ಚಿತ್ರದುರ್ಗ, (ಮಾ.23) : ಬಿರು ಬೇಸಿಗೆಯಲ್ಲಿ ಗುಟುಕು ನೀರು ದೊರೆಯದೇ, ಪರಿತಪಿಸಿ, ದಾಹದಿಂದ ಎಷ್ಟೋ ಪಕ್ಷಿಗಳು ಸಾವನ್ನಪ್ಪುತ್ತವೆ. ಈ ಸುಡುವ ಬಿಸಿಲಿನಲ್ಲಿ ಪಕ್ಷಿಗಳ ದಾಹ ನೀಗಿಸಲು ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಮುಂದೆ, ಬಾಲ್ಕನಿಯಲ್ಲಿ ಅಥವಾ ಮನೆಯ ಕಾಂಪೌಂಡ್ ಮೇಲೆ ಒಂದು ಮಣ್ಣಿನ ಪಾತ್ರೆ ಅಥವಾ ತಟ್ಟೆಯಲ್ಲಿ ನೀರನ್ನು ಇಟ್ಟು, ಅಸಹಾಯಕ ಪಕ್ಷಿಗಳಿಗೆ ನೀರುಣಿಸಿದರೆ ಹಲವಾರು ಪಕ್ಷಿಗಳ ಜೀವ ಉಳಿಸಿದ ಪುಣ್ಯ ಲಭಿಸುತ್ತದೆ.
ಇದೇ ನಿಟ್ಟಿನಲ್ಲಿ, ಸಮಾಜದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಗುಬ್ಬಚ್ಚಿ ಬರ್ಡ್ ಟ್ರಸ್ಟ್ ಮತ್ತು ನಗರದ ಪ್ರತಿಷ್ಠಿತ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಪಕ್ಷಿಗಳಿಗಾಗಿಯೇ ಮನೆ-ಮನೆಗೂ ಮಣ್ಣಿನ ತಟ್ಟೆಯನ್ನು ಉಚಿತವಾಗಿ ನೀಡಿ, ಸಂಸ್ಥೆಯ ಲೋಕ ಕಲ್ಯಾಣ ಧ್ಯೇಯವನ್ನು ಅನುಷ್ಟಾನಗೊಳಿಸುವ ಮಹತ್ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ.
ವಿಶ್ವ ಗುಬ್ಬಚ್ಚಿ ದಿನಾಚರಣೆ-2023 ಅಂಗವಾಗಿ ಗುಬ್ಬಚ್ಚಿ ಪಕ್ಷಿ ಹಬ್ಬ-2023 ಆಚರಣೆಯನ್ನು ದಿನಾಂಕ: 26-03-2023ರ ಭಾನುವಾರದಂದು ಹಮ್ಮಿಕೊಳ್ಳಲಾಗಿದ್ದು, ವಿವರವಾದ ಕರಪತ್ರವನ್ನು ಈ ಪತ್ರದೊಂದಿಗೆ ಲಗತ್ತಿಸಿದೆ.
ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಹಲವಾರು ಮೂಕ ಜೀವಿಗಳನ್ನು ಕಾಪಾಡುವ ನಮ್ಮ ಪ್ರಯತ್ನವನ್ನು ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
The post ಮಾ.26 ರಂದು ಗುಬ್ಬಚ್ಚಿ ದಿನಾಚರಣೆ : ಪಕ್ಷಿಗಳಿಗಾಗಿ ಉಚಿತ ಮಣ್ಣಿನ ತಟ್ಟೆ ವಿವರಣಾ ಕಾರ್ಯಕ್ರಮ first appeared on Kannada News | suddione.
from ಚಿತ್ರದುರ್ಗ – Kannada News | suddione https://ift.tt/gH6JdEo
via IFTTT