32 ವರ್ಷಗಳಲ್ಲಿ 100 ಕ್ಕೂ ಅಧಿಕ ವಿವಾಹಗಳನ್ನು ಮಾಡಿಕೊಂಡ ವ್ಯಕ್ತಿ, ಒಬ್ಬಳಿಗೂ ವಿಚ್ಛೇದನೆ ನೀಡಿಲ್ಲವಂತೆ!

International: ಈ ವ್ಯಕ್ತಿ 100ಕ್ಕೂ ಹೆಚ್ಚು ಮಹಿಳೆಯರ ಜೊತೆಗೆ ವಿವಾಹ ಮಾಡಿಕೊಂಡಿದ್ದಾನೆ. 1949 ಮತ್ತು 1981 ರ ನಡುವೆ ಈ ಮಹಿಳೆಯರನ್ನು ವಿವಾಹವಾಗಿದ್ದಾನೆ. ಕುತೂಹಲಕಾರಿ ಸಂಗತಿಯೆಂದರೆ, ಈ ವ್ಯಕ್ತಿಯು ಇಷ್ಟು ಮದುವೆಗಳನ್ನು ಮಾಡಿಕೊಂಡರೂ ಸಹಿತ ಯಾರಿಗೂ ವಿಚ್ಛೇದನ ನೀಡಿಲ್ಲ ಮತ್ತು ಈತ ಇದುವರೆಗೆ ಗರಿಷ್ಠ ಸಂಖ್ಯೆಯ ವಿವಾಹಗಳನ್ನು ಮಾಡಿಕೊಂಡ ದಾಖಲೆಯನ್ನು ತನ್ನ ಹೆಸರಿನ ಮೇಲೆ ಹೊಂದಿದ್ದಾನೆ.  

 ಗಿನ್ನೆಸ್ ಪುಸ್ತಕಕ್ಕೆ ಸೇರಲು ಜನರು ಏನೆಲ್ಲಾ ಮಾಡುತ್ತಾರೆ ಎಂಬುದಕ್ಕೆ ಈ ಸುದ್ದಿಯೇ ಉದಾಹರಣೆ. ಈ ಪ್ರಕ್ರಿಯೆಯು ನಿರಂತರವಾಗಿ ನಡೆದುಕೊಂಡು ಬಂದಿದ್ದು, ಭವಿಷ್ಯದಲ್ಲಿಯೂ ಕೂಡ ಮುಂದುವರೆಯಲಿದೆ. ಕೆಲವರು ತಮ್ಮ ಕೂದಲನ್ನು ಬೆಳೆಸುತ್ತಿದ್ದರೆ, ಮತ್ತೆ ಕೆಲವರು ತಮ್ಮ ಉಗುರುಗಳನ್ನು ಬೆಳೆಸುತ್ತಿದ್ದಾರೆ. ಕೆಲವರು ಉದ್ದನೆಯ ಗಡ್ಡವನ್ನು ಇಟ್ಟುಕೊಂಡಿದ್ದರೆ, ಮತ್ತೆ ಕೆಲವರು ಹೆಚ್ಚು ತೂಕವನ್ನು ಎತ್ತಿದ್ದಾರೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ವ್ಯಕ್ತಿ ಗರಿಷ್ಠ ಸಂಖ್ಯೆಯ ಮದುವೆಗಳನ್ನು ಮಾಡಿಕೊಂಡ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾನೆ. ಹೌದು! ಇದು ಸತ್ಯ.

ಈ ವ್ಯಕ್ತಿ 100ಕ್ಕೂ ಹೆಚ್ಚು ಮಹಿಳೆಯರನ್ನು ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾನೆ. ಈತ  1949 ಮತ್ತು 1981 ರ ನಡುವೆ ಈ ಮಹಿಳೆಯರನ್ನು ವಿವಾಹವಾಗಿದ್ದಾನೆ ಮತ್ತು ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ, ಈ ವ್ಯಕ್ತಿಯು ಇಷ್ಟು ಮದುವೆಗಳನ್ನು ಮಾಡಿಕೊಂಡಿದ್ದರೂ ಸಹ ಯಾರೊಬ್ಬರಿಗೆ ವಿಚ್ಛೇದನ ನೀಡಿಲ್ಲ. ಹೀಗಾಗಿ ಈತ ಗರಿಷ್ಠ ಸಂಖ್ಯೆಯ ವಿವಾಹಗಳ ದಾಖಲೆಯನ್ನು ಹೊಂದಿದ್ದಾರೆ.

ಟ್ವೀಟ್ ಹಂಚಿಕೊಂಡ ಗಿನ್ನೆಸ್ ಬುಕ್ 
ಇದರ ವಿಡಿಯೋವನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಈ ವ್ಯಕ್ತಿಯ ಹೆಸರು ಜಿಯೋವಾನಿ ವಿಗ್ಲಿಯೊಟೊ. ಇದು ಆತನ ನಿಜವಾದ ಹೆಸರಲ್ಲ ಎನ್ನಲಾಗಿದೆ. ಅವನು ತನ್ನ ಕೊನೆಯ ಪತ್ನಿಯೊಂದಿಗಿನ  ಮದುವೆಯ ಸಮಯದಲ್ಲಿ ಅದೇ ಹೆಸರನ್ನು ಬಳಸಿದ್ದನು ಎನ್ನಲಾಗಿದೆ.

ಈತ 53 ನೇ ವಯಸ್ಸಿನಲ್ಲಿ ಸಿಕ್ಕಿಬಿದ್ದಿದ್ದಾನೆ. 3 ಏಪ್ರಿಲ್ 1929 ರಂದು ಈತ ಇಟಲಿಯ ಸಿಸಿಲಿಯಲ್ಲಿ ಜನಿಸಿದ್ದನು ಎನ್ನಲಾಗುತ್ತದೆ.  ಆ ಸಮಯದಲ್ಲಿ ಆತ ತನ್ನ  ಹೆಸರನ್ನು ನಿಕೊಲಾಯ್ ಪೆರುಸ್ಕೋವ್ ಎಂದು ಹೇಳಿದ್ದನು. ಆದರೆ ಪ್ರಾಸಿಕ್ಯೂಟರ್ ನಂತರ ಅವರ ನಿಜವಾದ ಹೆಸರು ಫ್ರೆಡ್ ಜಿಪ್ ಮತ್ತು ಆತ  ಏಪ್ರಿಲ್ 3, 1936 ರಂದು ನ್ಯೂಯಾರ್ಕ್‌ನಲ್ಲಿ ಜನಿಸಿದ್ದನು ಎಂದು ಹೇಳಿದೆ.

104-105 ಮಹಿಳೆಯರ ಜೊತೆಗೆ ವಿವಾಹ
1949 ಮತ್ತು 1981 ರ ನಡುವೆ, ವಿಗ್ಲಿಯೊಟೊ ಎಂಬ ಈ ವ್ಯಕ್ತಿ 105-105 ಮಹಿಳೆಯರನ್ನು ವಿವಾಹವಾಗಿದ್ದಾನೆ. ಆಶ್ಚರ್ಯವೆಂದರೆ ಈ ಮಹಿಳೆಯರಿಗೆ ಪರಸ್ಪರ  ಪರಿಚಯವಿರಲಿಲ್ಲ. ಅಷ್ಟೇ ಅಲ್ಲ, ವಿಗ್ಲಿಯೊಟೊ ಬಗ್ಗೆಯೂ ಅವರಿಗೆ ಹೆಚ್ಚು ಗೊತ್ತಿರಲಿಲ್ಲ. ಮಾಹಿತಿಯ ಪ್ರಕಾರ, ಈ ವ್ಯಕ್ತಿ 14 ದೇಶಗಳು ಮತ್ತು ಅಮೆರಿಕದ 27 ವಿವಿಧ ರಾಜ್ಯಗಳಲ್ಲಿ ಮದುವೆಗಳನ್ನು ಮಾಡಿಕೊಂಡಿದ್ದಾನೆ. ಈ ಮಹಿಳೆಯರಿಗೆ ನಕಲಿ ಗುರುತಿನ ಚೀಟಿ ನೀಡಿ ಅವರನ್ನು ಬಲೆಗೆ ಬೀಳಿಸುತ್ತಿದ್ದ ಎನ್ನಲಾಗಿದೆ.

ಮೊದಲ ಡೇಟ್ ನಲ್ಲಿಯೇ ಪ್ರಪೋಜ್ ಮಾಡುತ್ತಿದ್ದ
ವಿಗ್ಲಿಯೊಟೊ ಈ ಮಹಿಳೆಯರನ್ನು ಚೋರ್ ಬಜಾರ್‌ನಲ್ಲಿ ಭೇಟಿಯಾಗುತ್ತಿದ್ದ. ಮೊದಲ ಡೇಟ್ ನಲ್ಲಿಯೇ ಆತ ಆ ಮಹಿಳೆಯರಿಗೆ  ಮದುವೆಗೆ ಪ್ರಸ್ತಾಪಿಸುತ್ತಿದ್ದರು. ಬಳಿಕ ಅವರ ಬಳಿ ಇದ್ದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್ ಪ್ರಕಾರ, ವಿಗ್ಲಿಯೊಟೊ ತನ್ನ ಮನೆ ದೂರದಲ್ಲಿದೆ ಎಂದು ಮಹಿಳೆಯರಿಗೆ ಆಗಾಗ್ಗೆ ಹೇಳುತ್ತಿದ್ದ, ಆದ್ದರಿಂದ ಅವರು ತಮ್ಮ ಎಲ್ಲಾ ವಸ್ತುಗಳನ್ನು ಅವನ ಬಳಿಗೆ ತರಬೇಕು ಎಂಬ ಕಂಡಿಶನ್ ಹಾಕುತ್ತಿದ್ದ ಎನ್ನಲಾಗಿದೆ. ಇದಾದ ನಂತರ ಮಹಿಳೆಯರ ಸಾಮಾನುಗಳನ್ನು ಪ್ಯಾಕ್ ಮಾಡುತ್ತಿದ್ದು, ಲಾರಿಯಲ್ಲಿ ಸಾಮಾನುಗಳನ್ನು ಹಾಕಿಕೊಂಡು ಪರಾರಿಯಾಗುತ್ತಿದ್ದ. ಇದಾದ ಬಳಿಕ ಆತನ ಹೆಸರು ಪತ್ತೆಯಾಗುತ್ತಿರಲಿಲ್ಲ. ಕಳ್ಳ ಮಾರುಕಟ್ಟೆಯಲ್ಲಿ ಸಾಮಾನುಗಳನ್ನು ಮಾರಿ ತನ್ನ ಮುಂದಿನ ಹೆಂಡತಿಗಾಗಿ ಹುಡುಕಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಹಲವು ಬಾರಿ ದೂರು ನೀಡಿದರೂ ತಲೆಮರೆಸಿಕೊಂಡಿದ್ದ.

ಸಿಕ್ಕಿ ಬಿದ್ದಾಗ…
ಅವನ ಬಲೆಗೆ ಬಿದ್ದ ಕೊನೆಯ ಮಹಿಳೆ ಆತನನ್ನು ಫ್ಲೋರಿಡಾದಲ್ಲಿ ಹಿಡಿದಿದ್ದಳು. ಶರೋನ್ ಕ್ಲಾರ್ಕ್ ಎಂಬ ಮಹಿಳೆ ಇಂಡಿಯಾನಾದ ಥೀವ್ಸ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ವಿಗ್ಲಿಯೊಟ್ಟೊವನ್ನು 28 ಡಿಸೆಂಬರ್ 1981 ರಂದು ಬಂಧಿಸಲಾಗಿದೆ. ಅವರ ವಿರುದ್ಧದ ವಿಚಾರಣೆಯು ಜನವರಿ 1983 ರಲ್ಲಿ ಪ್ರಾರಂಭವಾಯಿತು, ಇದರಲ್ಲಿ ಅವರಿಗೆ 34 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇದಲ್ಲದೇ $336,000 ದಂಡವನ್ನೂ ಸಹ ವಿಧಿಸಲಾಗಿದೆ. ಆತ ತನ್ನ  ಜೀವನದ ಕೊನೆಯ 8 ವರ್ಷಗಳನ್ನು ಅರಿಜೋನಾದ ಜೈಲಿನಲ್ಲಿ ಕಳೆದಿದ್ದಾನೆ ಮತ್ತು 1991 ರಲ್ಲಿ ತನ್ನ 61 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಎನ್ನಲಾಗುತ್ತದೆ.

Source: https://zeenews.india.com/kannada/world/fraude-man-who-married-more-than-100-women-in-32-years-hold-guinness-world-records-in-his-name-127493

Leave a Reply

Your email address will not be published. Required fields are marked *