹಿಂದೆ 2024ರಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 297 ರನ್ ಕಲೆ ಹಾಕಿತ್ತು. ಇದು ಭಾರತ ಗಳಿಸಿದ ಗರಿಷ್ಠ ಟಿ20 ಸ್ಕೋರ್ ಆಗಿದೆ. ನಂತರದ ಸ್ಥಾನದಲ್ಲಿ 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಜೋಹಾನ್ಸ್ ಬರ್ಗ್ ನಲ್ಲಿ 283ರನ್ ಕಲೆಹಾಕಿತ್ತು. 2017ರ ಇಂದೋರ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯ ಇದ್ದು ಇಲ್ಲಿ ಭಾರತ 260ರನ್ ಕಲೆ ಹಾಕಿತ್ತು.
Highest T20I totals for India
- 297/6 vs Ban Hyderabad 2024
- 283/1 vs SA Joburg 2024
- 260/5 vs SL Indore 2017
- 247/9 vs Eng Wankhede 2025
- ಪವರ್ ಪ್ಲೇ ನಲ್ಲಿ ಗರಿಷ್ಠ ರನ್