EPFO New Rules 2026: ಭವಿಷ್ಯ ನಿಧಿ ಹಿಂಪಡೆಯುವಿಕೆ ಇನ್ನಷ್ಟು ಸುಲಭ; ಒಮ್ಮೆಗೆ ಬೇಡವೆಂದರೆ ಕಂತುಗಳಲ್ಲಿ ಹಣ ಪಡೆಯಬಹುದು!

ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಣವನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭ ಮತ್ತು ಗ್ರಾಹಕಸ್ನೇಹಿಯಾಗಿಸಲು ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ತರಲಾಗಿದೆ. ಹೊಸ ಸರಳೀಕೃತ ನಿಯಮಗಳ ಪ್ರಕಾರ, 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಪಿಎಫ್ ಸದಸ್ಯರು ತಮ್ಮ ಭವಿಷ್ಯ ನಿಧಿಯಲ್ಲಿರುವ ಒಟ್ಟು ಮೊತ್ತದ ಶೇ. 90ರಷ್ಟು ಹಣವನ್ನು ಹಿಂಪಡೆಯಲು ಅರ್ಹರಾಗಿದ್ದಾರೆ.

ಹಣಕಾಸಿನ ತುರ್ತು ಪರಿಸ್ಥಿತಿ, ಮನೆ ಖರೀದಿ, ವೈದ್ಯಕೀಯ ಅಗತ್ಯಗಳು ಅಥವಾ ಕುಟುಂಬದ ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸಲು ಉದ್ಯೋಗಿಗಳಿಗೆ ತಮ್ಮ ಉಳಿತಾಯದ ಹೆಚ್ಚಿನ ಭಾಗವನ್ನು ಸುಲಭವಾಗಿ ಬಳಸಿಕೊಳ್ಳಲು ಈ ಕ್ರಮವು ನೆರವಾಗಲಿದೆ. ಈ ಹಿಂದೆ ಇದ್ದ ಕಠಿಣ ಷರತ್ತುಗಳು ಮತ್ತು ವಿವಿಧ ಹಂತಗಳ ಮಿತಿಗಳು ದೀರ್ಘಕಾಲದ ಉಳಿತಾಯದ ಬಳಕೆಗೆ ಅಡ್ಡಿಯಾಗಿದ್ದವು; ಈಗಿನ ನಿಯಮ ಬದಲಾವಣೆಯು ಸದಸ್ಯರಿಗೆ ಹೆಚ್ಚಿನ ಆರ್ಥಿಕ ನಮ್ಯತೆಯನ್ನು ನೀಡುತ್ತದೆ.

ನಿರುದ್ಯೋಗಿಗಳಿಗೆ ರಿಲೀಫ್; ಕಾಯುವಿಕೆ ಅವಧಿ 2 ತಿಂಗಳಿಗೆ ಇಳಿಕೆ

ಇದರ ಜೊತೆಗೆ, ಉದ್ಯೋಗ ಕಳೆದುಕೊಂಡ ಅಥವಾ ನಿರುದ್ಯೋಗ ಅವಧಿಯಲ್ಲಿ ಇರುವ ಸದಸ್ಯರಿಗೆ ದೊಡ್ಡ ಮಟ್ಟದ ರಿಲೀಫ್ ನೀಡಲಾಗಿದೆ. ನಿರುದ್ಯೋಗದ ಕಾರಣದಿಂದ ಇಪಿಎಫ್ ಖಾತೆಯಿಂದ ಹಣ ಹಿಂಪಡೆಯಲು ಈ ಹಿಂದೆ ಕನಿಷ್ಠ 12 ತಿಂಗಳ (ಒಂದು ವರ್ಷ) ಕಾಯುವಿಕೆಯ ಅವಧಿ ಇತ್ತು. ಆದರೆ ಇದೀಗ ಆ ಕಾಯುವಿಕೆಯ ಅವಧಿಯನ್ನು ಕೇವಲ 2 ತಿಂಗಳಿಗೆ ಕಡಿತಗೊಳಿಸಲಾಗಿದೆ. ಹೊಸ ಉದ್ಯೋಗ ಹುಡುಕುವ ನಡುವಿನ ಸಂಕ್ರಮಣ ಕಾಲದಲ್ಲಿ ಕುಟುಂಬ ನಿರ್ವಹಣೆ ಮತ್ತು ದೈನಂದಿನ ಖರ್ಚುಗಳಿಗೆ ಈ ಬದಲಾವಣೆಯು ತಕ್ಷಣದ ಆರ್ಥಿಕ ಆಸರೆಯಾಗಲಿದೆ.

ಸುದೀರ್ಘ ಕಾಯುವಿಕೆ ಮತ್ತು ಸಂಕೀರ್ಣ ದಾಖಲೆಗಳ ಪ್ರಕ್ರಿಯೆಯಿಂದ ಉದ್ಯೋಗಿಗಳು ಪಡುತ್ತಿದ್ದ ತೊಂದರೆಗಳನ್ನು ತಪ್ಪಿಸುವುದು ಈ ಸುಧಾರಣೆಯ ಪ್ರಮುಖ ಉದ್ದೇಶವಾಗಿದೆ. ಆದರೆ, ನಿವೃತ್ತಿ ಅಥವಾ ದೀರ್ಘಕಾಲೀನ ಭವಿಷ್ಯಕ್ಕಾಗಿ ಇರುವ ನಿಧಿಯಿಂದ ಹೆಚ್ಚಿನ ಮೊತ್ತವನ್ನು ಮೊದಲೇ ಹಿಂಪಡೆಯುವಾಗ ಸದಸ್ಯರು ತಮ್ಮ ನಿವೃತ್ತಿ ಯೋಜನೆ ಮತ್ತು ಬಡ್ಡಿಯ ಲಾಭದ ಮೇಲಾಗುವ ಪರಿಣಾಮವನ್ನೂ ಗಮನದಲ್ಲಿಟ್ಟುಕೊಳ್ಳುವುದು ಸೂಕ್ತವಾಗಿದೆ.

ಎಸ್​ಡಬ್ಲ್ಯುಪಿಗೆ ಅನುಮೋದನೆ; ಕಂತುಗಳಲ್ಲಿ ಪಿಎಫ್ ಹಣ ಪಡೆಯುವ ಅವಕಾಶ

ನೌಕರರ ಭವಿಷ್ಯ ನಿಧಿ ಸಂಸ್ಥೆಯು (EPFO) ನಿವೃತ್ತಿ ಹೊಂದುವ ಸದಸ್ಯರಿಗಾಗಿ ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆಗೆ (SWP – Systematic Withdrawal Plan) ಅನುಮೋದನೆ ನೀಡಿದ್ದು, ಇನ್ನು ಮುಂದೆ ಒಮ್ಮೆಲೇ ಹಣ ತೆಗೆಯುವ ಬದಲು ನಿಗದಿತ ಕಂತುಗಳಲ್ಲಿ ಉಳಿತಾಯದ ಮೊತ್ತವನ್ನು ಪಡೆಯಬಹುದಾಗಿದೆ.

ಕಾರ್ಮಿಕ ಸಚಿವ ಮನ್‌ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ (ನವೆಂಬರ್ 19, 2026) ನಡೆದ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) 240ನೇ ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.

ಇದರಿಂದ ತಮ್ಮ ಮೂಲ ನಿಧಿಯ ಮಾಲೀಕತ್ವವನ್ನು ಉಳಿಸಿಕೊಂಡೇ, ನಿವೃತ್ತಿಯ ನಂತರ ನಿಯಮಿತ ಮತ್ತು ನಿರೀಕ್ಷಿತ ಆದಾಯದ ಮೂಲವಾಗಿ ಭವಿಷ್ಯ ನಿಧಿ ಉಳಿತಾಯವನ್ನು ಬಳಸಿಕೊಳ್ಳಲು ಸದಸ್ಯರಿಗೆ ಅನುವಾಗುತ್ತದೆ.

ಪ್ರಸ್ತುತ ಇರುವ ನಿಯಮಗಳೇನು?

ಪ್ರಸ್ತುತ ಇರುವ ನಿಯಮದ ಪ್ರಕಾರ, ನಿವೃತ್ತಿಯಾದ ಮೂರು ವರ್ಷಗಳ ಒಳಗೆ ಸಂಪೂರ್ಣ ಪಿಎಫ್ ಮೊತ್ತವನ್ನು ಹಿಂಪಡೆಯಬೇಕಾಗುತ್ತದೆ. ಇಲ್ಲದಿದ್ದರೆ ಆ ಖಾತೆಗೆ ಬಡ್ಡಿ ಸಂದಾಯವಾಗುವುದು ನಿಂತುಹೋಗುತ್ತದೆ.

ಕಂತುಗಳಲ್ಲಿ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಸದಸ್ಯರು ನಿಧನರಾದರೆ, ನಾಮನಿರ್ದೇಶಿತರು (Nominee) ಅಥವಾ ಅವಲಂಬಿತರು ಉಳಿದ ಮೊತ್ತವನ್ನು ಹಿಂಪಡೆಯುವ ಅಥವಾ ನಿಯಮಿತ ಕಂತುಗಳನ್ನು ಮುಮುಂದುವರಿಸುವ ಆಯ್ಕೆಯನ್ನು ಹೊಂದಿರುತ್ತಾರೆ.

ಮೊದಲ ಹಂತದಲ್ಲಿ ಯಾರಿಗೆ ಲಾಭ?

ಈ ಸ್ವಯಂಪ್ರೇರಿತ ಯೋಜನೆಯು ಆರಂಭಿಕ ಹಂತದಲ್ಲಿ ಹಾಲಿ ಇಪಿಎಫ್ ಚಂದಾದಾರರ ಮೇಲೆ ಗಮನ ಕೇಂದ್ರೀಕರಿಸಲಿದ್ದು, 55 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 6.3 ಲಕ್ಷ ಸದಸ್ಯರು ಆರಂಭದಲ್ಲಿ ಇದರ ಪ್ರಯೋಜನ ಪಡೆಯುವ ಅವಕಾಶ ಹೊಂದಿರುತ್ತಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *