ಚಿತ್ರದುರ್ಗ ಜ, 26
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನಮ್ಮ ದೇಶದ ಜನತೆಗೆ ಜನವರಿ 26 ಹಾಗೂ ಆಗಸ್ಟ್ 15 ಎರಡು ರಾಷ್ಟ್ರೀಯ ಹಬ್ಬಗಳು ಇದನ್ನು ನಾವು ಗಳು ಅರ್ಥ ಪೂರ್ಣವಾಗಿ ಆಚರಣೆಯನ್ನು ಮಾಡುವುದರ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಟ್ಟ ಮಹಾನ್ ನಾಯಕರುಗಳಿಗೆ ಗೌರವವನ್ನು ಸಲ್ಲಿಸಬೇಕಿದೆ ಎಂದು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಎಂ.ಕೆ.ತಾಜ್‍ಪೀರ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಹಮ್ಮಿಕೊಳ್ಳಲಾದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣವನ್ನು ನೇರವೇರಿಸಿ ಮಾತನಾಡಿದ ಅವರು, ಹಲವಾರು ಜನತೆಯ ತ್ಯಾಗ ಬಲಿದಾನದಿಂದ ನಮಗೆ ಬ್ರಿಟಿಷರ ದಾಸ್ಯದಿಂದ ಮುಕ್ತರನ್ನಾಗಿ ಮಾಡಿದರು. ಈ ಹಿನ್ನಲೆಯಲ್ಲಿ ಈ ಎರಡು ಹಬ್ಬಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಸಂವಿಧಾನ ಎಲ್ಲರಿಗೂ ಸಹಾ ಅನ್ವಯವಾಗುತ್ತದೆ. ಇದಕ್ಕೆ ಯಾವುದೇ ಜಾತಿ, ಧರ್ಮ, ಲಿಂಗ, ಸಮುದಾಯ ಎಂಬ ಬೇಧ ಇಲ್ಲ ಇಲ್ಲಿ ಯಾರೂ ದೊಡ್ಡವರಲ್ಲ ಯಾರೂ ಚಿಕ್ಕವರಲ್ಲ ಎಲ್ಲರು ಸಂವಿಧಾನ ಮುಂದೆ ಸಮಾನರು, ಎಲ್ಲಾ ಧರ್ಮದವರು ಸಂವಿದಾನವನ್ನು ಬಳಸುವ ಹಕ್ಕು ಇದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧೀಜಿ ಮತ್ತು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮಾಜಿ ಸಚಿವರು, ಕೆ.ಪಿ.ಸಿ.ಸಿ.ಉಪಾಧ್ಯಕ್ಷರಾದ ಆಂಜನೇಯ ನಮಗೆ ಯಾವ ರೀತಿ ಯುಗಾದಿ, ರಂಜಾನ್ ಹಬ್ಬಗಳು ಇರುವಂತೆ ಆ.15 ಹಾಗೂ ಜ.26 ಹಬ್ಬಗಳು ಇದ್ದಂತೆ ಇವುಗಳನ್ನು ನಾವುಗಲು ಹಬ್ಬದ ರೀತಿಯಲ್ಲಿ ಆಚರಣೆಯನ್ನು ಮಾಡಬೇಕಿದೆ. ಭಾರತೀಯರಾಗಿ ಹುಟ್ಟಿದ್ದು ನಮ್ಮ ಪುಣ್ಯವಾಗಿದೆ, ಗುಲಾಮಗಿರಿಯಲ್ಲಿದ್ದ ನಮ್ಮ ದೇಶವನ್ನು ಮಹಾತ್ಮ ಗಾಂಧಿಯವರು ಅಹಿಂಸೆಯ ಮೂಲಕ ಬ್ರಿಟಿಷರನ್ನು ದೇಶದಿಂದ ಹೊಡೆದೊಡಿಸಿ ನಮಗೆ ಸ್ವಾತಂತ್ರ್ಯವನ್ನು ಕೊಡಿಸಿದರು. ದೇಶವನ್ನು ಬ್ರಿಟಿಷರಿಂದ ಬಿಡಿಸಲು ಆಗ ದೇಶದಲ್ಲಿ ಯಾವ ಜಾತಿ, ಧರ್ಮ, ಜನಾಂಗವನ್ನು ನೋಡದೇ ಎಲ್ಲರು ಸಹಾ ಕೈಜೋಡಿಸುವುದರ ಮೂಲಕ ದೇಶವನ್ನು ಬ್ರಟಿಷರ ದಾಸ್ಯದಿಂದ ಮುಕ್ತಗೊಳಿಸಿದರು ಎಂದರು.
ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿದ ಮಹಾನೀಯರ ಸೇವೆಯನ್ನು ಇಂದು ನಾವುಗಳು ಸ್ಮರಣೆಯನ್ನು ಮಾಡಬೇಕಿದೆ, ಅವರ ತ್ಯಾಗ ಬಲಿದಾನದ ಫಲವಾಗಿ ಇಂದು ನಾವುಗಳು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಅವರ ಆದರ್ಶಗಳು ನಮ್ಮ ಬದುಕಿಗೆ ದಾರಿ ದೀಪಗಳಾಗಬೇಕು ನಮ್ಮ ಜೀವನಕ್ಕೆ ಸ್ಪೂರ್ತಿಯಾಗಬೇಕಿದೆ ಎಂದು ಅಂಜನೇಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಮೈಲಾರಪ್ಪ, ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಶಿವಣ್ಣ, ತಾಲ್ಲೂಕು ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರಕಾಶ್, ನಗರಾಭೀವೃಧ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಆರ್.ಕೆ. ಸರ್ದಾರ್, ಮಾಜಿ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಜಯಮ್ಮ, ಮುನಿರಾ ಮುಕಾಂದರ್, ಎನ್.ಡಿ.ಕುಮಾರ್. ಪೈಲಟ್, ಅಲ್ಲಾಭಕ್ಷಿ, ಸುದರ್ಶನ್, ಭೂತೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
Views: 7