Swiss Open 2023: ಎರಡನೇ ಸುತ್ತಿಗೆ ಎಂಟ್ರಿಕೊಟ್ಟ ಸಿಂಧು, ಶ್ರೀಕಾಂತ್, ಪ್ರಣಯ್, ಮಿಥುನ್, ಸಾತ್ವಿಕ್- ಚಿರಾಗ್

ಸ್ವಿಸ್ ಓಪನ್‌ನಲ್ಲಿ ಶುಭಾರಂಭ ಮಾಡಿರುವ ಭಾರತದ ಸ್ಟಾರ್ ಶೆಟ್ಲರ್ ಪಿವಿ ಸಿಂಧು ಬಾಸೆಲ್‌ನಲ್ಲಿ ನಡೆದ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ 21-9, 21-16 ನೇರ ಸೆಟ್​ಗಳಿಂದ ಜೆಂಜಿರಾ ಸ್ಟಾಡೆಲ್‌ಮನ್ ಅವರನ್ನು ಸೋಲಿಸಿ ಎರಡನೇ ಸುತ್ತಿಗೆ ಎಂಟ್ರಿಕೊಟ್ಟಿದ್ದಾರೆ. ಸಿಂಧು ತಮ್ಮ ಮುಂದಿನ ಪಂದ್ಯದಲ್ಲಿ ಇಂಡೋನೇಷ್ಯಾದ ಕುಸುಮಾ ವಾರ್ದಾನಿಯನ್ನು ಎದುರಿಸಲಿದ್ದಾರೆ.ಸಿಂಧು ಹೊರತಾಗಿ ಪುರುಷರ ಸಿಂಗಲ್ಸ್​ನಲ್ಲಿ ಕಿಡಂಬಿ ಶ್ರೀಕಾಂತ್, ಎಚ್.ಎಸ್. ಪ್ರಣಯ್, ಮಿಥುನ್ ಮಂಜುನಾಥ್ ಮತ್ತು ಪುರುಷರ ಡಬಲ್ ಜೋಡಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ-ಚಿರಾಗ್ ಶೆಟ್ಟಿ ಕೂಡ ಎರಡನೇ ಸುತ್ತಿಗೆ ತಲುಪಿದ್ದಾರೆ. ಪುರುಷರ ಸಿಂಗಲ್ಸ್​ನಲ್ಲಿ 21-16, 15-21, 21-18 ರಲ್ಲಿ ವೆಂಗ್ ಹಾಂಗ್ ಯಾಂಗ್ ಅವರನ್ನು ಸೋಲಿಸಿದ ಶ್ರೀಕಾಂತ್, ಮುಂದಿನ ಪಂದ್ಯದಲ್ಲಿ ಲೀ ಚೆಯುಕ್ ಯಿಯು ಅವರನ್ನು ಎದುರಿಸಲಿದ್ದಾರೆ. ಹಾಗೆಯೇ ಮತ್ತೊಬ್ಬ ಶೆಟ್ಲರ್ ಪ್ರಣಯ್ ಅವರು 21-17, 19-21, 21-17ರಲ್ಲಿ ಶಿ ಯು ಕಿ ಅವರನ್ನು ಸೋಲಿಸಿದ್ದು, ತಮ್ಮ ಎರಡನೇ ಸುತ್ತಿನಲ್ಲಿ ಕ್ರಿಸ್ಟೋ ಪೊಪೊವ್ ವಿರುದ್ಧ ಸೆಣಸಲಿದ್ದಾರೆ. ಮಿಥುನ್ ಮಂಜುನಾಥ್ ಕೂಡ ತಮ್ಮ ಮೊದಲ ಪಂದ್ಯದಲ್ಲಿ ಜೊರಾನ್ ಕ್ವೀಕೆಲ್ ವಿರುದ್ಧ 21-8, 21-17 ಸೆಟ್​ಗಳ ಅಂತರದಲ್ಲಿ ಗೆದ್ದು, ಎರಡನೇ ಸುತ್ತಿಗೆ ಮುನ್ನಡೆದ್ದಿದ್ದಾರೆ. ಇದೀಗ ತಮ್ಮ ಎರಡನೇ ಸುತ್ತಿನಲ್ಲಿ ಚೈನೀಸ್ ತೈಪೆಯ ಚಿಯಾ ಹಾವೊ ಲೀ ಅವರನ್ನು ಎದುರಿಸಲಿದ್ದಾರೆಇನ್ನು ಪುರುಷರ ಡಬಲ್ಸ್​ನಲ್ಲಿ ಸಾತ್ವಿಕ್ ಮತ್ತು ಚಿರಾಗ್ 21-15, 21-18 ಸೆಟ್​ಗಳಿಂದ ಬೂನ್ ಕ್ಸಿನ್ ಯುವಾನ್ ಮತ್ತು ವಾಂಗ್ ಟಿಯೆನ್ ಸಿಯನ್ನು ಸೋಲಿಸಿದರು. ಭಾರತದ ಜೋಡಿ ಈಗ ಎರಡನೇ ಸುತ್ತಿನಲ್ಲಿ ಚೈನೀಸ್ ತೈಪೆಯ ಫಾಂಗ್-ಚಿಹ್ ಲೀ ಮತ್ತು ಫಾಂಗ್-ಜೆನ್ ಲೀ ಅವರನ್ನು ಎದುರಿಸಲಿದೆ.

source https://tv9kannada.com/photo-gallery/swiss-open-2023-indian-shuttlers-pv-sindhu-kidambi-srikanth-and-hs-prannoy-advance-to-second-round-psr-au14-541234.html

Leave a Reply

Your email address will not be published. Required fields are marked *