ಚಿತ್ರದುರ್ಗ: ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಶ್ರೀ ಬಿ ವಿಜಯಕುಮಾರ್ ಅವರು ದೇಶದ ಬಗ್ಗೆ ಒಲವು ಅಭಿಮಾನ ಕೇವಲ ಈ ದಿನಕ್ಕಷ್ಟೇ ಸೀಮಿತವಾಗದೆ ಪ್ರತಿದಿನ ಪ್ರತಿ ಕ್ಷಣ ನಮ್ಮಲ್ಲಿರಬೇಕು ಎಂದರು. ಅಲ್ಲದೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅಪ್ರತಿಮ ದೇಶಭಕ್ತರನ್ನು ಸ್ಮರಿಸಿದರು. ಇಂದು ದೇಶದೆಲ್ಲೆಡೆ 77ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತೇವೆ ಎಂದು ಮಾತನಾಡುತ್ತಾ ತಿಳಿಸಿದರು.

ಶ್ರೀ ಮುರುಘ ರಾಜೇಂದ್ರ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಪಥ ಸಂಚಲನ ವಿಭಾಗಕ್ಕೆ ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸುಮಾರು 750 ವಿದ್ಯಾರ್ಥಿಗಳಿಂದ ದೇಶದ ಪ್ರಗತಿಯನ್ನು ಸಾರುವ “ಚಂದ್ರಯಾನ-3” ಮತ್ತು “ದೇಶದ ನಡೆ ಪ್ರಗತಿಯ ಕಡೆ” ಎಂಬ ಕುರಿತಾಗಿ ಪ್ರದರ್ಶಿಸಿದ ಅದ್ಭುತ ನೃತ್ಯ ರೂಪಕ ಕಾರ್ಯಕ್ರಮಕ್ಕೆ. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸುಧಾಕರ್, ತಾಲೂಕು ಶಾಸಕರಾದ ಶ್ರೀ ವೀರೇಂದ್ರ ಪಪ್ಪಿ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೆ ಎಸ್ ನವೀನ್, ಜಿಲ್ಲಾಧಿಕಾರಿಗಳಾದ ಶ್ರೀಮತಿ ದಿವ್ಯ ಪ್ರಭು ಹಾಗೂ ಜಿಲ್ಲಾ ಉಪ ನಿರ್ದೇಶಕರಾದ ಶ್ರೀ ರವಿಶಂಕರ್ ರೆಡ್ಡಿ ಇತರ ಪ್ರಮುಖರು, ಮಕ್ಕಳ ಅದ್ಭುತ ಪ್ರದರ್ಶನಕ್ಕೆ ಮನಸ್ಸೋತು, ವೇದಿಕೆಯಿಂದ ವಿದ್ಯಾರ್ಥಿಗಳೆಡೆಗೆ ಧಾವಿಸಿ, ಹೊಗಳಿ, ಪ್ರಶಂಶಿಸಿ ಪಾರಿತೋಷಕ ಪ್ರಶಸ್ತಿ, ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಎಸ್. ಎಂ.ಪೃಥ್ವಿಶ್, ಶೈಕ್ಷಣಿಕ ಆಡಳಿತ ಅಧಿಕಾರಿ ಡಾಕ್ಟರ್ ಸ್ವಾಮಿ ಕೆ. ಎನ್. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಸಂಪತ್ ಕುಮಾರ್ ಸಿ. ಡಿ. ಐಸಿಎಸ್‌ಸಿ ಪ್ರಾಚಾರ್ಯರಾದ ಬಸವರಾಜಯ್ಯ ಪಿ. ಮಹೇಶ್ ಪಿ ಯು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಕೆಂಚನಗೌಡ. ನೃತ್ಯ ಸಂಯೋಜಕರಾದ ಶ್ರೀ ಮೈಕೆಲ್ ಪ್ರಾನ್ಸಿಸ್, ವಿದ್ಯಾ ವಿಕಾಸ ವಿದ್ಯಾ ಸಂಸ್ಥೆ ಹಾಗೂ ಮಹೇಶ್ ಪಿಯು ಕಾಲೇಜಿನ ಶಿಕ್ಷಕ, ಶಿಕ್ಷಕೇತರ ವರ್ಗ ಹಾಗೂ ಶಾಲಾ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಂಕರ್ ಸರ್ ನಿರೂಪಿಸಿದರು, ಬಸವಂತ್ ಕುಮಾರ್ ಸರ್ ಸ್ವಾಗತಿಸಿದರು, ಹಾಗೂ ಮಂಜುನಾಥ್ ಸರ್ ವಂದಿಸಿದರು.