ಆಕಸ್ಮಿಕವಾಗಿ ಬೆಂಕಿ ಬಿದ್ದ ಹಿನ್ನೆಲೆ ಮನೆಯಲ್ಲಿದ್ದ 6 ಜನ ಸಜೀವ ದಹನ..!

ಕುಟುಂಬಸ್ಥರೆಲ್ಲಾ ರಾತ್ರಿ ಸಂತೃಪ್ತಿಯಾಗಿ ಊಟ ಮಾಡಿ, ಮಲಗಿದ್ದರು. ಆದರೆ ಆ ರಾತ್ರಿಯೇ ಕೊನೆ ರಾತ್ರಿ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಅಂತದ್ದೊಂದು ಘಟನೆ ನಡೆದು ಕುಟುಂಬದ 6 ಜನ ರಾತ್ರೋ ರಾತ್ರಿಯೇ ಸುಟ್ಟು, ಸಜೀವ ದಹನವಾಗಿರುವ ಘಟನೆ ತೆಲಂಗಾಣದ ಮಂದಮರೆ ನಗರದ ವೆಂಕಟಪುರ ಗ್ರಾಮದಲ್ಲಿ ನಡೆದಿದೆ.

ಶಿವಯ್ಯ, ಅವರ ಪತ್ನಿ ಪದ್ಮಾ, ಮತ್ತು ಇಬ್ಬರು ಹೆಣ್ಣು ಮಕ್ಕಳು ಹಾಗೂ ಸಹೋದರಿಯ ಮಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾರೆ. ರಾತ್ರಿ 12 ಗಂಟೆ ಸುಮಾರಿಗೆ ಇದ್ದಕ್ಕಿದ್ದ ಹಾಗೇ ಮನೆಗೆ ಬೆಂಕಿ ಬಿದ್ದಿದೆ. ನೋಡ ನೋಡುತ್ತಿದ್ದಂತೆ ಮನೆಯಲ್ಲಿ ಬೆಂಕಿ ಜೋರಾಗಿ ಹೊತ್ತು ಉರಿದಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಬರುವಷ್ಟರಲ್ಲಿ ಮನೆಯಲ್ಲಿದ್ದವರೆಲ್ಲಾ ಸಜೀವ ದಹನವಾಗಿದ್ದಾರೆ.

ಶಿವಯ್ಯ ಅವರ ಸಹೋದರಿಗೆ ಸಾವು ಎಂಬುದು ಕೂಗಿ ಕೂಗಿ ಕರೆದಿತ್ತು ಎನಿಸುತ್ತದೆ. ಕಳೆದ ಎರಡು ದಿನಗಳ ಹಿಂದಷ್ಟೇ ಅಣ್ಣನ ಮನೆಗೆ ಬಂದಿದ್ದರು. ಆದರೆ ವಿಧಿ ಅವರನ್ನು ಸೇರಿಸಿ ಕರೆದುಕೊಂಡು ಹೋಗಿದೆ. ಬೆಂಕಿಯಲ್ಲಿ ಸೋದರಿ ಹಾಗೂ ಸೋದರಿಯ ಮಗಳು ಕೂಡ ಸುಟ್ಟು ಭಸ್ಮವಾಗಿದ್ದಾಳೆ.

The post ಆಕಸ್ಮಿಕವಾಗಿ ಬೆಂಕಿ ಬಿದ್ದ ಹಿನ್ನೆಲೆ ಮನೆಯಲ್ಲಿದ್ದ 6 ಜನ ಸಜೀವ ದಹನ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/DeBksIL
via IFTTT

Leave a Reply

Your email address will not be published. Required fields are marked *