

ಇಂದು ಡಬಲ್ ಹೆಡರ್ ದಿನ. ಅಂದರೆ ಈ ದಿನ ಐಪಿಎಲ್‌ನಲ್ಲಿ ಎರಡು ಪಂದ್ಯಗಳು ನಡೆಯಲ್ಲಿದ್ದು, ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಗುವಾಹಟಿಯಲ್ಲಿ ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಐಪಿಎಲ್‌ನಲ್ಲಿ ಎರಡೂ ತಂಡಗಳು ತಲಾ 2 ಪಂದ್ಯಗಳನ್ನು ಆಡಿವೆ. ಇದರಲ್ಲಿ ಡೆಲ್ಲಿ ತಂಡಕ್ಕೆ ಒಂದೇ ಒಂದು ಗೆಲುವು ಸಿಕ್ಕಿಲ್ಲ. ಮತ್ತೊಂದೆಡೆ, ಕಳೆದ ಬಾರಿಯ ರನ್ನರ್ ಅಪ್ ತಂಡ ರಾಜಸ್ಥಾನ, ಹೈದರಾಬಾದ್ ವಿರುದ್ಧ 72 ರನ್‌ಗಳ ಭಾರೀ ಅಂತರದಿಂದ ಜಯಗಳಿಸುವ ಮೂಲಕ ಐಪಿಎಲ್-2023 ರ ಪ್ರಯಾಣವನ್ನು ಪ್ರಾರಂಭಿಸಿತು. ಕಳೆದ ಪಂದ್ಯದಲ್ಲಿ ಸಂಜು ಪಡೆ ಕೇವಲ 5 ರನ್‌ಗಳಿಂದ ಸೋತಿದ್ದರೂ, ಪಿಂಕ್ ಆರ್ಮಿ ತಂಡ ಕೊನೆಯ ಓವರ್‌ನವರೆಗೂ ಹೋರಾಟ ಮುಂದುವರಿಸಿದ್ದು ಶ್ಲಾಘನೀಯ.
Views: 0