
ಉದ್ಯೋಗ ಹುಡುಕುತ್ತಿರುವವರಿಗೆ CPRI ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಸುಮಾರು 99 ಹುದ್ದೆಗಳು ಖಾಲಿ ಇದ್ದು, ಭರ್ತಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಹೆಚ್ಚಿನ ಮಾಹಿತಿಗೆ cpri.res.in ವೆಬ್ಸೈಟ್ ಗೆ ಹೋಗಿ ಮಾಹಿತಿ ಪಡೆಯಬಹುದು.
ಖಾಲಿ ಇರುವ ಹುದ್ದೆಗಳ ಡಿಟೈಲ್ ಇಲ್ಲಿದೆ. 24 ತಂತ್ರಜ್ಞ ಹುದ್ದೆ, 40 ಇಂಜಿನಿಯರಿಂಗ್ ಅಧಿಕಾರಿ, 18 ಸಹಾಯಕ ಗ್ರೇಡ್ ಹುದ್ದೆ, 13 ಎಂಜಿನಿಯರಿಂಗ್ ಸಹಾಯಕ, 4 ವೈಜ್ಞಾನಿಕ ಸಹಾಯಕ ಹುದ್ದೆಗಳು ಖಾಲಿ ಇದೆ. ಅರ್ಜಿ ಸಲ್ಲಿಸಲು ಈಗಾಗಲೇ ಸಮಯ ಆರಂಭವಾಗಿದೆ. ಮಾರ್ಚ್ 24ರಿಂದಾನೇ ಅರ್ಜಿ ಸಲ್ಲಿಸಬಹುದು. ಏಪ್ರಿಲ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
SC/ST, PWBD, ಮಾಜಿ ಸೈನಿಕ, ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಇನ್ನುಳಿದಂತೆ ಇಂಜಿನಿಯರಿಂಗ್ ಅಧಿಕಾರಿ, ವೈಜ್ಞಾನಿಕ ಸಹಾಯಕ, ಇಂಜಿನಿಯರಿಂಗ್ ಸಹಾಯಕ ಹುದ್ದೆಗೆ 1000 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ತಂತ್ರಜ್ಞ ಸಹಾಯಕ ಹುದ್ದೆಗೆ 500 ರೂಪಾಯಿ ನೀಡಬೇಕಾಗುತ್ತದೆ.
The post CPRIನಲ್ಲಿ 99 ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ : ಆನ್ಲೈನ್ ಮೂಲಕ ಕರೆ first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/wZ82RNv
via IFTTT
Views: 0