
ಹೊಸದಿಲ್ಲಿ : ಅಮೆರಿಕಾ ಸೇರಿದಂತೆ ಅನೇಕ ರಾಷ್ಟ್ರಗಳು ಹಣದುಬ್ಬರದಿಂದ ತತ್ತರಿವೆ. ಶ್ರೀಲಂಕಾ, ಪಾಕಿಸ್ತಾನ ಸೇರಿದಂತೆ ಏಷ್ಯಾದ 14 ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರುವ ಅವಕಾಶಗಳಿವೆ. ಆದರೆ ಭಾರತಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಗಳಿಲ್ಲ ಎಂದು ಬ್ಲೂಮ್ ಬರ್ಗ್ ಅರ್ಥಶಾಸ್ತ್ರಜ್ಞರ ಸಮೀಕ್ಷೆಯಲ್ಲಿ ಹೇಳಲಾಗಿದೆ.
ಹಣದುಬ್ಬರದ ನಿಗ್ರಹದ ಸಲುವಾಗಿ ಅಮೇರಿಕಾ ಸೇರಿದಂತೆ ಅಂತರಾಷ್ಟ್ರೀಯ ಬ್ಯಾಂಕುಗಳು ತಮ್ಮ ಬಡ್ಡಿ ದರವನ್ನು ಹೆಚ್ಚಿಸುವೆ. ಮತ್ತೊಂದು ಕಡೆ ಅತಿಯಾದ ಸಾಲಗಳಿಂದ ಏಷ್ಯಾ ರಾಷ್ಟ್ರಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕುತ್ತಿವೆ ಎಂದು ಸಮೀಕ್ಷೆ ಹೇಳಿದೆ.
ಈಗಾಗಲೇ ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕವಾಗಿ ದಿವಾಳಿಯಾಗಿದೆ. ಮುಂದಿನ ವರ್ಷದಲ್ಲಿ ಆರ್ಥಿಕ ಹಿಂಜರಿತ ಎದುರಾಗುವ ಸಾಧ್ಯತೆ ಶೇ 85ರಷ್ಟಿದೆ. ನ್ಯೂಜಿಲ್ಯಾಂಡ್ ನಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆಗಳು ಶೇ 33 ರಷ್ಟಿದೆ. ಪಾಕಿಸ್ತಾನದಲ್ಲಿ ಶೇ 20, ಜಪಾನ್ ನಲ್ಲಿ ಶೇಕಡ 25, ದಕ್ಷಿಣ ಕೋರಿಯಾದಲ್ಲಿ ಶೇಕಡ 25, ಚೀನಾದಲ್ಲಿ ಶೇಕಡ 20ರಷ್ಟು ಆರ್ಥಿಕ ಬಿಕ್ಕಟ್ಟು ಎದುರಾಗುವ ಸಾಧ್ಯತೆಗಳಿವೆ ಎಂದು ಸಮೀಕ್ಷೆ ತಿಳಿಸಿದೆ.