ಚಿತ್ರದುರ್ಗ ಸೆ. 3
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ನಗರದ ಭಾರತೀಯ ಜೀವ ವಿಮಾ ನಿಗಮ ಶಾಖಾ ವತಿಯಿಂದ ಏರ್ಪಡಿಸಿದ 69ನೇಯ ವಿಮಾ ಸಪ್ತಾಹ ಆಚರಣೆ ಕಾರ್ಯಕ್ರಮದ
ಉದ್ಘಾಟನೆಯನ್ನು ಶಾಖಾ ವ್ಯವಸ್ಥಾಪಕರಾದ ಹನುಮಂತ ನಾಯಕ ನೆರವೇರಿಸಿ ಮಾತನಾಡಿ ನವಂಬರ್.1.1956 ರಲ್ಲಿ ಖಾಸಗಿ
ಕಂಪನಿಯಾಗಿ ಭಾರತೀಯ ಜೀವ ವಿಮಾ ಸ್ಥಾಪನೆಗೊಂಡು ನಂತರ ಕೇಂದ್ರ ಹಣಕಾಸು ಸಚಿವರಾದ ದೇಶಮುಖ್ ನೇತೃತ್ವದಲ್ಲಿ
ರಾಷ್ಟ್ರೀಕರಣಗೊಂಡು ಇಂದಿಗೆ 69 ವರ್ಷಗಳನ್ನು ಪೂರೈಸಿದೆ. ಎಲ್.ಐ.ಸಿ. ಭಾರತದ ಅತ್ಯಂತ ದೊಡ್ಡ ವಿಮಾ ಸಂಸ್ಥೆಯಾಗಿ
ಕಾರ್ಯನಿರ್ವಹಿಸುತ್ತಿದೆ. ಈ ವಿಮಾ ಸಂಸ್ಥೆ ದೇಶದ ಆರ್ಥಿಕ ಅಭಿವೃದ್ಧಿಗೆ ಹಾಗೂ ಜನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಈ ವಷರ್À
ಎಲ್. ಐ.ಸಿ ಯಿಂದ ಸುಮಾರು 7324 ಕೋಟಿ ರೂಗಳಿಗಿಂತ ಹೆಚ್ಚು ಲಾಭಾಂಶವನ್ನು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ.
ನಿರ್ಮಲಾ ಸೀತಾರಾಮನ್ ರವರಿಗೆ ನೀಡಿ ದೇಶದ ಹಣಕಾಸು ವ್ಯವಸ್ಥೆ ಗೆ ಶಕ್ತಿ ತುಂಬುವದರ ಜೊತೆಗೆ ಬಲವಾದ ಕಾರ್ಯಕ್ಷಮತೆ
ಮತ್ತು ದೇಶದ ಮೇಲಿನ ಭದ್ಧತೆಯನ್ನು ಮಾತ್ತುಮ್ಮೆ ಸಾಭಿತಾಪಡಿಸಿದೆ ಎಂದು ಹೇಳಿದರು. ಆಗಾಗಿ ನಾವೆಲ್ಲರೂ ಎಲ್.ಐ.ಸಿ. ವಿಮಾ
ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸೋಣ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಶಾಖಾ ವ್ಯವಸ್ಥಾಪಕರಾದ ಲಕ್ಷ್ಮಿಕಾಂತ್, ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್, ರಾಮ್ ಕಿರಣ್,
ಶ್ರೀನಿವಾಸ್ ಚಿನಿವಾರ, ರಾಘವೇಂದ್ರ, ಕುಳ್ಳಯಪ್ಪ ಸಂಘದ ಅಧ್ಯಕ್ಷೆ ರೇಖಾ, ಕಾರ್ಯದರ್ಶಿ ವೀಣಾ, ಜಂಟಿ ಕಾರ್ಯದರ್ಶಿ ಕೆ.
ಸುಜಾತ ಆಡಳಿತ ಅಧಿಕಾರಿ ರೇಣುಕಾಂಬಾ, ಸಹಾಯಕ ಆಡಳಿತ ಅಧಿಕಾರಿಗಳಾದ ಭಾಗ್ಯವತಿ, ಪ್ರವೀಣ್ ಹಿರಿಯ ಶ್ರೇಣಿ
ಸಹಾಯಕರುಗಳಾದ ಗೀರುವಾಣಿ, ಮಮತಾ, ಇಂದಿರಾ, ಸುಮಾ, ನಿರ್ಮಲಾ, ಗೀತಾ, ಶ್ರೀನಿವಾಸ್ ಸಹಾಯಕರುಗಳಾದ
ಚಂದ್ರಶೇಖರ್, ಸವಿತಾ, ಪದ್ಮನಾಭ,ಕ್ಯಾಷಿಯರ್ ಶ್ರೀನಿವಾಸ್ ಪ್ರಸಾದ್ ಹಾಗೂ ವಿಮಾ ಪ್ರತಿನಿಧಿಗಳು ಉಪಸ್ಥಿತರಿದ್ದರು.