IND vs AUS 3rd ODI: ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ

ಬುಧವಾರ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೆ, ಆಸೀಸ್ ಭರ್ಜರಿ ಪ್ರದರ್ಶನ ತೋರಿ 21 ರನ್​ಗಳ ಜಯ ದಾಖಲಿಸಿ 2-1 ಅಂತರದಿಂದ ಸರಣಿ ತನ್ನದಾಗಿಸಿತು.ಈ ಮೂಲಕ ಭಾರತ ಪ್ರವಾಸ ಬೆಳೆಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ವಶಪಡಿಸಿಕೊಂಡು ಹಿಂತಿರುಗಿದೆ. ಜೊತೆಗೆ ಬಾರ್ಡರ್- ಗವಾಸ್ಕರ್ ಟ್ರೋಫಿ ಕಳೆದುಕೊಂಡಿದ್ದಕ್ಕೆ ಸೇಡುಕೂಡ ತೀರಿಸಿಕೊಂಡಿದೆ.2019ರ ಬಳಿಕ ಭಾರತ ತಂಡ ತಾಯ್ನಾಡಿನಲ್ಲಿ ಸೋತ ಮೊದಲ ಒಡಿಐ ಸರಣಿ ಇದಾಯಿತು. ಅಲ್ಲದೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಒಡಿಐ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ನಂ.1 ಪಟ್ಟವನ್ನು ಕಳೆದುಕೊಂಡಿದೆ.ಟಾಸ್​ ಗೆದ್ದು ಬ್ಯಾಟಿಂಗ್​ ತೆಗೆದುಕೊಂಡ ಆಸ್ಟ್ರೇಲಿಯಾ ಪರ ಆರಂಭಿಕರು 68 ರನ್​ನ ಜೊತೆಯಾಟ ಬಿಟ್ಟರೆ ಮತ್ತಾವ ಜೋಡಿ ಬೃಹತ್ ರನ್​ ಕಲೆ ಹಾಕಲಿಲ್ಲ. ಎಲ್ಲ ಆಟಗಾರರು 20 ಮತ್ತು 30 ರನ್​ ಗಳಿಕೆಗೆ ವಿಕೆಟ್​ ಒಪ್ಪಿಸಿದರು. ಟ್ರಾವಿಸ್ ಹೆಡ್ 33 ರನ್​ ಗಳಿಸಿದರೆ ಸ್ಟೀವ್​ ಸ್ಮಿತ್​ ಶೂನ್ಯಕ್ಕೆ ವಿಕೆಟ್​ ನೀಡಿದರು.47 ರನ್​ ಗಳಿಸಿದ್ದ ಮಿಚೆಲ್ ಮಾರ್ಷ್ 3 ರನ್​ನಿಂದ ಅರ್ಧಶತಕದಿಂದ ವಂಚಿತರಾದರು. ವಾರ್ನರ್ ಆಟ 23ಕ್ಕೆ ಅಂತ್ಯವಾಯಿತು. ಲಾಬುಶೇನ್ 28, ಅಲೆಕ್ಸ್​ ಕ್ಯಾರಿ 38 ರನ್​ ಗಳಿಸಿದರು. ಅಂತಿಮವಾಗಿ ಆಸೀಸ್ 49 ಓವರ್​ಗಳಲ್ಲಿ 269 ರನ್​ಗೆ ಆಲೌಟ್ ಆಯಿತು.ಭಾರತ ಪರ ಕುಲ್ದೀಪ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ 3 ವಿಕೆಟ್ ಕಿತ್ತು ಮಿಂಚಿದರೆ ಮೊಹಮ್ಮದ್ ಸಿರಾಜ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ತಮ್ಮದಾಗಿಸಿಕೊಂಡರು.ಟಾರ್ಗೆಟ್ ಬೆನ್ನಟ್ಟಿದ ಭಾರತ ಪರ ನಾಯಕ ರೋಹಿತ್​ ಶರ್ಮಾ (30) ಮತ್ತು ಶುಭ್​ಮನ್ ಗಿಲ್​ (37) ಮೊದಲ ವಿಕೆಟ್​ಗೆ 65 ಕಲೆ ಹಾಕಿ ಉತ್ತಮ ಅಡಿಪಾಯ ಹಾಕಿದರು. ನಂತರಲ್ಲಿ ವಿರಾಟ್ ಕೊಹ್ಲಿ (54) ಮತ್ತು ಕೆಎಲ್ ರಾಹುಲ್​ (32), ಹಾರ್ದಿಕ್​ ಪಾಂಡ್ಯ (40) ಅಲ್ಪ ಮೊತ್ತದ ಕಾಣಿಕೆ ನೀಡಿದರೂ ಅದು ತಂಡದ ಗೆಲುವಿಗೆ ಸಾಕಾಗಲಿಲ್ಲ.ಟೀಮ್ ಇಂಡಿಯಾ 49.1 ಓವರ್​​ಗಳಲ್ಲಿ 248 ರನ್​ಗಳಿಗೆ ಆಲೌಟ್ ಆಗಿ ಸೋಲುಂಡಿತು. ಆಸ್ಟ್ರೇಲಿಯಾ ಪರ ಆ್ಯಡಂ ಝಂಪಾ 4 ವಿಕೆಟ್ ಪಡೆದರು. 21 ರನ್​ಗಳ ಗೆಲುವಿನೊಂದಿಗೆ ಕಾಂಗರೂ ಪಡೆ ಸರಣಿ ವಶಪಡಿಸಿಕೊಂಡಿತು.

source https://tv9kannada.com/photo-gallery/cricket-photos/ind-vs-aus-odi-series-here-is-the-photos-of-india-vs-australia-3rd-odi-match-chennai-kannada-cricket-news-vb-au48-541093.html

Leave a Reply

Your email address will not be published. Required fields are marked *