IPL 2023: ಗೆಲುವಿನ ಖುಷಿಯಲ್ಲಿದ್ದ ಆರ್​ಸಿಬಿಗೆ ಬಿಗ್ ಶಾಕ್! ಕೆಕೆಆರ್ ವಿರುದ್ಧ ಸ್ಟಾರ್ ವೇಗಿ ಅಲಭ್ಯ

ಆಡಿದ ಮೊದಲ ಪಂದ್ಯದಲ್ಲೇ 5ಬಾರಿಯ ಚಾಂಪಿಯನ್​ಗಳಿಗೆ ಮಣ್ಣು ಮುಕ್ಕಿಸಿದ ಆರ್​ಸಿಬಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸಿಸ್ ಅರ್ಧಶತಕದ ನೆರವಿನಿಂದ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಆದರೆ, ಈ ಗೆಲುವಿನ ಸಂಭ್ರಮದಲ್ಲಿದ್ದ ಆರ್‌ಸಿಬಿಗೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಸ್ಟಾರ್ ವೇಗಿ ಇಂಜುರಿಯಿಂದಾಗಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಇಂಜುರಿಗೆ ಒಳಗಾಗಿದ್ದ ವೇಗದ ಬೌಲರ್ ರೀಸ್ ಟೋಪ್ಲಿ ಕೆಕೆಆರ್ ವಿರುದ್ಧ ಆಡುವುದಿಲ್ಲ ಎಂದು ಇನ್​ಸೈಡ್ ಸ್ಫೋರ್ಟ್​ ವರದಿ ಮಾಡಿದೆ. ಮುಂಬೈ ಇನ್ನಿಂಗ್ಸ್​ನ 8 ನೇ ಓವರ್‌ನಲ್ಲಿ ಶಾರ್ಟ್ ಫೈನ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡ ಟೋಪ್ಲಿ ಮೈದಾನದಿಂದ ಹೊರಹೋಗಿದ್ದರು. ಹೀಗಾಗಿ ಟೋಪ್ಲಿ ಟೂರ್ನಿಯಿಂದಲೇ ಹೊರಬೀಳುವ ಆತಂಕ ಎದುರಾಗಿತ್ತು. ಆದರೆ ಈ ಬಗ್ಗೆ ಅಪ್​ಡೇಟ್ ನೀಡಿರುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, ಟೋಪ್ಲಿ ಅವರನ್ನು ಸ್ಕ್ಯಾನಿಂಗ್​ಗೆ ಕರೆದೊಯ್ಯಲಾಗಿದೆ. ಅದೃಷ್ಟವಶಾತ್ ಅಂದುಕೊಂಡಷ್ಟು ನೋವಿಲ್ಲ. ಸಧ್ಯಕ್ಕೆ ಟೋಪ್ಲಿ ಫಿಟ್‌ನೆಸ್ ಬಗ್ಗೆ ಯಾವುದೇ ಅಪ್‌ಡೇಟ್ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.ಟೋಪ್ಲಿ ಇಂಜುರಿಯೊಂದಿಗೆ ಆರ್​ಸಿಬಿ ಪಾಳಯದಲ್ಲಿ ಗಾಯಗೊಂಡವರ ಸಂಖ್ಯೆ 4ಕ್ಕೇರಿದೆ. ಹಾಗಿದ್ದರೆ ಇಂಜುರಿಗಳೊಗಾಗಿರುವ ಆರ್​ಸಿಬಿಯ ಆಟಗಾರರು ಯಾರು ಎಂಬುದರ ವಿವರ ಇಲ್ಲಿದೆ.ಟೋಪ್ಲಿಗೂ ಮೊದಲು ಇಂಜುರಿಗೊಳಗಾಗಿದ್ದ  ಆಸೀಸ್ ವೇಗಿ ಜೋಶ್ ಹ್ಯಾಜಲ್‌ವುಡ್, ಸೀಸನ್​ನ ಮೊದಲಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.ಇವರೊಂದಿಗೆ ಮಧ್ಯಮ ಕ್ರಮಾಂಕದ ಬ್ಯಾಟರ್ ರಜತ ಪಾಟಿದರ್ ಕೂಡ ಇಂಜುರಿಗೆ ಒಳಗಾಗಿದ್ದು ಆರಂಭಿಕ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ.ಇನ್ನು ಮೊದಲ ಬಾರಿಗೆ ಆರ್​ಸಿಬಿ ಸೇರಿಕೊಂಡಿದ್ದ ವಿಲ್ ಜಾಕ್ಸ್ ಕೂಡ ಇಂಜುರಿಯಿಂದಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ವೇಗಿ ಟೋಪ್ಲಿ ಇಂಜುರಿಗೊಂಡಿರುವುದು ಆರ್​ಸಿಬಿ ಪಾಳಯಕ್ಕೆ ಆತಂಕ ತಂದ್ದೊಡ್ಡಿದೆ.

source https://tv9kannada.com/photo-gallery/cricket-photos/ipl-2023-reece-topley-to-miss-kkr-vs-rcb-match-due-to-dislocated-shoulder-psr-au14-548427.html

Leave a Reply

Your email address will not be published. Required fields are marked *