ಚೆನ್ನೈ: ಮಂಗಳವಾರ ತಮಿಳುನಾಡು ಪ್ರೀಮಿಯರ್ ಲೀಗ್ ಪಂದ್ಯ ಒಂದರಲ್ಲಿ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಮುರಳಿ ವಿಜಯ್ ಬೌಂಡರಿ ಗೆರೆ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದಾಗ ಕ್ರೀಡಾಂಗಣದಲ್ಲಿದ್ದ ಅವರ ಅಭಿಮಾನಿಗಳು ‘ಡಿಕೆ, ಡಿಕೆ’ (ದಿನೇಶ್ ಕಾರ್ತಿಕ್) ಎಂದು ಪದೇಪದೇ ಗಟ್ಟಿ ದ್ವನಿಯಲ್ಲಿ ಉಚ್ಚರಿಸುವ ಮೂಲಕ ಮುಜುಗರ ಉಂಟುಮಾಡಿದ್ದಾರೆ.
ಹಾಗೆ ಮಾಡದಂತೆ ಮುರುಳಿ ಕೈಜೋಡಿಸಿ ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಮುರಳಿ ಅಭಿಮಾನಿಗಳ ಉಚೆಷ್ಟಗೆ ಕಾರಣ ಇಷ್ಟೇ, ಮುರುಳಿ ವಿಜಯ್ ಪತ್ನಿ ನಿಕಿತಾ ದಿನೇಶ್ ಕಾರ್ತಿಕ್ ಅವರ ಮಾಜಿ ಪತ್ನಿ. ಗೆಳೆಯನ ಪತ್ನಿಯನ್ನೇ ಮುರಳಿಯು ತನ್ನವಳನ್ನಾಗಿ ಮಾಡಿಕೊಂಡಿದ್ದರು. 2012ರಲ್ಲಿ ಈ ಘಟನೆ ನಡೆದಿತ್ತು. ಆ ಬಳಿಕ ಕಾರ್ತಿಕ್ ಮತ್ತು ಮುರಳಿ ನಡುವೆ ವೈ ಮನಸು ಏರ್ಪಟ್ಟಿತ್ತು. ಅಂತಿಮವಾಗಿ ದಿನೇಶ್ ಕಾರ್ತಿಕ್ 2015 ರಲ್ಲಿ ಸ್ಕ್ಯಾಷ್ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಅವರನ್ನು ವಿವಾಹವಾಗಿದ್ದರು.