
ಯುಗ ಮತ್ತು ಆದಿ ಎಂಬ ಎರಡು ಪದಗಳು ಸೇರಿ ಹುಟ್ಟಿಕೊಂಡಿರುವ ಪದವೇ ಯುಗಾದಿ. ಈ ಹಬ್ಬವನ್ನು ಕೆಲವೆಡೆ ಉಗಾದಿ ಎಂದು ಕರೆಯುತ್ತಾರೆ. ಯುಗಾದಿಯೂ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಗಳಲ್ಲಿ ಈ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ.
ಹಿಂದೂಗಳ ಲೆಕ್ಕಾಚಾರದಲ್ಲಿ ಯುಗಾದಿಯನ್ನೇ ಹೊಸ ವರ್ಷವೆಂದು ತಿಳಿಯಲಾಗುತ್ತದೆ. ಈ ಹೊಸ ವರ್ಷವನ್ನು ಬಡವ – ಬಲ್ಲಿದರೆಂಬ ತಾರತಮ್ಯವಿಲ್ಲದೆ ಆಚರಣೆ ಮಾಡುತ್ತಾರೆ. ಬೇವು- ಬೆಲ್ಲ ನೀಡಿ ಜೀವನದಲ್ಲಿ ಸಿಹಿ ಕಹಿ ಸಮಾನವಾಗಿರಲಿ ಎಂದು ಹಾರೈಸುತ್ತಾರೆ. ರೈತರು ಎತ್ತುಗಳನ್ನು ಶೃಂಗರಿಸಿ, ಮೆರವಣಿಗೆ ಮಾಡುತ್ತಾರೆ.
ಹಿಂದೂ ಪುರಾಣಗಳು ಮತ್ತು ದಂತಕಥೆಗಳ ಪ್ರಕಾರ, ಭಗವಾನ್ ಬ್ರಹ್ಮನು ಈ ದಿನದಂದು ವಿಶ್ವವನ್ನು ಸೃಷ್ಟಿಸಿದನು ಎಂದು ನಂಬುಲಾಗುತ್ತದೆ. ಬ್ರಹ್ಮಾಂಡ ವಿಕಾಸದ ಸಮಯದಲ್ಲಿ, ಸೃಷ್ಟಿಕರ್ತ ಬ್ರಹ್ಮ ಈ ದಿನದಂದು ಸೃಷ್ಟಿ ಕಾರ್ಯವನ್ನು ಪ್ರಾರಂಭಿಸಿದನು. ಇನ್ನೂ ಹಿಂದೂಗಳ ನಂಬಿಕೆಯ ಪ್ರಕಾರ, ಬ್ರಹ್ಮ ದೇವರು ಇಡೀ ವಿಶ್ವವನ್ನು ಸೃಷ್ಟಿಸಿದನು ಮತ್ತು ಭೂಮಿಯ ಮೇಲಿನ ನಮ್ಮ ಒಂದು ವರ್ಷವು ಬ್ರಹ್ಮ ದೇವರಿಗೆ ಒಂದು ದಿನಕ್ಕೆ ಸಮಾನವಾಗಿರುತ್ತದೆ. ಆದ್ದರಿಂದ, ನಾವು ಹೊಸ ವರ್ಷದ ಶುಭ ವರ್ಷವನ್ನು ಪ್ರಾರಂಭಿಸಿದಾಗ ಬ್ರಹ್ಮ ದೇವರು ಹೊಸ ದಿನವನ್ನು ಪ್ರಾರಂಭಿಸುತ್ತಾನೆ. ಇಂದಿಗೂ ಆಂಧ್ರಪ್ರದೇಶದಂತಹ ರಾಜ್ಯದಲ್ಲಿ ಯುಗಾದಿಯಂದು ಬ್ರಹ್ಮ ದೇವನನ್ನು ಪೂಜಿಸುತ್ತಾರೆ
ಈ ವರ್ಷ ಯುಗಾದಿ ಹಬ್ಬವೂ ಮಂಗಳವಾರ ರಾತ್ರಿ 10.50ಕ್ಕೆ ಆರಂಭವಾಗಿ, ಬುಧವಾರ ರಾತ್ರಿ 8.20ಕ್ಕೆ ಕೊನೆಗೊಳ್ಳಲಿದೆ. ವಸಂತಕಾಲದ ಮೊದಲ ಮಳೆ ನಂತರ ಹೊಸತನವನ್ನು ಮೈಗೂಡಿಸಿಕೊಳ್ಳುವ ಮೂಲಕ ಯುಗಾದಿಯನ್ನು ಬರಮಾಡಿಕೊಳ್ಳುತ್ತಾರೆ.
The post ಯುಗ..ಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ : ಹಬ್ಬದ ಆರಂಭ ಅಂತ್ಯ ಕಾಲದ ಮಾಹಿತಿ ಇಲ್ಲಿದೆ..! first appeared on Kannada News | suddione.
from ರಾಜ್ಯ ಸುದ್ದಿ – Kannada News | suddione https://ift.tt/NvQmGih
via IFTTT
Views: 0