RCB Playing XI vs DC: ಇಂದು ವನಿಂದು ಹಸರಂಗ ಕಣಕ್ಕೆ: ಆರ್​ಸಿಬಿ ತಂಡದ ಪ್ಲೇಯಿಂಗ್ XI ನಲ್ಲಿ ದೊಡ್ಡ ಬದಲಾವಣೆ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಭರ್ಜರಿ ಶುಭಾರಂಭ ಮಾಡಿದ್ದ ಫಾಪ್ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಂತರ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿತು.ಇದೀಗ ಹ್ಯಾಟ್ರಿಕ್ ಸೋಲಿನಿಂದ ತಪ್ಪಿಸಿಕೊಳ್ಳಲು ಆರ್​ಸಿಬಿ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡೇವಿಡ್ ವಾರ್ನರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.ಕಳೆದ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಸೋಲಲು ಮುಖ್ಯ ಕಾರಣ ಬೌಲರ್​ಗಳು. ಮೊಹಮ್ಮದ್ ಸಿರಾಜ್ ಮತ್ತು ಡೇವಿಡ್ ವಿಲ್ಲೆ ಬಿಟ್ಟರೆ ಉಳಿದ ಬೌಲರ್​ಗಳು ದಾರಾಳವಾಗಿ ರನ್ ಬಿಟ್ಟುಕೊಡುತ್ತಿದ್ದಾರೆ. ಹೀಗಾಗಿ ಇಂದಿನ ಪಂದ್ಯದ ಆರ್​ಸಿಬಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಖಚಿತ.ಮುಖ್ಯವಾಗಿ ವನಿಂದು ಹಸರಂಗ ಕೆಲ ದಿನಗಳ ಹಿಂದೆ ಆರ್​ಸಿಬಿ ಕ್ಯಾಂಪ್ ಸೇರಿದ್ದು ಇಂದು ಪ್ಲೇಯಿಂಗ್ XI ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾದಲ್ಲಿ ಹಿಂದಿನ ಪಂದ್ಯದಲ್ಲಿ ಆಡಿದ ಓರ್ವ ವಿದೇಶಿ ಆಟಗಾರ ಬೆಂಚ್ ಕಾಯಬೇಕು.ಡೇವಿಡ್ ವಿಲ್ಲೆ ಅಥವಾ ವೇಯ್ನ್ ಪಾರ್ನೆಲ್ ಪೈಕಿ ಒಬ್ಬರನ್ನು ಇಂದಿನ ಪಂದ್ಯದಿಂದ ಹೊರಗಿಡಬೇಕು. ಪಾರ್ನೆಲ್ ಚೊಚ್ಚಲ ಪಂದ್ಯದಲ್ಲಿ 3 ವಿಕೆಟ್ ಪಡೆದುಕೊಂಡಿದ್ದರು. ಆದರೆ, 41 ರನ್ ನೀಡಿದ್ದರು. ಇತ್ತ ವಿಲ್ಲೆ ವಿಕೆಟ್ ಪಡೆದುಕೊಂಡಿಲ್ಲವಾದರೂ ಕಂಟ್ರೊಲ್ ಮಾಡಿದ್ದರು.ಹೀಗಾಗಿ ವಿಲ್ಲೆ ಅಥವಾ ಪಾರ್ನೆಲ್ ಪೈಕಿ ಯಾರನ್ನು ಹೊರಬಿಡಬೇಕು ಎಂಬುದು ನಾಯಕ ಫಾಫ್ ಡುಪ್ಲೆಸಿಸ್​ಗೆ ತಲೆನೋವಾಗಿದೆ. ಡೆಲ್ಲಿ ವಿರುದ್ಧದ ಪಂದ್ಯಕ್ಕೆ ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ನೋಡುವುದಾದರೆ...ಆರ್​ಸಿಬಿ ಪರ ಓಪನರ್​ಗಳಾಗಿ ಎಂದಿನಂತೆ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಪ್ ಡುಪ್ಲೆಸಿಸ್ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರೋರ್ ಆಡಲಿದ್ದಾರೆ.ನಾಲ್ಕನೇ ಸ್ಥಾನಕ್ಕೆ ಹೇಳಿ ಮಾಡಿಸಿದ ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್​ವೆಲ್ ಇದ್ದರೆ ನಂತರದಲ್ಲಿ ಶಹ್ಬಾಜ್ ಅಹ್ಮದ್ ಆಡಲಿದ್ದಾರೆ. ಫಿನಿಶಿಂಗ್ ಜವಾಬ್ದಾರಿ ದಿನೇಶ್ ಕಾರ್ತಿಕ್ ವಹಿಸಲಿದ್ದಾರೆ. ಅನುಜ್ ರಾವತ್ ಕೂಡ ಪ್ಲೇಯಿಂಗ್ ಇಲೆವೆನ್​ನಲ್ಲಿ ಕಾಣಿಸಿಕೊಳ್ಳಬಹುದು.ಲಯದಲ್ಲಿರುವ ಡೇವಿಡ್ ವಿಲ್ಲೆ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವನಿಂದು ಹಸರಂಗ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ. ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ಪ್ರಮುಖ ವೇಗಿಗಳಿದ್ದಾರೆ.ಆರ್​ಸಿಬಿ ಸಂಭಾವ್ಯ ಪ್ಲೇಯಿಂಗ್ 11: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೋಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹಮದ್, ದಿನೇಶ್ ಕಾರ್ತಿಕ್ (ನಾಯಕ), ಅನುಜ್ ರಾವತ್, ಡೇವಿಡ್ ವಿಲ್ಲೆ, ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್.

source https://tv9kannada.com/photo-gallery/cricket-photos/wanindu-hasaranga-returns-the-biggest-change-will-be-the-rcb-playing-xi-for-delhi-capitals-ipl-2023-match-vb-au48-556403.html

Leave a Reply

Your email address will not be published. Required fields are marked *