Vivrant Sharma: 2.6 ಕೋಟಿಗೆ ಸೇಲ್ ಆದ ಜಮ್ಮುಕಾಶ್ಮೀರ ಆಲ್ರೌಂಡರ್ ವಿವ್ರಂತ್ ಶರ್ಮಾ

Vivrant Sharma is SOLD Sunrisers Hyderabad to INR 2.6 Crore IPL Auction 2023 News in Kannada

ಇಂಡಿಯನ್ ಪ್ರೀಮಿಯರ್‌ ಲೀಗ್‌ (IPL 2023) ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿವೆ. ವಿದೇಶಿ ಪ್ಲೇಯರ್​ಗಳು ದಾಖಲೆಯ ಮೊತ್ತಕ್ಕೆ ಸೇಲ್ ಆಗುತ್ತಿದ್ದಾರೆ. ಇದರ ನಡುವೆ ಜಮ್ಮು-ಕಾಶ್ಮೀರ ಆಲ್ರೌಂಡರ್ ವಿವ್ರಂತ್ ಶರ್ಮಾ (Vivrant Sharma) ಅವರು ಅಚ್ಚರಿಯ ಮೊತ್ತಕ್ಕೆ ಹರಾಜಾಗಿದ್ದಾರೆ. 20 ಲಕ್ಷ ಮೂಲಬೆಲೆ ಹೊಂದಿದ್ದ ವಿವ್ರಂತ್ ಅವರನ್ನು ಸನ್​ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ 2.6 ಕೋಟಿ ಕೊಟ್ಟು ಖರೀದಿ ಮಾಡಿದೆ. ಉಪೇಂದ್ರ ಯಾದವ್ (Upendra Yadav) ಅವರನ್ನು 25 ಲಕ್ಷಕ್ಕೆ ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಶ್ರೀಕರ್ ಭರತ್ 1.20 ಕೋಟಿಗೆ ಗುಜರಾತ್ ಪಾಲಾದರು. ಅನ್​ಮೋಲ್ ಪ್ರೀತ್ ಸಿಂಗ್, ಹಿಮ್ಮತ್ ಸಿಂಗ್, ಪ್ರಿಯಂ ಗರ್ಗ್, ಸೌರಭ್ ಕುಮಾರ್, ಅಭಿಮನ್ಯು ಈಶ್ವರನ್, ಮೊಹಮ್ಮದ್ ಅಜರುದ್ದೀನ್ ಅನ್​ಸೋಲ್ಡ್ ಆದರು.

ಇನ್ನು ವೆಸ್ಟ್ ಇಂಡೀಸ್ ವಿಕೆಟ್ ಕೀಪರ್, ಸ್ಪೋಟಕ ಬ್ಯಾಟರ್ ನಿಕೋಲಸ್ ಪೂರನ್ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ. 2 ಕೋಟಿ ಮೂಲಬೆಲೆ ಹೊಂದಿದ್ದ ಪೂರನ್ ಖರೀದಿಗೆ ಕಠಿಣ ಪೈಪೋಟಿ ನಡೆದವು. ಲಕ್ನೋ ಸೂಪರ್ ಜೇಂಟ್ಸ್ ಕೊನೆಯವರೆಗೂ ಕೈಬಿಡದೆ ಬರೋಬ್ಬರಿ 16 ಕೋಟಿಗೆ ಖರೀದಿ ಮಾಡಿದೆ. ಪೂರನ್ ಸದ್ಯ ಕಳಪೆ ಫಾರ್ಮ್​​ನಿಂದ ಬಳಲುತ್ತಿದ್ದಾರೆ. ಟಿ20 ವಿಶ್ವಕಪ್​ನಲ್ಲೂ ಉತ್ತಮ ಪ್ರದರ್ಶನ ತೋರಲಿಲ್ಲ. ಹೀಗಾಗಿ ವೆಸ್ಟ್ ಇಂಡೀಸ್ ನಾಯಕತ್ವದಿಂದಲೂ ಕೆಳಗಿಳಿದಿದ್ದರು. ಹೀಗಿದ್ದರೂ ಇವರು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರುವುದು ಅಚ್ಚರಿ ನೀಡಿದೆ.

ಆರ್​ಸಿಬಿ ತೆಕ್ಕೆಗೆ ರೀಸ್ ಟೋಪ್ಲಿ:

ಮೊದಲ 3 ಸುತ್ತಿನಲ್ಲಿ ಯಾವುದೇ ಆಟಗಾರರನ್ನು ಖರೀದಿಸದ ಆರ್​ಸಿಬಿ 4ನೇ ಸುತ್ತಿನಲ್ಲಿ ಇಂಗ್ಲೆಂಡ್ ವೇಗಿ ರೀಸ್ ಟೋಪ್ಲಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 75 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ರೀಸ್ ಟೋಪ್ಲಿ ಖರೀದಿಗಾಗಿ ಮುಂಬೈ ಇಂಡಿಯನ್ಸ್​, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ ಆರ್​ಸಿಬಿ ತಂಡವು 1 ಕೋಟಿ 90 ಲಕ್ಷ ರೂ. ನೀಡಿ ಖರೀದಿಸಿದೆ.

ಕುರ್ರನ್ ಖರೀದಿಗೆ ಮುಗಿಬಿದ್ದ ಫ್ರಾಂಚೈಸಿಗಳು:

ಐಪಿಎಲ್ 2023 ಮಿನಿ ಹರಾಜಿನಲ್ಲಿ 2 ಕೋಟಿ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಯಾಮ್ ಕುರ್ರನ್ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್​, ಎಸ್​ಆರ್​​ಹೆಚ್​, ಮುಂಬೈ ಇಂಡಿಯನ್ಸ್​ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಭರ್ಜರಿ ಪೈಪೋಟಿ ಕಂಡು ಬಂತು. ಆದರೆ, ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ. ನೀಡುವ ಮೂಲಕ ಸ್ಯಾಮ್ ಕುರ್ರನ್ ಅವರನ್ನು ತಮ್ಮದಾಗಿಸಿಕೊಂಡಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ದಾಖಲೆ ಸ್ಯಾಮ್ ಪಾಲಾಗಿದೆ. ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಎಲ್​ಎಸ್​ಜಿ ದಾಖಲೆಯ 16.25 ಕೋಟಿ ಮೊತ್ತಕ್ಕೆ ಪಡೆದುಕೊಂಡಿದೆ. ಇದರ ನಡುವೆ ಆಸ್ಟ್ರೇಲಿಯಾದ ಕ್ಯಾಮ್ರೊನ್ ಗ್ರೀನ್ 17.5 ಕೋಟಿ ನೀಡಿ ಮುಂಬೈ ಇಂಡಿಯನ್ಸ್ ಖರೀದಿಸಿದೆ.

ಐಪಿಎಲ್​ ಮಿನಿಹರಾಜು ಪ್ರಕ್ರಿಯೆ ಲೈವ್​

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/vivrant-sharma-is-sold-sunrisers-hyderabad-to-inr-2-6-crore-ipl-auction-2023-news-in-kannada-vb-au48-489845.html

Leave a Reply

Your email address will not be published. Required fields are marked *