Skip to content
  • Monday, March 23, 2026
  • ABOUT US
  • CONTACT US
  • PRIVACY POLICY

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • PRIVACY POLICY
  • Horoscope
  • Home
  • Sports
  • IPL 2023: ಐಪಿಎಲ್​ಗೆ ದಸುನ್ ಶಾನಕ ಎಂಟ್ರಿ..!
Sports

IPL 2023: ಐಪಿಎಲ್​ಗೆ ದಸುನ್ ಶಾನಕ ಎಂಟ್ರಿ..!

April 4, 2023
samagrasuddi

IPL 2023: ಶ್ರೀಲಂಕಾ ತಂಡದ ನಾಯಕ ದಸುನ್ ಶಾನಕಗೆ ಕೊನೆಗೂ ಐಪಿಎಲ್​ನಲ್ಲಿ ಅವಕಾಶ ಲಭಿಸಿದೆ. ಈ ಬಾರಿಯ ಐಪಿಎಲ್​ ಹರಾಜಿನಲ್ಲಿ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಶಾನಕ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.ಇದೀಗ ಗುಜರಾತ್ ಟೈಟಾನ್ಸ್ ತಂಡವು ಕೇನ್ ವಿಲಿಯಮ್ಸನ್ ಅವರ ಬದಲಿ ಆಟಗಾರನಾಗಿ ದಸುನ್ ಶಾನಕ ಅವರನ್ನು ಆಯ್ಕೆ ಮಾಡಿದೆ. ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಲೈನ್​ನಲ್ಲಿ ಕ್ಯಾಚ್ ಹಿಡಿಯಲು ಯತ್ನಿಸಿದ್ದ ವಿಲಿಯಮ್ಸನ್ ಗಾಯಗೊಂಡಿದ್ದರು.ಗಾಯವು ಗಂಭೀರವಾಗಿದ್ದರಿಂದ ಕೇನ್ ವಿಲಿಯಮ್ಸನ್ ಐಪಿಎಲ್​ನಿಂದ ಹೊರಗುಳಿದಿದ್ದಾರೆ. ಇದೀಗ ಅವರ ಬದಲಿ ಆಟಗಾರನಾಗಿ ದಸುನ್ ಶಾನಕ ಅವರನ್ನು ಗುಜರಾತ್ ಟೈಟಾನ್ಸ್ ತಂಡವು ಆಯ್ಕೆ ಮಾಡಿದೆ.ಸದ್ಯ ನ್ಯೂಜಿಲೆಂಡ್ ವಿರುದ್ಧ ಸರಣಿ ಆಡುತ್ತಿರುವ ದಸುನ್ ಶಾನಕ ಏಪ್ರಿಲ್ 9 ರ ಬಳಿಕ ಗುಜರಾತ್ ಟೈಟಾನ್ಸ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಶಾನಕ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಗಿದ್ದು, ಮಧ್ಯಮ ವೇಗಿಯ ಪಾತ್ರವನ್ನೂ ಕೂಡ ನಿರ್ವಹಿಸುತ್ತಾರೆ. ಇತ್ತೀಚೆಗೆ ಭಾರತದಲ್ಲಿ ನಡೆದ T20I ಸರಣಿಯಲ್ಲಿ, ಶಾನಕ ಮೂರು ಇನ್ನಿಂಗ್ಸ್‌ಗಳಲ್ಲಿ 187 ಸ್ಟ್ರೈಕ್ ರೇಟ್‌ನಲ್ಲಿ 124 ರನ್ ಚಚ್ಚಿದ್ದರು. ಹಾಗೆಯೇ ಏಕದಿನ ಸರಣಿಯಲ್ಲಿ 121 ರನ್​ ಬಾರಿಸಿ ಅಬ್ಬರಿಸಿದ್ದರು.ಈ ಭರ್ಜರಿ ಪ್ರದರ್ಶನದ ಫಲವಾಗಿ ಕೊನೆಗೂ ದಸುನ್ ಶಾನಕಗೆ ಐಪಿಎಲ್​ನಲ್ಲಿ ಅವಕಾಶ ಲಭಿಸಿದೆ. ಇದಕ್ಕೂ ಮುನ್ನ ಕಳೆದ ಸೀಸನ್​ನಲ್ಲೂ ಹರಾಜಿಗಾಗಿ ಹೆಸರು ನೀಡಿದ್ದ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಈ ಬಾರಿ ಹರಾಜಾಗಲಿದ್ದಾರೆ ಎಂಬ ನಿರೀಕ್ಷೆ ಕೂಡ ಹುಸಿಯಾಗಿತ್ತು. ಆದರೆ ಇದೀಗ ಬದಲಿ ಆಟಗಾರನ ರೂಪದಲ್ಲಿ ದಸುನ್ ಶಾನಕ ಅವರ ಅದೃಷ್ಟ ಖುಲಾಯಿಸಿದೆ.
ಗುಜರಾತ್ ಟೈಟಾನ್ಸ್​ ತಂಡ ಹೀಗಿದೆ: ವೃದ್ಧಿಮಾನ್ ಸಹಾ, ಶುಭ್​ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ (ನಾಯಕ), ವಿಜಯ್ ಶಂಕರ್, ರಾಹುಲ್ ತೇವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಜೋಶ್ವ ಲಿಟಲ್, ಯಶ್ ದಯಾಳ್, ಅಲ್ಝಾರಿ ಜೋಸೆಫ್, ಜಯಂತ್ ಯಾದವ್, ಮೋಹಿತ್ ಶರ್ಮಾ, ಶ್ರೀಕರ್ ಭರತ್, ಅಭಿನವ್ ಮನೋಹರ್, ಪ್ರದೀಪ್ ಸಾಂಗ್ವಾನ್, ಮ್ಯಾಥ್ಯೂ ವೇಡ್, ಒಡಿಯನ್ ಸ್ಮಿತ್, ಡೇವಿಡ್ ಮಿಲ್ಲರ್, ಸಾಯಿ ಕಿಶೋರ್, ಶಿವಂ ಮಾವಿ, ದರ್ಶನ್ ನಲ್ಕಂಡೆ, ಉರ್ವಿಲ್ ಪಟೇಲ್, ದಸುನ್ ಶಾನಕ.

source https://tv9kannada.com/photo-gallery/cricket-photos/ipl-2023-gujarat-titans-signs-dausn-shanaka-as-kane-williamsons-replacement-zp-au50-549278.html

Post navigation

IPL 2023: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾರನ್ನು ಹಿಂದಿಕ್ಕಿದ ಧೋನಿ
IPL 2023: ಭರ್ಜರಿ ದಾಖಲೆ ನಿರ್ಮಾಣ: ಐಪಿಎಲ್​ ಅಂಗಳದಲ್ಲಿ ಹೊಸ ಕ್ರಿಸ್ ಗೇಲ್

Leave a Reply Cancel reply

Your email address will not be published. Required fields are marked *

CITIES

Cities

ಕರ್ನಾಟಕ ಹವಾಮಾನ ಎಚ್ಚರಿಕೆ Weather Alert Karnataka Today.

March 22, 2026
samagrasuddi

ಇಂದಿನ ಹವಾಮಾನ ಸ್ಥಿತಿಕರ್ನಾಟಕ ರಾಜ್ಯದಲ್ಲಿ ಇಂದಿನ ಹವಾಮಾನವು ಬಿಸಿಲು ಹಾಗೂ ಮೋಡ ಕವಿದ ವಾತಾವರಣದ ಮಿಶ್ರಣವಾಗಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಗುಡುಗು-ಮಿಂಚಿನೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.ತಾಪಮಾನ: ಸುಮಾರು 34°C ರಿಂದ 37°Cಬೆಳಗ್ಗೆ: ಬಿಸಿಲು ಹೆಚ್ಚಾಗಿರುತ್ತದೆಮಧ್ಯಾಹ್ನ/ಸಂಜೆ: ಮೋಡ ಕವಿದು ಮಳೆಯ ಸಾಧ್ಯತೆಮಳೆ…

Cities

ತುರುವೇಕೆರೆಯ ವಿದ್ಯಾರಣ್ಯ”D Ed College”ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ಭರ್ಜರಿ ಯಶಸ್ಸು.

March 18, 2026
samagrasuddi
Cities

Karnataka Weather Today: ರಾಜ್ಯದಲ್ಲಿಂದು ಮಳೆಯ ಮುನ್ಸೂಚನೆ, ಹೇಗಿರಲಿದೆ ಹವಾಮಾನ?

March 18, 2026
samagrasuddi
Cities

LPG Helpline Karnataka: ಗ್ಯಾಸ್ ಸಿಲಿಂಡರ್ ಸಮಸ್ಯೆಗೆ ಆಹಾರ ಇಲಾಖೆಯ ಟೋಲ್ ಫ್ರೀ ನಂಬರ್.

March 16, 2026
samagrasuddi
Cities

ಯುಗಾದಿ ಮತ್ತು ರಂಜಾನ್ ಹಬ್ಬದ ಸಂಭ್ರಮ: KSRTCಯಿಂದ 2,000 ವಿಶೇಷ ಬಸ್‌ಗಳ ವ್ಯವಸ್ಥೆ, ಮುಂಗಡ ಟಿಕೆಟ್ ಮೇಲೆ ಭರ್ಜರಿ ರಿಯಾಯಿತಿ!

March 15, 2026
samagrasuddi

You may Missed

Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80

March 23, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 7 | ದಿನ 79

March 22, 2026
samagrasuddi
Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 6 | ದಿನ 78

March 21, 2026
samagrasuddi
Home Spiritual

Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 4.5 | ದಿನ 77

March 20, 2026
samagrasuddi
  • ಕರ್ನಾಟಕ ಆಯುಷ್ ಇಲಾಖೆ ನೇಮಕಾತಿ 2026:ಬೆಂಗಳೂರಿನಲ್ಲಿ ಖಾತೆ ಸಹಾಯಕ ಹುದ್ದೆಗೆ ನೇರ ಸಂದರ್ಶನ | AYUSH Karnataka Recruitment
  • ಇತಿಹಾಸದಲ್ಲೇ ಮೊದಲ ಬಾರಿಗೆ 94ರ ಗಡಿ ದಾಟಿದ ಡಾಲರ್: ರೂಪಾಯಿ ಮೌಲ್ಯ ತೀವ್ರ ಕುಸಿತಕ್ಕೆ ಕಾರಣಗಳೇನು?
  • ಹವಾಮಾನ ಬದಲಾವಣೆಯಿಂದ ಕಾಡುತ್ತಿರುವ ಒಣ ಕೆಮ್ಮು: ಕಾರಣ, ಲಕ್ಷಣ ಮತ್ತು ಪರಿಹಾರ.
  • ​Day Special, ಮಾರ್ಚ್ 23: ದೇಶಪ್ರೇಮದ ಕಿಚ್ಚು ಮತ್ತು ಜಾಗತಿಕ ಬದಲಾವಣೆಯ ದಿನ – ಒಂದು ಸಮಗ್ರ ನೋಟ
  • Daily Bhagavad Gita– ಅಧ್ಯಾಯ 4 (ಜ್ಞಾನಯೋಗ) | ಶ್ಲೋಕ 8 | ದಿನ 80
Copyright © 2026
CONTACT US
Theme by: Theme Horse
Proudly Powered by: WordPress